Advertisement
ಬೆಂಗಳೂರಿನಲ್ಲಿ ಉ.ಪ್ರದೇಶ ಮೂಲದ ಮೊಹಮ್ಮದ್ ಆರೀಫ್ (35) ಎಂಬಾತನನ್ನು ಬಂಧಿಸಿ, 2 ಲ್ಯಾಪ್‌ಟಾಪ್, 3 ಹಾರ್ಡ್ ಡಿಸ್ಕ್, ಸಂಘಟನೆ ಸದಸ್ಯರನ್ನು ಸಂಪರ್ಕಿಸಲು ಬಳಸುತ್ತಿದ್ದ ಮೊಬೈಲ್‌ಗಳು, ಇತರ ದಾಖಲೆ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ನಗರ ಠಾಣೆ ವ್ಯಾಪ್ತಿಯಲ್ಲಿ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಅಸ್ಸಾಂ ಮೂಲದ ಅಖ್ತರ್ ಹುಸೇನ್ ಲಷ್ಕರ್ ಅಲಿ ಯಾಸ್ ಎಂ.ಡಿ. ಲಷ್ಕರ್ ಮತ್ತು ಪಶ್ಚಿಮ ಬಂಗಾಲ ಮೂಲದ ಅಬ್ದುಲ್ ಅಲೀಂ ಮಂಡಲ್ ಅಲಿಯಾಸ್ ಎಂ.ಡಿ. ಜುಬಾ ಎಂಬ ವರನ್ನು ಬಂಧಿಸಿದ್ದರು. ಅನಂತರ ಎನ್‌ಐಎ ಪ್ರಕರಣ ದಾಖಲಿಸಿ ಕೊಂಡು ಆರೋಪಿಗಳನ್ನು ವಿಚಾ ರಣೆಗೊಳಪಡಿಸಿತ್ತು. ಅಲ್ಲದೆ ಜನವರಿಯಲ್ಲಿ ಇಬ್ಬರ ವಿರುದ್ಧ ಆರೋಪ ಪಟ್ಟಿ ಕೂಡ ಸಲ್ಲಿಸಿತ್ತು. ಇಬ್ಬರ ವಿಚಾರಣೆ ವೇಳೆ ಆರೀಫ್ ಬಗ್ಗೆ ಸ್ಫೋಟಕ ಮಾಹಿತಿ ತಿಳಿದುಬಂದಿತ್ತು.
Related Articles
Advertisement
ಸಾಫ್ಟ್ವೇರ್ ಎಂಜಿನಿಯರ್ಥಣಿಸಂದ್ರದ ಮಂಜುನಾಥ್ ಲೇಔಟ್‌ನಲ್ಲಿ ಪತ್ನಿ ಜತೆ ವಾಸವಾಗಿದ್ದ ಆರೀಫ್ ಖಾಸಗಿ ಕಂಪೆನಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದು, ವರ್ಕ್ ಫ್ರಂ ಹೋಮ್‌ನಲ್ಲಿ ಕೆಲಸ ಮಾಡುತ್ತಿದ್ದ. ಈ ವೇಳೆಯೇ ಅಲ್ ಕಾಯಿದಾ ಸಂಪರ್ಕ ಹೊಂದಿದ್ದಾನೆ. ಎನ್‌ಕ್ರಿಪ್ಟ್ ಮಾಡಲಾದ ಸೋಷಿಯಲ್ ಮೀಡಿಯಾಗಳ ಮೂಲಕ ಸಂಘಟನೆ ಸದಸ್ಯರನ್ನು ಸಂಪರ್ಕಿಸಿದ್ದಾನೆ. ಟೆಲಿಗ್ರಾಂ ಮತ್ತು ಡಾರ್ಕ್‌ನೆಟ್ ವೆಬ್‌ಸೈಟ್ ಮೂಲಕ ಸಂಘಟನೆ ಸದಸ್ಯರ ಜತೆ ಚರ್ಚೆ ನಡೆಸುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಪ್ರಾಥಮಿಕ ವಿಚಾರಣೆಯಲ್ಲಿ ಶಂಕಿತ ಎಂಡ್ ಟೂ ಎಂಡ್ ಎಂಬ ಎನ್‌ಕ್ರಿಪ್ಟ್ (ರಹಸ್ಯ) ಮಾಡಲಾದ ಸಂವಹನ ವೇದಿಕೆಗಳ ಮೂಲಕ ವಿದೇಶದಲ್ಲಿರುವ ನಿಷೇಧಿತ ಅಲ್ ಕಾಯಿದಾ ಹಾಗೂ ಇತರ ಸಂಘಟನೆಗಳ ಹ್ಯಾಂಡ್ಲರ್‌ಗಳ ಜತೆ ಸಂಪರ್ಕದಲ್ಲಿದ್ದ. ಅಲ್ಲದೆ ಸಾಮಾಜಿಕ ಜಾಲತಾಣಗಳ ಮೂಲಕವೇ ಯುವಕರನ್ನು ಸಂಘಟನೆಗೆ ಸೆಳೆಯು ತ್ತಿದ್ದ. ಅನಂತರ ಅವರಿಗೆ ತರಬೇತಿ ನೀಡಿ ವಿಧ್ವಂಸಕ ಕೃತ್ಯಗಳು ಅಥವಾ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಪ್ರಚೋದಿಸುತ್ತಿದ್ದ ಎಂಬುದು ಗೊತ್ತಾಗಿದೆ.
ಈತ ಮಹಾರಾಷ್ಟ್ರದ ಥಾಣೆಯ ಪಾಲಾಗ್ರದಲ್ಲಿ ಬಂಧಿಸಲಾದ ಶಂಕಿತನ ಜತೆ ನಿರಂತರ ಸಂಪರ್ಕದಲ್ಲಿದ್ದ ಎಂದು ಮೂಲಗಳು ತಿಳಿಸಿವೆ. ಸೋಮವಾರ ಪಲಾಯನಕ್ಕೆ ಸಂಚು
ಆರೀಫ್‌ಗೆ ಇಬ್ಬರು ಮಕ್ಕಳಿದ್ದು, 2 ವರ್ಷಗಳಿಂದ ಬಾಡಿಗೆ ಮನೆಯಲ್ಲಿದ್ದ. ಸಂಘಟನೆಯ ಸದಸ್ಯರ ಸೂಚನೆ ಮೇರೆಗೆ ಪತ್ನಿ, ಇಬ್ಬರು ಮಕ್ಕಳನ್ನು ಉತ್ತರ ಪ್ರದೇಶದಲ್ಲಿ ಬಿಟ್ಟು ಸಿರಿಯಾ ಅಥವಾ ಅಫ್ಘಾನಿಸ್ಥಾನಕ್ಕೆ ತೆರಳಲು ಸಿದ್ಧತೆ ನಡೆಸಿದ್ದ. ಸೋಮವಾರ ಇಡೀ ಕುಟುಂಬ ಉತ್ತರ ಪ್ರದೇಶಕ್ಕೆ ತೆರಳಲು ಸಿದ್ಧತೆ ನಡೆಸಿತ್ತು. ಈ ಬಗ್ಗೆ ಮನೆ ಮಾಲಕರಿಗೂ ಮಾಹಿತಿ ನೀಡಿದ್ದ.
ಮಾರ್ಚ್ 2ನೇ ವಾರದಲ್ಲಿ ಇರಾಕ್ ಮೂಲಕ ಸಿರಿಯಾ ಹಾಗೂ ಅಫ್ಘಾನ್‌ಗೆ ತೆರಳಲು ಸಜ್ಜಾಗಿದ್ದ. ಆದರೆ ಪಾಸ್‌ಪೋರ್ಟ್ ಮತ್ತು ವೀಸಾ ಸಿಗದ ಕಾರಣ ಯೋಜನೆ ಕೈಬಿಟ್ಟಿದ್ದ. ಹೀಗಾಗಿ ಬೇರೆ ದೇಶದ ಮೂಲಕ ತೆರಳಲು ವಿಮಾನ ಟಿಕೆಟ್ ಕೂಡ ಕಾದಿರಿಸಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಐಸಿಸ್‌ನಿಂದ ಅಲ್ ಕಾಯಿದಾ
ಆರೀಫ್ ಈ ಹಿಂದೆ ಐಸಿಸ್ ಬಗ್ಗೆ ಒಲವು ಹೊಂದಿದ್ದ. ಕೆಲವು ಸದಸ್ಯರನ್ನು ಸಂಪರ್ಕಿಸಿದ್ದ. ಆದರೆ ಸರಿಯಾದ ಪ್ರತಿಕ್ರಿಯೆ ಬಂದಿರಲಿಲ್ಲ. ಅಫ್ಘಾನಿ ಸ್ಥಾನದಲ್ಲಿ ಹೆಚ್ಚು ಸಕ್ರಿಯವಾಗಿದ್ದ ಅಲ್ ಕಾಯಿದಾ ಬಗ್ಗೆ ಆಸಕ್ತಿ ಹೊಂದಿ, ಅಖ್ತರ್ ಹುಸೇನ್ ಸಹಾಯದಿಂದ ಕಾರ್ಯ ಕರ್ತ ರನ್ನು ಸಂಪರ್ಕಿಸಿದ್ದ. ಅದಕ್ಕಾಗಿ ನಕಲಿ ಖಾತೆಗಳನ್ನು ಸೃಷ್ಟಿಸಿ ಪೋಸ್ಟ್ ಗಳನ್ನು ಮಾಡುತ್ತಿದ್ದ. ಆದರೆ ಆಕ್ಷೇ ಪಾರ್ಹ ಪೋಸ್ಟ್‌ಗಳನ್ನು ಹಾಕುತ್ತಿದ್ದ ರಿಂದ ಟ್ವಿಟರ್, ಫೇಸ್‌ಬುಕ್ ಸಂಸ್ಥೆಗಳು ಖಾತೆಗಳನ್ನು ನಿಷ್ಕ್ರಿಯ ಗೊಳಿಸಿದ್ದವು. ಹೀಗಾಗಿ ಎನ್‌ಕ್ರಿಪ್ಟ್ ಸೋಷಿಯಲ್ ಮೀಡಿಯಾಗಳ ಮೂಲಕ ಚರ್ಚಿಸುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಯಾರೊಂದಿಗೂ ಸೇರದ ಆರೀಫ್
ಎರಡು ವರ್ಷಗಳಿಂದ ಮಂಜುನಾಥ ನಗರದಲ್ಲಿ ವಾಸ ವಾಗಿದ್ದರೂ ಆರೀಫ್ ಯಾರೊಂ ದಿಗೂ ಸೇರುತ್ತಿರಲಿಲ್ಲ. ನಮಾಜ್‌ಗೆ ಒಬ್ಬನೇ ಬಂದು ಹೋಗುತ್ತಿದ್ದ. ಹೆಚ್ಚು ಮಾತನಾಡುತ್ತಿರಲಿಲ್ಲ. ವಾರ ಕ್ಕೊಮ್ಮೆ ಅರ್ಧ ಅಥವಾ ಒಂದು ತಾಸು ಹೊರಗಡೆ ಬರುತ್ತಿದ್ದ. ಈ ಬಗ್ಗೆ ಮನೆ ಮಾಲಕರು ಹಾಗೂ ಅಕ್ಕಪಕ್ಕದ ನಿವಾಸಿಗಳು ಪ್ರಶ್ನಿಸಿದರೆ ವರ್ಕ್ ಫ್ರಂ ಹೋಮ್‌ನಲ್ಲಿ ಹೆಚ್ಚು ಕೆಲಸ ಇದೆ ಎಂದು ಸಬೂಬು ಹೇಳುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಪತ್ನಿಯ ವಿಚಾರಣೆ
ಪ್ರಕರಣದ ಸಂಬಂಧ ಆರೀಫ್ ಪತ್ನಿ ಸಫಾ ಅವರನ್ನು ವಿಚಾರಣೆಗೊಳ ಪಡಿಸಲಾಗಿದೆ. ಆಕೆ ತನ್ನ ಪತಿಯ ಕೆಲಸದ ಬಗ್ಗೆ ಮಾಹಿತಿ ಇಲ್ಲ ಎನ್ನುತ್ತಿದ್ದಾರೆ. ಆರೀಫ್ನ ಬ್ಯಾಂಕ್ ಖಾತೆಯನ್ನು ಜಪ್ತಿ ಮಾಡಲಾಗಿದ್ದು, ತನಿಖೆ ಮುಂದು ವರಿದಿದೆ ಎಂದು ಮೂಲಗಳು ತಿಳಿಸಿವೆ.