Advertisement
ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡಲು ಎಲ್ಲರಿಗೂ ಅವಕಾಶವಿದೆ. ಆದರೆ ಯಾವ ವಿಷಯಕ್ಕೆ, ಯಾವ ಸಂದರ್ಭದಲ್ಲಿ ಮತ್ತು ಯಾಕೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂಬುದು ಮುಖ್ಯ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುವುದೇ ತಪ್ಪು ಎಂದರೆ ಹೇಗೆ? ಈ ಹಿಂದೆ ಪ್ರಧಾನಿ ಆಗಿದ್ದವರು ವಿಚಾರಣೆ ಎದುರಿಸಿದ್ದಾರೆ. ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ವಿಚಾರಣೆಗೆ ಹಾಜರಾಗಿದ್ದಾಗ ಇವರು ಎಲ್ಲಿ ಹೋಗಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
Related Articles
Advertisement
ಜನರಿಗೆ ತೊಂದರೆ ಕೊಟ್ಟು ಮಾಡುವ ಸಾಧನೆಯೇನು?ದೇಶದಲ್ಲಿ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿದೆ ಇಂತಹ ಸಂದರ್ಭದಲ್ಲಿ ಬೀದಿ ಬೀದಿಯಲ್ಲಿ ಪ್ರತಿಭಟನೆ ಮಾಡಿ, ಸಂಚಾರಕ್ಕೆ ಅಡಚಣೆ ಮಾಡಿ, ಜನರಿಗೆ ತೊಂದರೆ ಕೊಟ್ಟು ಏನು ಸಾಧನೆ ಮಾಡಲು ಹೊರಟಿದ್ದಾರೆ. ಕಾನೂನು ಒಬ್ಬರಿಗೊಂದು, ಮತ್ತೂಬ್ಬರಿಗೆ ಇನ್ನೊಂದು ಇರಬೇಕಾ, ಸಮಾನತೆ ಬಗ್ಗೆ, ಸಾಮಾಜಿಕ ನ್ಯಾಯ, ಸಂವಿಧಾನದ ಬಗ್ಗೆ ಉಪದೇಶ ನೀಡುವ ಇವರು ಇದ್ಯಾವುದಕ್ಕೂ ಬೆಲೆ ಕೊಡದಿದ್ದರೆ ಸರ್ಕಾರಗಳು ಏನು ಮಾಡಬೇಕು ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಪ್ರಶ್ನಿಸಿದರು. ಪ್ರತಿಭಟನೆ ನಡೆಸುತ್ತಿರುವ ನಾಯಕರೇ ಆತ್ಮವಿಮರ್ಶೆ ಮಾಡಿಕೊಳ್ಳಲಿ, ದೆಹಲಿಯಿಂದ ಬೆಂಗಳೂರಿನವರೆಗೂ ಅವರು ನಡೆಸಿರುವ ಪ್ರಹಸನವನ್ನು ರಾಜ್ಯದ ಜನರು ಗಮನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜನರೇ ಅವರ ತೀರ್ಮಾನ ನೀಡುತ್ತಾರೆ.
● ಡಾ. ಕೆ. ಸುಧಾಕರ್, ಆರೋಗ್ಯ ಸಚಿವ