ಹಳೆ ಬಂದರಿನಲ್ಲಿ ಸುಸಜ್ಜಿತ ಹಡಗು ಟರ್ಮಿನಲ್ ಯೋಜನೆ ಈಗ ತ್ರಿಶಂಕು ಸ್ಥಿತಿಯಲ್ಲಿದೆ! ಈ ಯೋಜನೆಗೆ ಈಗಾಗಲೇ ಟೆಂಡರ್ ಆಗಿ ಏಜೆನ್ಸಿ ಅಂತಿಮವಾಗಿ ಗುತ್ತಿಗೆದಾರರು ಕಾಮ ಗಾರಿ ಆರಂಭಿಸಲು ಸಿದ್ಧತೆಯಲ್ಲಿದ್ದಾರೆ.
Advertisement
ಕಳೆದ 1 ವರ್ಷದಿಂದ ಗುತ್ತಿಗೆದಾರರು ಕಾಮಗಾರಿ ಆರಂಭಿಸಲು ಕಾಯುತ್ತಿದ್ದಾರೆ. ಆದರೆ ಪರಿಸರ ಹಾಗೂ ಸಿಆರ್ ಝಡ್ ಅನುಮತಿ ಇನ್ನೂ ದೊರಕದ ಕಾರಣದಿಂದ ಕಾಮಗಾರಿ ನಡೆಸಲು ಗುತ್ತಿಗೆದಾರರಿಗೆ ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಕಾಮಗಾರಿ ಆರಂಭ ಮಾಡಿದರೆ ನಿಯಮ ಉಲ್ಲಂಘನೆಗೆ ಒಳಗಾಗಲಿದ್ದಾರೆ. ಇತ್ತ ಇಲಾಖೆಗಳ ಅಧಿಕಾರಿಗಳು ಕೇಂದ್ರ-ರಾಜ್ಯ ಸರಕಾರದ ಕಡೆಗೆ ಬೊಟ್ಟು ಮಾಡುತ್ತ ಇರುವುದರಿಂದ ಯೋಜನೆ ಈಗ ನಿಂತಲ್ಲೇ ನಿಂತು ಬಿಟ್ಟಿದೆ.
ಹಡಗು ಟರ್ಮಿನಲ್‌ಗೆ ಮುಖ್ಯವಾಗಿ ಪರಿಸರ ಹಾಗೂ ಸಿಆರ್‌ಝಡ್ ಅನುಮತಿ ಅಗತ್ಯ. ಅದರ ಪ್ರಕ್ರಿಯೆಯನ್ನು ಆರಂಭದಲ್ಲಿಯೇ ಬಂದರು ಇಲಾಖೆ ನಡೆಸಿತ್ತು. ಆದರೆ ಕೇಂದ್ರ ಸರಕಾರವು ದೇಶವ್ಯಾಪಿ “ಸಿಆರ್ ಝಡ್ ನಕ್ಷೆ’ಯನ್ನು ಹೊಸದಾಗಿ ಮಾಡಲು
ಮುಂದಡಿ ಇಟ್ಟು ಇದು ಅಂತಿಮಗೊಳ್ಳಲು ಹಲವು ಸಮಯ ಬೇಕಾಯಿತು. ಇದರಿಂದಾಗಿ ಅನುಮತಿ ಪ್ರಕ್ರಿಯೆಯಲ್ಲಿ ತಡವಾಯಿತು. ಎಪ್ರಿಲ್‌ನಲ್ಲಿ ನಕ್ಷೆ ಅಂತಿಮವಾಗಿದೆ. ಅದರ ಪ್ರಕಾರವೇ ಪರಿಸರ
ಅಧ್ಯಯನ ನಡೆಸಲಾಗಿದೆ. ಶರತ್ತುಗಳ ಪಾಲನೆ ಆಗಬೇಕಾಗಿದೆ. ಅದಕ್ಕೆ 3/4 ತಿಂಗಳು ಬೇಕಾಯಿತು. ಅದರ ವರದಿ ಕೇಂದ್ರಕ್ಕೆ
ಸಲ್ಲಿಕೆಯಾಗಿ ಈಗ ರಾಜ್ಯ ಮಟ್ಟದಲ್ಲಿ ಅನುಮೋ ದನೆ ಹಂತದಲ್ಲಿದೆ.
Related Articles
ನೇತ್ರಾವತಿ ಹಾಗೂ ಫಲ್ಗುಣಿ ನದಿ ಸಂಗಮಿಸಿ ಸಮುದ್ರ ಸೇರುವ ಸ್ಥಳ ಅಳಿವೆ ಬಾಗಿಲಿನಲ್ಲಿ ತುಂಬಿರುವ ಹೂಳನ್ನು ಡ್ರೆಜ್ಜಿಂಗ್ ಮಾಡುವ 29 ಕೋ.ರೂ ಗಳ ಬಹು ನಿರೀಕ್ಷಿತ ಯೋಜನೆ ಕೂಡ ಟೆಂಡರ್ ಹಂತದಲ್ಲೇ ಬಾಕಿಯಾಗಿದೆ. 8-9 ಬಾರಿ ಟೆಂಡರ್ ಆಗಿದ್ದರೂ ಕಾನೂನಾತ್ಮಕ ಹಾಗೂ ತಾಂತ್ರಿಕ ಕಾರಣದಿಂದ ಇದರ ಕಾಮಗಾರಿ ನಡೆಸಲು ಇಲ್ಲಿಯವರೆಗೆಯಾರೂ ಮುಂದೆ ಬಂದಿಲ್ಲ. “-7′ ಮೀ. ಆಳದಲ್ಲಿ ಡ್ರೆಜ್ಜಿಂಗ್ (ಈಗ “-4′ ಆಳ ಮಾತ್ರ ಡ್ರೆಜ್ಜಿಂಗ್ ಕೆಲವೊಮ್ಮೆ) ಮಾಡುವುದು ಈ ಯೋಜನೆ ಉದ್ದೇಶ. ಹಳೆಬಂದರುವಿನಲ್ಲಿ ಹಡಗು ಟರ್ಮಿನಲ್ ನಿರ್ಮಾಣವಾಗುವ ಸಮಯದಲ್ಲಿ ದೊಡ್ಡ ಹಡಗು ಅಳಿವೆಬಾಗಿಲು ದಾಟಿ
ಬರಬೇಕಾದರೆ “-7′ ಡ್ರೆಜ್ಜಿಂಗ್ ಅಗತ್ಯವಿದೆ. ಹಡಗು ಟರ್ಮಿನಲ್ ಆರಂಭವಾದರೆ ಪೂರ್ಣಗೊಳ್ಳಲು ಎರಡೂವರೆ ವರ್ಷ ಬೇಕು.
Advertisement
ಅದರ ಮಧ್ಯೆ “ಡ್ರೆಜ್ಜಿಂಗ್’ (1 ವರ್ಷ ಸಾಕು) ಪೂರ್ಣಗೊಳಿಸಬಹುದು ಎಂಬುದು ಅಧಿಕಾರಿಗಳ ಲೆಕ್ಕಾಚಾರ. ಆದರೆ, ಡ್ರೆಜ್ಜಿಂಗ್ ಟೆಂಡರ್‌ಗೆ ನಿರ್ಧಾರ ಮಾಡಿ ಒಂದೆರಡು ವರ್ಷ ಆಗಿದ್ದರೂ ಇನ್ನೂ ಕೆಲಸ ಶುರು ಮಾಡಲು ಆಗಿಲ್ಲ.
ಏನಿದು ಜೆಟ್ಟಿ ಯೋಜನೆ?ಕೇಂದ್ರ ಸರಕಾರ ಹಾಗೂ ಲಕ್ಷದ್ವೀಪ ಆಡಳಿತ ಸಮೂಹದ ವತಿಯಿಂದ ಒಟ್ಟು 65 ಕೋ. ರೂ.ವೆಚ್ಚದಲ್ಲಿ ಹಳೆ ಬಂದರು ಭಾಗದ ಉತ್ತರ ದಕ್ಕೆಯ 300 ಮೀಟರ್ ವ್ಯಾಪ್ತಿಯಲ್ಲಿ ನೂತನ ವಾಣಿಜ್ಯ ಜೆಟ್ಟಿ ನಿರ್ಮಾಣವಾಗಲಿದೆ. ಇಲ್ಲಿ ಕಾರ್ಗೋ ಜೆಟ್ಟಿ ಜತೆಗೆ ಸುಮಾರು 80 ಮೀ.ನ ಹಾಲಿ ಜೆಟ್ಟಿಯಲ್ಲಿ ಪ್ರಯಾಣಿಕರಿಗೆ ಸುಸಜ್ಜಿತ ಟರ್ಮಿನಲ್ ನಿರ್ಮಾಣವಾಗಲಿದೆ. 1 ಗೋಡೌನ್ ಸಹಿತ ಇತರ ಮೂಲಭೂತ ವ್ಯವಸ್ಥೆಗಳು ಇರುತ್ತದೆ. ಟರ್ಮಿನಲ್ ನಿರ್ಮಾಣವಾದರೆ ಮಂಗಳೂರು- ಲಕ್ಷದ್ವೀಪದ ಜನರ ಪ್ರಯಾಣಕ್ಕೆ, ಸರಕು-ಸಾಮಗ್ರಿ ಸಾಗಾಟಕ್ಕೆ ಅನುಕೂಲವಾಗಲಿದೆ. ಹಡಗಿಗೆ ಸರಕು ಹೇರಲು ಮತ್ತು ಇಳಿಸಲು ಟರ್ಮಿನಲ್‌ನಲ್ಲಿ ಜಾಗ ಸಿಗಲಿದೆ. ಸಣ್ಣ ಧಾರಣಾ ಶಕ್ತಿಯ “ಮಂಜಿ’ಗಳು ಈಗ ಹಳೆ ಬಂದರಿಗೆ ಬರುತ್ತಿವೆ. ಮುಂದೆ ದೊಡ್ಡ ಹಡಗುಗಳೂ ಬರಬಹುದು. ಇದರಿಂದ ಉದ್ಯಮಕ್ಕೂ ಅನುಕೂಲ. 70 ಸಾವಿರಕ್ಕೂ ಅಧಿಕ ಟನ್ ಸಾಮಗ್ರಿ ಸಾಗಾಟ
ಹಳೆಬಂದರಿನಿಂದ ಲಕ್ಷದ್ವೀಪಕ್ಕೆ ಪ್ರತೀ ವರ್ಷ ಸೆ. 15ರಿಂದ ಮೇ 15ರ ವರೆಗೆ (ಮೇ 16ರಿಂದ ಸೆ. 14ರ ವರೆಗೆ ನಿಷೇಧ) ಸರಕು ಸಾಗಾಟಕ್ಕೆ ನಿಯಮಾವಳಿ ಪ್ರಕಾರ ಅವಕಾಶವಿದೆ. ಅಕ್ಕಿ, ಆಹಾರ ವಸ್ತುಗಳು, ತರಕಾರಿ, ಕಲ್ಲು, ಮಣ್ಣು, ಜಲ್ಲಿ, ಸಿಮೆಂಟ್, ಇಟ್ಟಿಗೆ, ಬ್ಲಾಕ್, ಸ್ಟೀಲ್ ಅನ್ನು ಮಂಗಳೂರಿನಿಂದ ಸಾಗಿಸಲಾಗುತ್ತದೆ. ಪ್ರತೀ ವರ್ಷ 70 ಸಾವಿರಕ್ಕಿಂತಲೂ ಅಧಿಕ ಟನ್ ಸಾಮಗ್ರಿಗಳನ್ನು ಇಲ್ಲಿಂದ ಕಳುಹಿಸಲಾಗುತ್ತದೆ. ಪರಿಸರ ಇಲಾಖೆ ಅನುಮೋದನೆ ಬಾಕಿ
ಜೆಟ್ಟಿ ಹಾಗೂ ಟರ್ಮಿನಲ್ ಜತೆಗೆ ನಿರ್ಮಾಣವಾಗುವುದರಿಂದ ಪರಿಸರ ಇಲಾಖೆಯ ಅನುಮೋದನೆ ಅಗತ್ಯವಿದೆ. ಈ ಕುರಿತಾದ ಕೆಲವು ಷರತ್ತುಗಳನ್ನು ಸದ್ಯ ಪಾಲಿಸಿಕೊಂಡು ಪೂರಕ ಕ್ರಮ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರಿಗೆ ಈ ಕುರಿತಾದ ಮಾಹಿತಿ ನೀಡಿದ ಬಳಿಕ ಪರಿಸರ ಇಲಾಖೆ ಅನುಮೋದನೆ ದೊರೆಯಲಿದೆ. ಶೀಘ್ರದಲ್ಲಿ ಕಾಮಗಾರಿ ಆರಂಭವಾಗಲಿದೆ.
*ಕ್ಯಾ| ಸ್ವಾಮಿ ನಿರ್ದೆಶಕರು, ಬಂದರು ಇಲಾಖೆ ಜೆಟ್ಟಿ; ವಿಶೇಷ ಆದ್ಯತೆ
ಲಕ್ಷದ್ವೀಪಕ್ಕೆ ಸರಕು ಸಾಗಿಸುವ ಹಾಗೂ ಕ್ರೂಸ್ ಹಡಗುಗಳ ನಿಲುಗಡೆಗಾಗಿ ಸಾಗರಮಾಲಾ ಯೋಜನೆಯಡಿ ಹಳೆ ಬಂದರಿನಲ್ಲಿ ಪ್ರತ್ಯೇಕ ಜೆಟ್ಟಿ ನಿರ್ಮಿಸುವ ಯೋಜನೆಗೆ ಮರುಜೀವ ನೀಡಲು ವಿಶೇಷ ಆದ್ಯತೆ ನೀಡಲಾಗುವುದು. ಇದಕ್ಕೆ ರಾಜ್ಯ ಸರಕಾರ ವಿಶೇಷ ಸಹಕಾರ ನೀಡಬೇಕಿದೆ.
*ಕ್ಯಾ| ಬ್ರಿಜೇಶ್ ಚೌಟ, ಸಂಸದರು