Advertisement
ಸಂಸ್ಥೆಯ ಲಾಭ-ನಷ್ಟಕ್ಕಿಂತ ಸಿಬ್ಬಂದಿ ಹಾಗೂ ಪ್ರಯಾಣಿಕರ ಸುರಕ್ಷತೆ ನಮಗೆ ಅತ್ಯಂತ ಮುಖ್ಯ. ಈ ಹಿನ್ನೆಲೆಯಲ್ಲಿ ಕೇವಲ ಮಾಸ್ಕ್ ಮತ್ತು ಸಾಮಾಜಿಕ ಅಂತರವಲ್ಲದೆ ಬಿಎಂಟಿಸಿ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ನಿರ್ವಾಹಕರಿಗೆ ಮಾಸ್ಕ್ ಜತೆಗೆ ವೈಸರ್‌ಗಳನ್ನು ವಿತರಿಸಲಾಗಿದೆ. ಜತೆಗೆ ಪ್ರಾಯೋಗಿಕವಾಗಿ 75 ಬಸ್ ಗಳಲ್ಲಿ ಕ್ಯುಆರ್ ಕೋಡ್ ಆಧಾರಿತ ಟಿಕೆಟ್ ವಿತರಣೆ ವ್ಯವಸ್ಥೆ ಕಲ್ಪಿಸಲಾಗಿದೆ. ಇದನ್ನು ಮುಂದಿನ ವಾರಗಳಲ್ಲಿ ಹಂತ-ಹಂತ ವಾಗಿ ಉಳಿದ ಬಸ್‌ಗಳಿಗೂ ವಿತರಿಸುವ ಚಿಂತನೆ ಇದೆ. ಬುಧವಾರ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಸೆನ್ಸರ್ ಆಧಾರಿತ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರು ಬರುತ್ತಿಲ್ಲ ಎಂಬುದಕ್ಕೆ ಕೇವಲ ಜನರಲ್ಲಿ ಆವರಿಸಿರುವ ಭೀತಿ ಕಾರಣವಲ್ಲ; ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಎಷ್ಟೋ ಕಾರ್ಮಿಕರು ವಾಪಸ್ ಊರುಗಳಿಗೆ ತೆರಳಿದ್ದಾರೆ. ಕೆಲವರಿಗೆ ಈಗಲೂ ವರ್ಕ್ ಫ್ರಮ್ ಹೋಂ ಮುಂದುವರಿ ದಿದೆ. ನಿಧಾನವಾಗಿ ಬಸ್‌ಗಳ ಕಾರ್ಯಾಚರಣೆ ಸಂಖ್ಯೆ ಹೆಚ್ಚಿಸಲಾಗು ತ್ತಿದೆ. ಮಂಗಳವಾರ 2000 ಬಸ್‌ಗಳು ರಸ್ತೆಗಿಳಿದಿದ್ದವು. ಬುಧವಾರ 2,200ಕ್ಕೆ ಏರಿಕೆಯಾಗಿದ್ದು, ಗುರುವಾರ ಇನ್ನೂ 500 ಬಸ್‌ಗಳು ಓಡಾಡಲಿವೆ. ಸಹಜ ಸ್ಥಿತಿ ನಿರೀಕ್ಷೆ ಇದೆ.-ಸಿ. ಶಿಖಾ, ವ್ಯವಸ್ಥಾಪಕ ನಿರ್ದೇಶಕರು, ಬಿಎಂಟಿಸಿ
-ಭಾಸ್ಕರ್ ರಾವ್, ನಗರ ಪೊಲೀಸ್ ಆಯುಕ್ತರು ರಾಜ್ಯದ ಆರ್ಥಿಕ ಎಂಜಿನ್‌ನ ಮೂಲ ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳು. ಸರಿಸುಮಾರು 6.50 ಲಕ್ಷ ಈ ಮಾದರಿಯ ಕೈಗಾರಿಕೆಗಳಿದ್ದು, 60-65 ಲಕ್ಷ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತಿ ಹಂತದಲ್ಲೂ ಆ ಎಲ್ಲ ಕಾರ್ಮಿಕರ ಆರೋಗ್ಯದ ಮೇಲೆ ನಿಗಾ ಇಡಲಾಗುತ್ತಿದೆ. ಯಾಕೆಂದರೆ, ಈಗಾಗಲೇ ಸುದೀರ್ಘಲಾಕ್‌ಡೌನ್‌ನಿಂದ ಉದ್ಯಮಿಗಳು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಹಾಗಾಗಿ, ನನ್ನ ಪ್ರಕಾರ ಕಾರ್ಮಿಕರ ಆರೋಗ್ಯದ ಮೇಲೆ ಈಗ ಕೈಗಾರಿಕೆ ಮಾಲಿಕರಿಗೇ ಹೆಚ್ಚು ಹೊಣೆಗಾರಿಕೆ ಇದೆ. ಈ ಹಿನ್ನೆಲೆಯಲ್ಲಿ ಕೆಲಸಕ್ಕೆ ಬರುವ ಕಾರ್ಮಿಕರಿಗೆ ಥರ್ಮಲ್ ಸ್ಕ್ರೀನಿಂಗ್, ಮಾಸ್ಕ್ ಕಡ್ಡಾಯ, ಊಟದ ವ್ಯವಸ್ಥೆ ಮತ್ತಿತರ ಕ್ರಮ ಕೈಗೊಳ್ಳಲಾಗಿದೆ.
-ಆರ್. ರಾಜು, ಅಧ್ಯಕ್ಷರು, ಕಾಸಿಯಾ
Related Articles
-ಸಿ.ಆರ್. ಜನಾರ್ದನ್, ಅಧ್ಯಕ್ಷರು, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ)
Advertisement
ಕೊರೊನಾ ತುರ್ತು ಸಂದರ್ಭದಲ್ಲಿ ಬಿಬಿಎಂಪಿ ಸಿಬ್ಬಂದಿ ಸಂಖ್ಯೆಯನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಆದರೆ, ತಂತ್ರಜ್ಞಾನ ಬಳಸಿಕೊಂಡು ಸಮಸ್ಯೆಗಳ ಪರಿಹಾರೋಪಾಯಗಳನ್ನು ಕೈಗೊಳ್ಳಲಾಗುತ್ತಿದೆ. ಸೋಂಕು ಹಿನ್ನೆಲೆಯಲ್ಲಿ ಬಿಬಿಎಂಪಿ ಕಚೇರಿಗಳಿಗೆ ಸಾರ್ವಜನಿಕರು ಬರುವುದನ್ನು ತಡೆಯುವ ನಿಟ್ಟಿನಲ್ಲಿ ಆಯಾ ಸ್ಥಳಕ್ಕೆ ಅಧಿಕಾರಿಗಳೇ ಭೇಟಿ ನೀಡಲಿದ್ದಾರೆ. ಬಿಬಿಎಂಪಿ ಸಹಾಯವಾಣಿ, ಆ್ಯಪ್‌ಗ್ಳ ಮೂಲಕ ಸ್ಪಂದಿಸಲಿದ್ದಾರೆ. ಬಿಬಿಎಂಪಿ ಆ್ಯಪ್‌ನ ಮೂಲಕ ತುರ್ತು ಪರಿಹಾರ, ದೂರುಗಳಿಗೆ ಸ್ಪಂದನೆ, ಸಂದೇಶ ರವಾನೆ, ಪೋನ್‌ಇನ್ ಕಾರ್ಯಕ್ರಮ, ವೆಬ್‌ಸೈಟ್ ಹಾಗೂ ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುವುದು.-ವಿ. ಅನ್ಬುಕುಮಾರ್, ಬಿಬಿಎಂಪಿ ಆಡಳಿತ ವಿಭಾಗದ ವಿಶೇಷ ಆಯುಕ್ತರು.