1928ರಲ್ಲಿ ನಡೆದ ಗಲಭೆಯ ಸಂಬಂಧ ಮಾಧ್ಯಮಗಳು ಸರಕಾರದ ನಿಲುವಿನ ವಿರುದ್ಧ ಬೆಳಕು ಚೆಲ್ಲಿ ತಿ.ತಾ.ಶರ್ಮ ಮೊದಲಾದ ಸಂಪಾದಕರು ಜೈಲುವಾಸಿಗಳೂ ಆಗಿದ್ದರು. ಅನಂತರವೂ ಐತಿಹಾಸಿಕ ಘಟನೆಯಾಗಿ ಆಗಾಗ ಬೆಳಕು ಕಾಣುತ್ತಿತ್ತು. ಆದರೆ ಆ ಗಣಪತಿ ವಿಗ್ರಹ ಎಲ್ಲಿ ಹೋಯಿತು?, ಏನಾಯಿತು? ಎಂಬ ಬಗೆಗೆ ಇದುವರೆಗೆ ಎಲ್ಲೂ ಸ್ಪಷ್ಟ ಚಿತ್ರ ಕಂಡುಬಂದಿರಲಿಲ್ಲ. ಈ ಅಂಕಣಕ್ಕಾಗಿ ಅದರ ಬಗೆಗೆ ಪ್ರಯತ್ನಿಸಲಾಯಿತು. ಆಗಲೂ ಈ ಗಣಪತಿಯನ್ನು ವಿದ್ಯಾರ್ಥಿಗಳು ವಿದ್ಯಾಗಣಪತಿ ಎಂದು ಪೂಜಿಸುತ್ತಿದ್ದರು. ಈಗಲೂ ಅದೇ ಹೆಸರಿನಲ್ಲಿ ಸಣ್ಣ ಗುಡಿಯಲ್ಲಿ ಅದೇ ಸ್ಥಳದಲ್ಲಿ ಪೂಜೆಗೊಳ್ಳುತ್ತಿದೆ. ಗಣೇಶ ಚತುರ್ಥಿಯಂದು ವಿಶೇಷ ಪೂಜೆ ನಡೆಯುತ್ತದೆ.
Advertisement
ಸೆಪ್ಟಂಬರ್ 18-19ರಂದು ಗೌರಿ ಗಣೇಶ -ಗಣೇಶ ಚತುರ್ಥಿ ಹಬ್ಬ. ಗಣೇಶೋತ್ಸವ ಬಂತೆಂದರೆ ಎಷ್ಟು ಸಂಭ್ರಮ ಇರುತ್ತದೋ ಕೆಲವೆಡೆ ಸಂಭ್ರಮವನ್ನು ಮೀರಿಸುವ ಹಿಂಸಾಚಾರವೂ ನಡೆಯುತ್ತದೆ. 95 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಘಟನೆ ಮತ್ತು ಇದರ ಹಿಂದಿರುವ ಒಳನೋಟಗಳು ಇಂದಿನ ವರಿಗೂ, ಇಂತಹ ಘಟನೆ ನಡೆಯದಂತೆ ಕಣ್ಗಾವಲು ಇರಿಸುವ ಜವಾಬ್ದಾರಿಯುತ ಆಡಳಿತಾರೂಢರಿಗೂ ಕಣ್ಣು ತೆರೆಸುವಂಥದ್ದಾಗಿದೆ.
Related Articles
Advertisement
ವಿಚಾರಣ ಸಮಿತಿ ವರದಿ * ರಾಜ್ಯದಲ್ಲಿ ಅಧಿಕಾರಸೂತ್ರಗಳೆಲ್ಲ ಒಂದೇ ಕಡೆ ಕೇಂದ್ರೀಕೃತವಾಗಿದೆ. ಅಧಿಕಾರ ಚಲಾಯಿಸಬೇಕಾದ ಇಲಾಖೆಗಳ ಮುಖ್ಯಸ್ಥರು ತಮ್ಮ ಕೆಲಸ ನಡೆಸು ವುದರಲ್ಲಿ ಕೇಂದ್ರದ ಮುಖವನ್ನು ನೋಡುತ್ತಿರುತ್ತಾ ರೆಯೆ ಹೊರತು ನ್ಯಾಯವೇನು ಎಂಬುದನ್ನು ಸ್ವತಂತ್ರ ವಾಗಿ ವಿಚಾರ ಮಾಡುವುದಿಲ್ಲ.
* ಇಲಾಖೆಗಳ ಅಧಿಕಾರಸ್ಥರ ಕೈಕಟ್ಟಿ ಹೋಗಿ ಯಾವ ಹೊತ್ತಿನಲ್ಲಿ ಏನು ಆಗಬೇಕೋ ಆ ನ್ಯಾಯ ಪ್ರಯೋಗ ನಡೆಯುವುದಿಲ್ಲ.
* ಪೊಲೀಸ್ ಇಲಾಖೆ ನಿಷ್ಪಕ್ಷವಾಗಿರಲಿಲ್ಲ.
* ಸರಕಾರದ ಅಂಗಾಂಗಗಳು ಸ್ವತಂತ್ರವಾಗಿ ವಿಹಿತ ರೀತಿಯಲ್ಲಿ ಕೆಲಸ ಮಾಡಬೇಕೆಂದರೆ ಅದಕ್ಕೆ ಜವಾಬ್ದಾರಿ (ಉತ್ತರದಾಯಿ)ಸರಕಾರ ಪದ್ಧತಿಯೊಂದೇ ಪರಿಹಾರ.
ವಿಶ್ವೇಶ್ವರಯ್ಯ-ಮಿರ್ಜಾ ವ್ಯಕ್ತಿತ್ವ
ವರದಿಯನ್ನು ಕಳುಹಿಸಿದ ಬಳಿಕ ವಿಶ್ವೇ ಶ್ವರಯ್ಯನವರು ಮಾಮೂಲಿನ ವಾಕಿಂಗ್ ಹೊರಟು ಮಿರ್ಜಾ ಅವರ ಮನೆಗೆ ಬಂದರು. ವಿಶ್ವೇಶ್ವರ ಯ್ಯನವರು ತನ್ನ ಊರು ಗೋಲನ್ನು ಗೋಡೆಯ ಚಿತ್ರದತ್ತ ತೋರಿಸಿ “ಇನ್ನು ಇಲ್ಲಿ ಇದಕ್ಕೆ ಜಾಗವಿಲ್ಲ. ತೆಗೆದುಹಾಕಿ’ ಎಂದರು.
ಮಿರ್ಜಾ: “ಅದೇಕೆ ಹಾಗೆನ್ನುತ್ತೀರಿ?’.
ವಿ: “ನಾನು ಕಳುಹಿಸಿದ ವರದಿಯಿಂದ ನಿಮಗೆ ಸಮಾಧಾನವಾಗಿರಲಾರದು’.
ಮಿ: “ನಿಮ್ಮನ್ನು ನನ್ನ ತಂದೆಯ ಪಂಕ್ತಿಯಲ್ಲಿ ಸೇರಿಸಿದ್ದೇನೆ. ತಂದೆಯ ಸ್ಥಾನದಂತೆ ನಿಮ್ಮ ಸ್ಥಾನವೂ ನನ್ನ ದೃಷ್ಟಿಯಲ್ಲಿ ಹಾಗೇ ಖಾಯಂ ಆದದ್ದು’.
ಮಿರ್ಜಾ ಅವರ ಗೃಹ ಕಚೇರಿಯಲ್ಲಿ ನಾಲ್ಕು ಚಿತ್ರಗಳಿದ್ದವು. ಪರ್ಷಿಯನ್ ಕವಿ ಫಿರ್ದೂಸಿ ಚಿತ್ರ ಪ್ರತ್ಯೇಕ ಸ್ಥಾನದಲ್ಲಿತ್ತು. ಇನ್ನೊಂದೆಡೆ ಮಿರ್ಜಾ ಅವರ ತಂದೆ ಆಗಾಜಾನ್, ಪಕ್ಕದಲ್ಲಿ ಮೈಸೂರು ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಬಂಧುಮಿತ್ರರ ಜತೆ ಕುಳಿತ ಚಿತ್ರ, ಮೂರನೆಯದು ವಿಶ್ವೇಶ್ವರ ಯ್ಯನವರದ್ದು. ಡಿವಿಜಿ ಅಭಿಮತ
ಬೆಂಗಳೂರಿನ ಗಣಪತಿ ಗಲಾಟೆ ನಡೆದಾಗ ಹಿರಿಯ ಪತ್ರಕರ್ತ, ಸಾಹಿತಿ ಡಿ.ವಿ.ಗುಂಡಪ್ಪನವರು (ಡಿವಿಜಿ) ಬಾಗಲಕೋಟೆಯ ಪತ್ರಕರ್ತರ ಸಮ್ಮೇಳನದಲ್ಲಿದ್ದರು. ಮಿರ್ಜಾ ಅವರೇ ತಂತಿ ಕಳುಹಿಸಿ ಪರಿಸ್ಥಿತಿ ಹತೋಟಿಗೆ ಬರುತ್ತಿದೆ ಎಂದು ತಿಳಿಸಿದ್ದರು. “ಸರಕಾರ ಕೂಡಲೇ ವಿಚಾರಣ ಸಮಿತಿ ನೇಮಿಸಬೇಕು’ ಎಂದು ಮರು ತಂತಿಯನ್ನು ಡಿವಿಜಿ ಕಳುಹಿಸಿದ್ದರು.
ಎರಡು ಮೂರು ದಿನ ಬಿಟ್ಟು ಬೆಂಗಳೂರಿಗೆ ಬರುವಾಗ ಪರಿಸ್ಥಿತಿ ಕೈಮೀರಿತ್ತು. ಎರಡೂ ಗುಂಪುಗಳಲ್ಲಿ ಶಾಂತಿ ವಾತಾವರಣದ ಬದಲು ದೋಷಾರೋಪಗಳೇ ಹೆಚ್ಚಾಗಿತ್ತು. ಡಿವಿಜಿಯವರನ್ನು ಭೇಟಿಯಾದವರು ನೀಡಿದ ತಾತ್ಪರ್ಯವೆಂದರೆ “ಮಿರ್ಜಾ ಸಾಹೇಬರು ಘಟನೆಯನ್ನು ಹಿಂದುಗಳ ಮೇಲೆ ಹೊರಿಸುವ ಮನಸ್ಸುಳ್ಳವರಾಗಿದ್ದಾರೆ’. ಈ ಮಾತು ಆಶ್ಚರ್ಯ ಉಂಟು ಮಾಡಿತಾದರೂ ಅಸಂಗತವೆಂದು ತೋರ ಲಿಲ್ಲವಂತೆ. ಒಂದೂವರೆ ವರ್ಷ ಮಿರ್ಜಾರನ್ನು ಡಿವಿಜಿ ಭೇಟಿಯಾಗಲಿಲ್ಲ. “ಇದು ತಪ್ಪು’ ಎಂದು ಸ್ನೇಹಿ ತರೊಬ್ಬರು ಡಿವಿಜಿಗೆ ಹೇಳಿದರು. “ಆ ಮಿತ್ರರ ಮಾತು ಸರಿ ಎಂದು ನನಗೆ ಎಷ್ಟೋ ವರ್ಷಗಳ ಅನಂತರ ಕಾಣುತ್ತಿದೆ. ನಾನು ಮಿರ್ಜಾರನ್ನು ಬಿಸಿಬಿಸಿ ಯ ಲ್ಲಿಯೇ ಕಂಡು ಮಾತನಾಡಿದ್ದಿದ್ದರೆ ವೈಷಮ್ಯದ ಅವಕಾಶ ತಪ್ಪುತ್ತಿತ್ತೋ ಏನೋ’ ಎಂದೂ ಡಿವಿಜಿ ಹೇಳಿಕೊಂಡಿದ್ದಾರೆ. ನಾಲ್ಕೈದು ವರ್ಷಗಳ ಅನಂತರ ಮಿರ್ಜಾ ಅವರಿಗೂ ವಾಸ್ತವದ ಅರಿವಾಯಿತು. “ವಿಷಮ ಕಾಲದಲ್ಲಿ ಸುತ್ತಮುತ್ತ ಇದ್ದುಕೊಂಡು ಹಿತಚಿಂತಕರಂತೆ ಸುದ್ದಿ, ಸಲಹೆ ಕೊಡುತ್ತಿದ್ದ ಅನೇಕರು ನಿಜವಾದ ಹಿತಚಿಂ ತಕರಾಗಿರಲಿಲ್ಲವೆಂದು ಕಂಡುಕೊಂಡರು. ಸ್ವಾರ್ಥಿಗಳು ತಮ್ಮನ್ನು ತಪ್ಪುದಾರಿಗೆಳೆದರಲ್ಲಾ, ತಾವು ವಂಚನೆಗೆ ಒಳಗಾದದ್ದಾದಾಯಿತಲ್ಲ ಎಂದು ಮಿರ್ಜಾ ಅವರು ಪಶ್ಚಾತ್ತಾಪ ಪಟ್ಟದ್ದನ್ನು ಬಲ್ಲೆ’ ಎಂದು ಡಿವಿಜಿ ದಾಖಲಿಸಿದ್ದಾರೆ. ಒಟ್ಟಿನಲ್ಲಿ ಮಿರ್ಜಾ ಸಾಹೇಬರ ದಿವಾನ್ ಆಡಳಿತಾವಧಿಯ 15 ವರ್ಷಗಳಲ್ಲಿ ಅರ್ಧ ಭಾಗ ಗಲಭೆಗಳನ್ನು ದಮನ ಮಾಡುವುದರಲ್ಲಿ ಕಳೆಯಿ ತಂತೆ. ಇಲ್ಲವಾದರೆ ಅಭಿವೃದ್ಧಿ ಕಾರ್ಯ ದುಪ್ಪಟ್ಟು ಆಗುತ್ತಿತ್ತಂತೆ. ಈ ಘಟನೆಯಿಂದ ತಿಳಿದುಕೊಳ್ಳಬೇಕಾದ ಅಂಶ ವೆಂದರೆ “ಯಾರೇ ಆಗಲಿ, ಅವರವರ ಮಟ್ಟಿನ ಅಧಿಕಾ ರಾವಧಿಯಲ್ಲಿ ನಗಣ್ಯ ವಿಷಯಗಳಿಗೆ ತಮ್ಮ ಶಕ್ತಿಗಳು ಎಷ್ಟು ದುವ್ಯìಯವಾಗುತ್ತಿವೆ ಎಂದು ಮನನ ಮಾಡಿ ಕೊಂಡು ಕಾರ್ಯೋನ್ಮುಖರಾಗಬೇಕು’. ಗಾಂಧಿ ಯವರ ಬಗೆಗೆ ಬರೆಯುವಾಗ ಓಶೋ (ರಜನೀಶ್) ಉಲ್ಲೇಖೀಸುವ ಮಾತು ಮಾರ್ಮಿಕ: “ಮೊದಲ ದರ್ಜೆಯ ಒಬ್ಬ ವ್ಯಕ್ತಿ ಮತ್ತೂಬ್ಬ ಮೊದಲ ದರ್ಜೆ ವ್ಯಕ್ತಿಯ ಕಾಲಬುಡದಲ್ಲಿ ಎಂದೂ ಕೂರುವುದಿಲ್ಲ. ಇವರ ಸುತ್ತ ಸಹಜವಾಗಿ ಕತ್ತೆಗಳು (ಎರಡನೆಯ, ಮೂರನೆಯ ದರ್ಜೆಯ ವ್ಯಕ್ತಿಗಳು) ಇರುತ್ತವೆ. ಈ ವ್ಯಕ್ತಿಗಳು ಯಾರನ್ನು ಆರಾಧಿಸುತ್ತಿದ್ದಾರೋ ಅವರನ್ನೇ ವಂಚಿಸುತ್ತಲೇ ಇರುತ್ತಾರೆ’. ಮಟಪಾಡಿ ಕುಮಾರಸ್ವಾಮಿ