Advertisement
ಪ್ರತೀ ಸೋಮವಾರ ಶ್ರೀ ಕ್ಷೇತ್ರದಲ್ಲಿ ಅನ್ನಸಂತರ್ಪಣೆಯು ನಡೆಯುತ್ತಿದ್ದು, ಸುಮಾರು 250ರಷ್ಟು ಭಕ್ತರು ಅನ್ನಪ್ರಸಾದ ಸ್ವೀಕರಿಸುತ್ತಾರೆ. ಆದರೆ ಪ್ರಧಾನಿ ಮೋದಿ ಅವರ ಜನ್ಮನಕ್ಷತ್ರ ದಿನದ ಸೇವೆಯಲ್ಲಿ ಸುಮಾರು 650ಕ್ಕೂ ಮಿಕ್ಕಿ ಭಕ್ತರು ಅನ್ನಪ್ರಸಾದವನ್ನು ಸ್ವೀಕರಿಸಿದರು.
ಚುನಾವಣೆ ತನಕ 2019ರ ಲೋಕಸಭಾ ಚುನಾವಣೆಯ ಅನಂತರವೂ ಮೋದಿ ಅವರೇ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಬೇಕೆಂಬ ಪ್ರಾರ್ಥನೆಯೊಂದಿಗೆ ಕಟಪಾಡಿ ವಿಶ್ವನಾಥ ಕ್ಷೇತ್ರದಲ್ಲಿ ಈ ವಿಶೇಷ ಸೇವೆಯು ಆರಂಭಗೊಂಡಿದೆ. ಲೋಕಸಭಾ ಚುನಾವಣೆಯ ತನಕವೂ ಮೋದಿ ಅವರ ಜನ್ಮ ನಕ್ಷತ್ರದಂದು ಕಾಪು ಕ್ಷೇತ್ರದಾದ್ಯಂತ ವಿವಿಧ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಸೇವೆಗಳು ನಡೆಯಲಿವೆ ಎಂದು ಬಿಜೆಪಿ ಕಾಪು ಕ್ಷೇತ್ರಾಧ್ಯಕ್ಷ ಕೆ. ಮುರಲೀಧರ ಪೈ ತಿಳಿಸಿದ್ದಾರೆ.