Advertisement

ಠಾಕ್ರೆಗೆ ಮರುಜೀವ

04:21 AM Jul 05, 2020 | Lakshmi GovindaRaj |

ಮೂರು ವರ್ಷಗಳ ಹಿಂದೆ ಠಾಕ್ರೆ ಸಿನಿಮಾ ಮಾಡುವುದಾಗಿ ನಿರ್ದೇಶಕ ಗುರುದೇಶ ಪಾಂಡೆ ಘೋಷಿಸಿದ್ದರು. ಆದರೆ, ಆನಂತರ ನಾನಾ ಕಾರಣಗಳಿಂದಾಗಿ ಆ ಸಿನಿಮಾ ಸೆಟ್ಟೇರಲಿಲ್ಲ. ಈಗ ಮತ್ತೆ ಆರಂಭವಾಗಲಿದೆ. ಆರಂಭದಲ್ಲಿ ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ನಾಯಕರಾಗಿ ಆಯ್ಕೆಯಾಗಿದ್ದರು. ಈ ಚಿತ್ರಕ್ಕೆ ಸಾಕಷ್ಟು ತಯಾರಿ ಕೂಡಾ ನಡೆಸಿದ್ದರು. ಆದರೆ,ಈಗ ಪ್ರಜ್ವಲ್ ಠಾಕ್ರೆ ಚಿತ್ರದಲ್ಲಿ ನಟಿಸುತ್ತಿಲ್ಲ.

Advertisement

ಬದಲಾಗಿ ಅವರ ಜಾಗಕ್ಕೆ ಚಿತ್ರತಂಡ ಮತ್ತೊಬ್ಬ ನಾಯಕನನ್ನು ಕರೆತರಲಿದೆ. ಆದರೆ, ಈ ಚಿತ್ರದ ಮತ್ತೊಂದು ವಿಶೇಷವೆಂದರೆ ಚಿತ್ರದಲ್ಲಿ ರವಿಚಂದ್ರನ್ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಈ ಚಿತ್ರಕ್ಕಾಗಿ ಷೇಕ್ಸ್‍ಪಿಯರ್ ಪ್ರಸಿದ್ಧ ನಾಟಕ ಮ್ಯಾಕ್‍ಬೆತ್ ಅನ್ನು ರೂಪಾಂತರಿಸಿಕೊಳ್ಳಲಾಗಿದೆಯಂತೆ ಠಾಕ್ರೆ ಮತ್ತೆ ಆರಂಭವಾಗುವ ಬಗ್ಗೆ ಮಾತನಾಡುವ ನಿರ್ದೇಶಕ ಗುರುದೇಶಪಾಂಡೆ, ಪ್ರಜ್ವಲ್ ಈಗ ಬೇರೆ ಬೇರೆ ಚಿತ್ರಗಳಲ್ಲಿ ತೊಡಗಿಕೊಂಡಿದ್ದಾರೆ. ಹಾಗಾಗಿ ಅವರು ನನಗೆ ಲಭ್ಯವಾಗುತ್ತಿಲ್ಲ.

ಮತ್ತೆ ಮುಂದಿನ ದಿನಗಳಲ್ಲಿ ಅವರ ಜತೆ ಕೆಲಸ ಮಾಡುವೆ. ಈಗ ಅವರು ಮಾಡಬೇಕಿರುವ ಪಾತ್ರಕ್ಕೆ ಮತ್ತೋರ್ವ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಆ ಕಲಾವಿದರ ಹೆಸರನ್ನು ಸದ್ಯದಲ್ಲೇ ತಿಳಿಸುವೆ. ಇದು ನನ್ನ ಮಹತ್ವಾಕಾಂಕ್ಷೆ ಸಿನಿಮಾ. ಈ ಚಿತ್ರ ಹೊಸ ರೂಪದಲ್ಲಿ ಮೂಡಿ ಬರಲಿದೆ ಎನ್ನುತ್ತಾರೆ. ಈಗಾಗಲೇ ಗುರುದೇಶಪಾಂಡೆ ಹಾಗೂ ಪ್ರಜ್ವಲ್ ಜಂಟಲ್ ಮ್ಯಾನ್ ಚಿತ್ರದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದಾರೆ. ಆ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next