Advertisement
ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಒಟ್ಟು 77,738 ಶಾಲೆಗಳ 54,17,409 ಬಾಲಕರು ಮತ್ತು 50,39,241 ಬಾಲಕಿಯರು ಸೇರಿ 1.04 ಕೋಟಿ ಮಕ್ಕಳಿಗೆ ಪಠ್ಯಪುಸ್ತಕ ಕೈ ಸೇರಬೇಕಿದೆ.
Related Articles
Advertisement
ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಲಾದ ಪಠ್ಯಪುಸ್ತಕ ಗಳಲ್ಲಿ ಸುಸ್ಥಿತಿಯಲ್ಲಿರುವ ಪುಸ್ತಕಗಳನ್ನು ಆಯಾ ಶಾಲೆಗಳ “ಬುಕ್ ಬ್ಯಾಂಕ್’ನಲ್ಲಿ ಸಂಗ್ರಹಿಸುವಂತೆ ಮತ್ತು ಅಗತ್ಯಾ ನುಸಾರ ಬಳಸುವಂತೆ ಬಿಇಒಗಳಿಗೆ ಸೂಚಿಸಿದೆ.
ಆದರೆ ಸದ್ಯ ಆನ್‌ಲೈನ್‌ನಲ್ಲಿ ತರಗತಿ ನಡೆಯುವುದರಿಂದ ಪಠ್ಯಪುಸ್ತಕ ಸಕಾಲಕ್ಕೆ ದೊರೆಯದಿದ್ದರೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಮಸ್ಯೆಯಾಗಲಿದೆ ಎಂಬುದು ಪೋಷಕರ ಆತಂಕ.
ಸಾಮಾನ್ಯವಾಗಿ ಮುಂದಿನ ಶೈಕ್ಷಣಿಕ ವರ್ಷಕ್ಕೆ ಬೇಕಾಗುವ ಪಠ್ಯಪುಸ್ತಕಗಳಿಗೆ ಸಂಬಂಧಿಸಿದ ಕಾರ್ಯ ವಿಧಾನಗಳನ್ನು ಹಿಂದಿನ ಆರ್ಥಿಕ ವರ್ಷದಿಂದಲೇ ಪ್ರಾರಂಭಿಸಲಾಗುತ್ತದೆ. ಮೊದಲಿಗೆ 1ರಿಂದ 10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಬೇಕಾಗುವ ಪಠ್ಯಪುಸ್ತಕಗಳ ಅಂಕಿ-ಅಂಶಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಪಡೆಯಲಾಗುತ್ತದೆ. ಅದರಂತೆ ಮುದ್ರಿಸಿ ಬಿಇಒ ಕಚೇರಿಗೆ ತಲುಪಿಸಲಾಗುತ್ತದೆ. ಈ ಮಧ್ಯೆ ಕೇಂದ್ರ ಪಠ್ಯಕ್ರಮದ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ ಜೂ. 15ರಿಂದ ಆರಂಭವಾಗಿದ್ದು, ಕೆಲವರಿಗೆ ಪಠ್ಯಪುಸ್ತಕ ದೊರೆತಿದೆ. ಉಳಿದವರಿಗೆ ವಾರದೊಳಗೆ ದೊರೆಯುವ ನಿರೀಕ್ಷೆಯಿದೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಪುಸ್ತಕಗಳ ಮುದ್ರಣ, ಸರಬರಾಜು ಕೊಂಚ ವಿಳಂಬವಾಗಿರುವುದು ಹೌದು. ಇದೀಗ ಟೆಂಡರ್ ಅಂತಿಮಗೊಳಿಸಿದ್ದು ಆದಷ್ಟು ಬೇಗ ವಿದ್ಯಾರ್ಥಿಗಳಿಗೆ ದೊರೆಯುವಂತೆ ಮಾಡುತ್ತೇವೆ. – ಎಂ.ಪಿ. ಮಾದೇಗೌಡ, ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಪಠ್ಯಪುಸ್ತಕ ಸಂಘ-ಬೆಂಗಳೂರು