Advertisement
ನವೆಂಬರ್ 9ರಿಂದ 12ರ ತನಕ ರೊಜಾರಿಯೋ ಕೆಥೆಡ್ರಲ್ ಮೈದಾನ ದಲ್ಲಿ ನಡೆಯಲಿರುವ ಈ ಕಾರ್ಯ ಕ್ರಮದಲ್ಲಿ ಕರ್ನಾಟಕದ 14 ಧರ್ಮ ಪ್ರಾಂತಗಳ 500 ಮಂದಿಗೆ ತರಬೇತಿ ನೀಡಲಾಗುವುದು. ಸಂಜೆ 4ರಿಂದ 8ರ ತನಕ ಧ್ಯಾನ ಕೂಟ ಜರಗಲಿದ್ದು, ದಿನಂಪ್ರತಿ ಸುಮಾರು 10,000 ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ರಾಜ್ಯದ ಎಲ್ಲ ಬಿಷಪರು ಪಾಲ್ಗೊಳ್ಳುವರು ಎಂದು ಬಿಷಪ್ ರೈ| ರೆ| ಡಾ| ಅಲೋಶಿಯಸ್ ಪಾವ್É ಡಿ’ಸೋಜಾ ತಿಳಿಸಿದರು.
ಆಧ್ಯಾತ್ಮಿಕ ನವೀಕರಣ ಬಯ ಸುವ ಕ್ರೈಸ್ತರಿಗೆ ಈ ಧ್ಯಾನ ಕೂಟ ಸಹಾ ಯಕ ವಾಗಲಿದೆ. ದೇವರ ಪ್ರೀತಿಗೆ ಪಾತ್ರ ವಾಗಲು, ಬದುಕಿನಲ್ಲಿ ನೆಮ್ಮದಿ ಮತ್ತು ಶಾಂತಿಯನ್ನು ಪಡೆದು ಆರೋಗ್ಯಪೂರ್ಣ ಜೀವನ ನಡೆಸಲು ಇದು ಪೂರಕವಾಗಲಿದೆ ಎಂದು ಹೇಳಿದ ಬಿಷಪ್ ಈ ಧ್ಯಾನ ಕೂಟದ ಮೂಲಕ ಕುಟುಂಬದಲ್ಲಿ, ಸಮಾಜದಲ್ಲಿ, ಪರಿಸರದಲ್ಲಿ ಶಾಂತಿ ನೆಲೆಸಲಿ ಎಂದು ಶುಭ ಹಾರೈಸಿದರು. ಧ್ಯಾನಕೂಟ ಸಂಚಾಲಕ ಫಾ| ಒನಿಲ್ ಡಿ’ಸೋಜಾ ಪ್ರಸ್ತಾ ವನೆಗೈದು ಕಾರ್ಯಕ್ರಮದ ಯಶಸ್ಸಿಗೆ ಮಂಗಳೂರು ಧರ್ಮ ಪ್ರಾಂತದ ಎಲ್ಲ 117 ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಗಳು ಇಂದಿ ನಿಂದಲೇ ಆರಂಭವಾಗಿವೆ ಎಂದರು.
Related Articles
Advertisement