Advertisement

ಟ್ವಿಟರ್‌ನ ಷೇರು ಖರೀದಿಸಿದ ಟೆಸ್ಲಾ ಕಂಪನಿಯ ಮಾಲೀಕ ಎಲಾನ್‌ ಮಸ್ಕ್

06:05 PM Apr 04, 2022 | Team Udayavani |

ಜಗತ್ತಿನ ದೊಡ್ಡ ಶ್ರೀಮಂತ ಉದ್ಯಮಿಯೆನಿಸಿರುವ, ಟೆಸ್ಲಾ ಕಂಪನಿಯ ಮಾಲೀಕ ಎಲಾನ್‌ ಮಸ್ಕ್, ಟ್ವಿಟರ್‌ ಸಂಸ್ಥೆಯ ಶೇ. 9.2ರಷ್ಟು ಷೇರುಗಳನ್ನು ಖರೀದಿಸಿದ್ದಾರೆ.

Advertisement

ಟ್ವಿಟರ್‌ನ 7.35 ಕೋಟಿಯಷ್ಟು ಷೇರುಗಳು ಅವರ ಪಾಲಾಗಿವೆ. ಇಲ್ಲೊಂದು ಕುತೂಹಲದ ವಿಚಾರವಿದೆ. ಟ್ವಿಟರ್‌ನಲ್ಲಿ ಸ್ವತಂತ್ರವಾಗಿ ಬರೆಯಲು ಅವಕಾಶ ಇಲ್ಲದಿರುವುದಕ್ಕೆ ತಾವೇ ಒಂದು ಸಾಮಾಜಿಕ ಜಾಲತಾಣ ತೆರೆಯುವುದಾಗಿ ಮಸ್ಕ್ ಇತ್ತೀಚೆಗೆ ಹೇಳಿದ್ದರು.

ಇದನ್ನೂ ಓದಿ:ಎಲೆಕ್ಟ್ರಿಕ್ ವಾಹನಗಳಲ್ಲಿ ಬೆಂಕಿ: ಐಐಟಿ ಗುವಾಹಟಿಯಿಂದ ಹೊಸ ತಂತ್ರಜ್ಞಾನ

ಈಗ ಟ್ವಿಟರಿನಲ್ಲಿ ಹೂಡಿಕೆ ಮಾಡಿರುವುದರಿಂದ ಅವರ ಸ್ವತಂತ್ರ ಅಭಿವ್ಯಕ್ತತೆಗೆ ಟ್ವಿಟರ್‌ನಲ್ಲಿ ಅವಕಾಶ ಸಿಗುವುದೇ ಎಂಬುದನ್ನು ಕಾದು ನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next