Advertisement

ನಗರಂಗೆರೆಯಲ್ಲಿ ಅದ್ಧೂರಿ ತೆಪ್ಪೋತ್ಸವ: 53 ವರ್ಷಗಳ ನಂತರ ಅದ್ಧೂರಿ ಕಾರ್ಯಕ್ರಮ

06:18 PM Dec 26, 2021 | Team Udayavani |

ಚಳ್ಳಕೆರೆ: ಪ್ರಸಕ್ತ ವರ್ಷ ಉತ್ತಮ ಮಳೆಯಿಂದಾಗಿ ಕ್ಷೇತ್ರದ ಬಹುತೇಕ ಕೆರೆಗಳು ಕೋಡಿ ಬಿದ್ದಿವೆ. ವಿಶೇಷವಾಗಿ ನಗರಂಗೆರೆ ಗ್ರಾಮದಲ್ಲಿ ಮೈಲಾರಲಿಂಗೇಶ್ವರ ದೇವರ ದೋಣಿ ಸೇವೆ ಹಾಗೂ ತೆಪ್ಪೋತ್ಸವ ನಡೆದಿದೆ ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು. ನಗರಂಗೆರೆ ಗ್ರಾಮದಲ್ಲಿ ತೆಪ್ಪೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

Advertisement

53 ವರ್ಷಗಳ ನಂತರ ನಡೆಯುತ್ತಿರುವ ತೆಪೊ³àತ್ಸವ ಈ ಭಾಗದ ಯುವಕರಿಗೆ ದೇವರ ಮೇಲಿರುವ ಭಕ್ತಿ ಹಾಗೂ ಧಾರ್ಮಿಕ ಆಚರಣೆ ಬಗ್ಗೆ ವಿಶ್ವಾಸ ಮೂಡಲು ಸಹಕಾರಿಯಾಗಿದೆ. ದೇವಸ್ಥಾನದ ವ್ಯವಸ್ಥಾಪಕರು ತೆಪ್ಪೋತ್ಸವವನ್ನು ಯಾವುದೇ ರೀತಿಯ ಲೋಪವಿಲ್ಲದೆ ಅತ್ಯಂತ ವಿಜೃಂಭಣೆಯಿಂದ ನಡೆಸಿದ್ದಾರೆ ಎಂದರು.

ಸುಮಾರು ಎರಡೂವರೆ ಗಂಟೆಗಳ ಕಾಲ ಕೆರೆಯ ವಿವಿಧ ದಿಕ್ಕಿನಲ್ಲಿ ಸಾಗಿದ ತೆಪ್ಪ, ಏಳುಮಂದಕ್ಕನ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದ ನಂತರ ಮರಳಿತು. ಕಳೆದ ಹಲವಾರು ವರ್ಷಗಳಿಂದ ಮಳೆ ಇಲ್ಲದೆ ಗ್ರಾಮದ ಕೆರೆ ಖಾಲಿಯಾಗಿತ್ತು.ಪ್ರತಿನಿತ್ಯವೂ ಮಳೆಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದೆವು. ಗ್ರಾಮದ ಅನೇಕ ಹಿರಿಯರು ಒಂದು ಅಥವಾ ಎರಡು ಬಾರಿ ಮಾತ್ರ ತೆಪ್ಪೋತ್ಸವ ಕಂಡಿದ್ದಾರೆ. ಈ ಬಾರಿಯ ತೆಪೊ³àತ್ಸವ ಗ್ರಾಮಕ್ಕೆ ಮೆರಗು ತಂದಿದೆ ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರು. ತೆಪ್ಪೋತ್ಸವ ಕಾರ್ಯಕ್ರಮದಲ್ಲಿ ಯುವ ಮುಖಂಡ ಕೆ.ಟಿ. ಕುಮಾರಸ್ವಾಮಿ, ನಗರಂಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಾತಲಿಂಗಪ್ಪ, ಜಿಪಂ ಮಾಜಿ ಸದಸ್ಯರಾದ ಶಶಿಕಲಾಸುರೇಶ್‌ ಬಾಬು, ಟಿ. ರವಿಕುಮಾರ್‌, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು, ಸದಸ್ಯರು, ಭಕ್ತರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next