Advertisement
ಬಸ್ಸಿನಲ್ಲಿ 41 ಮಂದಿ ಪ್ರಯಾಣಿಕ ರಿದ್ದು,ಯಾರಿಗೂ ಗಾಯಗಳಾಗಿಲ್ಲ, ಅವರನ್ನು ಸ್ಥಳೀಯರ ಸಹಕಾರ ದೊಂದಿಗೆ ಹೊರಗೆ ಕರೆತರಲಾಗಿದೆ. ಚಿಕ್ಕಮಗಳೂರಿನಿಂದ- ಮೂಡಿಗೆರೆ- ಉಡುಪಿ ಮಾರ್ಗವಾಗಿ ಕುಂದಾಪುರಕ್ಕೆ ತೆರಳುತ್ತಿದ್ದ ಕುಂದಾಪುರ ಡಿಪೋಗೆ ಸೇರಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಚಾರ್ಮಾಡಿ ಕಳೆದು ಉಜಿರೆ ಕಡೆಗೆ ತೆರಳುತ್ತಿತ್ತು. ಮುಂಡಾಜೆ ಗ್ರಾಮದ ಸೀಟು ಬಳಿ ಓವರ್‌ಟೇಕ್ ಮಾಡಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಾರಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಬಸ್ ಚಾಲಕ ಬದಿಗೆ ಸರಿಸಿದ್ದಾನೆ. ಈ ವೇಳೆ ನಿಧಾನವಾಗಿ ರಸ್ತೆ ಬದಿಗೆ ಸರಿದಿದ್ದು, ನಿಯಂತ್ರಣ ತಪ್ಪಿ ಉರುಳಿ ಸಣ್ಣ ಚರಂಡಿಗೆ ಬಿದ್ದಿದೆ. ಬಸ್ ನಿಧಾನ ಗತಿಯಲ್ಲಿದ್ದುದರಿಂದ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ. ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಯಿತು. ಬಸ್ ಚಾಲಕ ಬದಿಗೆ ಸರಿಸದಿದ್ದಲ್ಲಿ ಅಪಘಾತ ಸಂಭವಿಸುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸುಮಾರು 15 ನಿಮಿಷಗಳ ಕಾಲ ಸಂಚಾರಕ್ಕೆ ತಡೆ ಉಂಟಾಯಿತು. ಬಸ್ಸನ್ನು ಧರ್ಮಸ್ಥಳ ಡಿಪೋಗೆ ಸಾಗಿಸಲಾಯಿತು. ಈ ಬಗ್ಗೆ ಪ್ರಕರಣ ದಾಖಲಾಗಿಲ್ಲ.