Advertisement
ಕಟಪಾಡಿಯಿಂದ ನಿಟ್ಟೂರುವರೆಗೆ ಸುಮಾರು 15 ಕಿ.ಮೀ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯಲಾಗಿದ್ದು, ಅವು ಕೊಳೆತು ಅಸಹ್ಯಕರ ವಾತಾವರಣ ಸೃಷ್ಟಿಯಾಗಿದೆ. ಹೆದ್ದಾರಿಯಲ್ಲಿ ಸಾಗುವಾಗೆಲ್ಲ ದುರ್ವಾಸನೆ ಮೂಗಿಗೆ ಬಡಿಯುತ್ತಿದೆ. ಇದೇ ಪರಿಸರದಲ್ಲಿ ವಾಸವಾಗಿರುವವರ ಗೋಳು ಹೇಳದ ಸ್ಥಿತಿಯಲ್ಲಿದೆ.
ನಿಟ್ಟೂರಿನಿಂದ- ಕಟಪಾಡಿ ವರೆಗೆ ಹಲವೆಡೆ ಸಣ್ಣ ತೋಡು ಹರಿಯುತ್ತಿದೆ. ಉದ್ಯಾವರ ಹೊಳೆ, ಇಂದ್ರಾಣಿ ನದಿ, ಸಣ್ಣಪುಟ್ಟ ಕಾಲುವೆಗಳು ತ್ಯಾಜ್ಯ ತುಂಬಿಕೊಂಡು ಕಲುಷಿತಗೊಂಡಿವೆ. ತ್ಯಾಜ್ಯ ಚೀಲಗಳು ತೋಡು, ಕಾಲುವೆಗಳಲ್ಲಿ ಸೇರಿಕೊಂಡು ಪರಿಸರ ಮಾಲಿನ್ಯಕ್ಕೆ ದೊಡ್ಡ ಕೊಡುಗೆ ನೀಡುತ್ತಿವೆ.
Related Articles
ಹೆದ್ದಾರಿ ಬದಿ ತ್ಯಾಜ್ಯ ತಂದು ಹಾಕುವುದರಿಂದ ಅದು ಕೊಳೆತು ದುರ್ವಾಸನೆ ಬರುತ್ತದೆ. ಗಾಳಿ ಬೀಸುವಾಗೆಲ್ಲ ಮೂಗು ಬಿಡಲು ಆಗುವುದಿಲ್ಲ. ರೋಗ ಬರುವುದಕ್ಕೂ ಇದು ಕಾರಣವಾಗುತ್ತಿದೆ.
– ಹೊನ್ನಮ್ಮ, ನಿಟ್ಟೂರು ನಿವಾಸಿ.
Advertisement
ಜಾನುವಾರುಗಳಿಗೆ ದುಷ್ಪರಿಣಾಮಇಲ್ಲಿ ಒಣ, ಹಸಿ ತ್ಯಾಜ್ಯ ಎರಡನ್ನೂ ಎಸೆಯಲಾಗುತಿದ್ದು ಜಾನುವಾರುಗಳು, ಬೀದಿ ನಾಯಿಗಳು ಈ ಆಹಾರವನ್ನು ಸೇವಿಸುತ್ತಿವೆ. ಇದರಿಂದ ಅವುಗಳ ಆರೋಗ್ಯದ ಮೇಲೂ ಪರಿಣಾಮ ಬೀರಲಿದೆ.