Advertisement

Mangaluru: ಪಾಪದ ಪ್ರಾಯಶ್ಚಿತ್ತ ಉತ್ತಮ ನಡತೆಗೆ ದಾರಿ: ಬಿಷಪ್‌

11:59 PM Dec 08, 2024 | Team Udayavani |

ಮಂಗಳೂರು: ಪಾಪದ ಪ್ರಾಯಶ್ಚಿತ್ತ ಉತ್ತಮ ನಡತೆಗೆ ದಾರಿ. ದೇವರ ಆಧಾರ ಇದ್ದಾಗ ಪಾಪದ ಕೂಪದಿಂದ ಹೊರಬಂದು ಸನ್ನಡತೆ ಯನ್ನು ರೂಢಿಸಿಕೊಳ್ಳಲು ಸಾಧ್ಯ ಎಂದು ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಬಿಪಷ್‌ ಅ| ವಂ| ಡಾ| ಪೀಟರ್‌ ಪಾವ್ಲ್ ಸಲ್ಡಾನ ಹೇಳಿದರು.

Advertisement

ನಗರದ ಲೇಡಿಹಿಲ್‌ನ ಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬದ ಸಂಭ್ರಮದ ಕೃತಜ್ಞತಾ ಪೂಜೆಯಲ್ಲಿ ರವಿವಾರ ಪ್ರವಚನ ನೀಡಿದ ಅವರು, ಇಟೆಲಿಯ ಪೊಂಪೈ ನಗರದಲ್ಲಿ ಪೊಂಪೈ ಮಾತೆಯ ಭಕ್ತಿ ಪ್ರಸಾರ ಮಾಡಲು ಬಾರ್ತಾಲೊ ಲೊಂಗೋ ಕಾರಣಕರ್ತರಾದರು.

ಇದೇ ರೀತಿ ನಿರಂತರ ದೇವರ ಪ್ರಾರ್ಥನೆಯ ಮೂಲಕ ಮನಸ್ಸಿನಲ್ಲಿ ರುವ ಕಂದಕ ಗಳನ್ನು ನಿವಾರಿಸಿಕೊಂಡು ಉತ್ತಮ ಜೀವನ ನಡೆಸುವ ಮೂಲಕ ಸಹೋದರತೆ ಯಿಂದ ಬಾಳುವವರಾಗೋಣ ಎಂದರು.

ವಿಶೇಷ ಅರಾಧನಾ ವಿಧಿಯನ್ನು ಮಂಗಳ ಜ್ಯೋತಿ ಸಂಸ್ಥೆಯ ನಿರ್ದೇಶಕ ಫಾ| ವಿಜಯ್‌ ಮಚಾದೋ ನಡೆಸಿಕೊಟ್ಟರು.

ಉರ್ವ ಚರ್ಚಿನ ಪ್ರಧಾನ ಧರ್ಮ ಗುರು ಫಾ| ಬೆಂಜಮಿನ್‌ ಪಿಂಟೋ, ಅಶೋಕನಗರ ಸಂತ ಡಾಮಿನಿಕ್‌ ಚರ್ಚಿನ ಪ್ರಧಾನ ಧರ್ಮಗುರು ಫಾ| ಡೇನಿಯಲ್‌ ಸಂಪತ್‌ ವೇಗಸ್‌, ಉರ್ವ ಚರ್ಚಿನ ಫಾ| ಹೆನ್ರಿ ಸಿಕ್ವೇರಾ, ಸಹಾಯಕ ಧರ್ಮ ಗುರು ಫಾ| ಲ್ಯಾನ್ಸನ್‌ ಪಿಂಟೋ ಸಹಿತ ಸುತ್ತಮುತ್ತಲಿರುವ ಚರ್ಚ್‌ಗಳ ಸುಮಾರು 60ಕ್ಕೂ ಅಧಿಕ ಧರ್ಮಗುರುಗಳು ಕೃತಜ್ಞತಾ ಪೂಜೆಯಲ್ಲಿ ಭಾಗವಹಿಸಿದ್ದರು. ಸಾವಿರಕ್ಕೂ ಅಧಿಕ ಮಂದಿ ಭಕ್ತರು ಭಾಗವಹಿಸಿದರು.

Advertisement

ಪೂಜೆಯ ಬಳಿಕ ಪರಮ ಪ್ರಸಾದದ ಮೆರವಣಿಗೆ ಉರ್ವ ಚರ್ಚಿನ ಮೂಲಕ ಉರ್ವ ಮಾರುಕಟ್ಟೆ, ಗಾಂಧಿನಗರ, ಮಣ್ಣಗುಡ್ಡೆ, ಲೇಡಿಹಿಲ್‌, ಮೂಲಕ ಉರ್ವ ಚರ್ಚ್‌ಗೆ ತಲುಪಿತು. ಈ ಬಳಿಕ ಸಾವಿರಾರು ಮಂದಿ ಭಕ್ತರು ಪರಮ ಪ್ರಸಾದದ ಆಶೀರ್ವಾದವನ್ನು ಪಡೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next