Advertisement

ಕಾಪು ಬೀಚ್‌ ಪಾರ್ಕಿಂಗ್ ಏರಿಯಾದಲ್ಲಿ ಕಾಣಿಸಿಕೊಂಡ ಉಡ; ದಂಗಾದ ಜನತೆ

08:00 PM Sep 29, 2020 | mahesh |

ಕಾಪು: ಮಂಗಳವಾರ ಮಧ್ಯಾಹ್ನ ಕಾಪು ಬೀಚ್‌ನ ಪಾರ್ಕಿಂಗ್ ಏರಿಯಾದಲ್ಲಿ ಉಡ (ಒಡು)ವೊಂದು ಅನಿರೀಕ್ಷಿತ ಎಂಬ ರೀತಿಯಲ್ಲಿ ಕಾಣಿಸಿಕೊಂಡಿದ್ದು, ಪಾರ್ಕಿಂಗ್ ಪ್ರದೇಶದ ಸುತ್ತೆಲ್ಲಾ ಸಂಚರಿಸಿ ಪಾರ್ಕಿಂಗ್ ಏರಿಯಾದ ಜನರನ್ನು ದಂಗಾಗುವಂತೆ ಮಾಡಿದೆ.

Advertisement

ಕಾಪು ಲೈಟ್ ಹೌಸ್ ನಿರ್ವಹಣಾ ಸಮಿತಿಯ ಸಿಬಂದಿ ಪ್ರಶಾಂತ್ ಕರ್ಕೇರ ಅವರು ಅರಣ್ಯ ಇಲಾಖೆಯ ಸಿಬಂದಿಗಳಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಆಗಮಿಸಿದ ಅರಣ್ಯ ರಕ್ಷಕ ಮಂಜುನಾಥ್, ಅಭಿಲಾಷ್ ಅವರು ಸ್ಥಳೀಯರಾದ ಶಿವಾನಂದ ಪೂಜಾರಿ, ನಿತೇಶ್ ಕುಮಾರ್, ಚಂದ್ರಶೇಖರ ಬಂಗೇರ, ವಿನೋದ್ ಶ್ರೀಯಾನ್, ಗಣೇಶ್, ಮಹಮ್ಮದ್ ಇಕ್ಬಾಲ್ ಮೊದಲಾದವರ ಸಹಕಾರದೊಂದಿಗೆ ಉಡವನ್ನು ಸೆರೆ ಹಿಡಿಯಲಾಗಿದೆ.

ವಲಯ ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೋ ಅವರ ಮಾರ್ಗದರ್ಶನದಲ್ಲಿ, ಕಾಪು ಉಪ ವಲಯ ಅರಣ್ಯಾಧಿಕಾರಿಗಳಾದ ಜೀವನ್‌ದಾಸ್ ಶೆಟ್ಟಿ, ಗುರುರಾಜ್ ಕೆ. ಅವರ ನೇತೃತ್ವದಲ್ಲಿ ಉಡವನ್ನು ವಶಕ್ಕೆ ಪಡೆದುಕೊಂಡು ಅರಣ್ಯ ಇಲಾಖೆಯ ಜೀಪಿನಲ್ಲಿ ಕೊಂಡೊಯ್ದು ಪಿಲಾರು ಅರಣ್ಯ ಪ್ರದೇಶದಲ್ಲಿ ಬಿಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next