ನೆಲಮಂಗಲ: ತಾಲೂಕಿನ ಟಿ.ಬೇಗೂರು ಮಾರೋಹಳ್ಳಿ ಗ್ರಾಮದ 110ಕ್ಕೂ ಹೆಚ್ಚು ಎಕರೆ ವಿಸ್ತೀರ್ಣದ ದೊಡ್ಡಕೆರೆಯಲ್ಲಿ ಶ್ರೀ ಕರಿತಿಮ್ಮರಾಯಸ್ವಾಮಿ ದೇವರ ಉತ್ಸವದ ಜೊತೆ ಅದ್ಧೂರಿ ತೆಪ್ಪೋತ್ಸವಕ್ಕೆ ತಹಶೀಲ್ದಾರ್ ಕೆ.ಮಂಜುನಾಥ್ ಹಾಗೂ ಶಾಸಕ ಡಾ.ಕೆ ಶ್ರೀನಿವಾಸಮೂರ್ತಿ ಚಾಲನೆ ನೀಡಿ ದರು. ಶ್ರೀ ಕರಿತಿಮ್ಮರಾಯ ಸ್ವಾಮಿಗೆ ವಿಶೇಷ ಅಲಂಕಾರ ಮಾಡುವ ಮೂಲಕ ತೆಪ್ಪೋತ್ಸವ ಮಾಡಲಾಯಿತು.
ಗ್ರಾಮದ ವಿಶೇಷ: ಟಿ.ಬೇಗೂರು ಗ್ರಾಮಕ್ಕೆ ತೆಪ್ಪದ ಬೇಗೂರು ಎಂಬ ಹೆಸರಿನಿಂದ ಕರೆ ಯಲಾಗುತ್ತಿತ್ತು. ಈ ಗ್ರಾಮದ ಶ್ರೀ ಕರಿತಿಮ್ಮ ರಾಯಸ್ವಾಮಿ ದೇವರ ತೆಪ್ಪದ ಉತ್ಸವವನ್ನು ದೇವಾಲಯದ ಸಮೀಪವಿದ್ದ ಕಲ್ಯಾಣಿಯಲ್ಲಿ ಮಾಡುವ ಮೂಲಕ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿತ್ತು. ಕಾಲ ನಂತರ ಕಲ್ಯಾಣಿ ನಶಿಸಿ ಹೋದ ಕಾರಣ ಟಿ.ಬೇಗೂರು, ಮಾರೋಹಳ್ಳಿ ಕೆರೆಯಲ್ಲಿ ಲೋಕಕಲ್ಯಾ ಣಕ್ಕಾಗಿ ತೆಪ್ಪೋತ್ಸವವನ್ನು ಮಾಡುತ್ತಿದ್ದಾರೆ. ಈ ಬಾರಿ ಮುನಿಯಪ್ಪ, ಬೂದಿಹಾಳ್ ಕರಿವರದಯ್ಯ ಕುಟುಂಬ, ಜಾಲಪ್ಪ,ಟಿ.ಬೇಗೂರು ಕರಿವರದಯ್ಯ ಹಾಗೂ ಗ್ರಾಮಸ್ಥರು ತೆಪ್ಪೋತ್ಸವ ನಡೆಸಿಕೊಟ್ಟರು.
ಸ್ವಾಮಿ ಮೆರವಣಿಗೆ: ಟಿ.ಬೇಗೂರಿನ ಗ್ರಾಮ ದಿಂದ ಶ್ರೀ ಕರಿತಿಮ್ಮರಾಯಸ್ವಾಮಿಯ ಉತ್ಸವಮೂರ್ತಿಯ ಮೆರವಣಿಗೆ ಮಾಡಿ ಕೆರೆಯವರೆಗೂ ಬೆಳ್ಳಿ ಪಲ್ಲಕ್ಕಿ ಉತ್ಸವದಲ್ಲಿ ಕರೆತರುವ ಮೂಲಕ ಕೆರೆಯಲ್ಲಿ ತೆಪ್ಪದ ಮೇಲೆ ದೇವರನ್ನು ಪ್ರತಿಷ್ಠಾಪಿಸಿ ಆರಾಧನೆ, ಅಷ್ಟವ ರ್ಧನ ಸೇವೆಯನ್ನು ಪ್ರಧಾನ ಅರ್ಚಕರಾದ ಪ್ರಜ್ವಲ್, ಶ್ರೀನಾಥ್,ಮಂಜುನಾಥ್, ಕೃಷ್ಣ ಮೂರ್ತಿ, ತ್ರಿವಿಕ್ರಮ ಸೇರಿದಂತೆ ಅರ್ಚಕರ ತಂಡ ಕುಂಭಾರತಿಯ ಜತೆ ಮಹಾಮಂಗಳಾರತಿ ಮಾಡಲಾಯಿತು.
ದೇವರ ದರ್ಶನ: ತಾಪಂ ಇಒ ಮೋಹನ್‌ಕುಮಾರ್, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎನ್. ಶ್ರೀನಿವಾಸ್, ಬಿಜೆಪಿ ಜಿಲ್ಲಾಉಪಾಧ್ಯಕ್ಷ ಬಿ. ಹೊಂಬಯ್ಯ, ಕಸಾಪ ಅಧ್ಯಕ್ಷ ಪ್ರದೀಪ್‌ಕುಮಾರ್, ಬೂದಿಹಾಳ್ ರಾಜಣ್ಣ, ಕಾಂಗ್ರೆಸ್ ಮುಖಂಡ ಸಪ್ತಗಿರಿ ಶಂಕರ್ ನಾಯಕ್, ಕನಕರಾಜು, ಮಾಚನಾಯಕನಹಳ್ಳಿ ನಾಗರಾಜು, ಉಮೇಶ್, ಬಿಜೆಪಿ ಮುಖಂಡ ಜಯರಾಮ್, ಹನುಮಂತರಾಜು, ಮುಖಂಡ ಮಧುಸೂಧನ್, ಕರಿವರದಯ್ಯ, ಜಾಲಪ್ಪ, ಮುನಿ ಯಪ್ಪ, ಬೂದಿಹಾಳ್‌ಮಂಜುನಾಥ್ ಮತ್ತಿತರರು ಭಾಗವಹಿಸಿ ದೇವರ ದರ್ಶನ ಪಡೆದರು.
ಈ ವೇಳೆ ತಹಶೀಲ್ದಾರ್ ಕೆ. ಮಂಜುನಾಥ್ ಮಾತನಾಡಿ, ಕೆಲವು ಉತ್ಸವಗಳು ಗ್ರಾಮದ ಜನರಲ್ಲಿ ಸಾಮರಸ್ಯ ಭಾವನೆ ಮೂಡಿಸುವ ಜತೆ ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿಸುತ್ತದೆ ಎಂದರು. ನೆಲಮಂಗಲ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎನ್. ಶ್ರೀನಿವಾಸ್ ಮಾತನಾಡಿ, ತೆಪ್ಪೋತ್ಸವ ತಾಲೂಕಿನಲ್ಲಿ ಬಹು ದೊಡ್ಡ ಉತ್ಸವವಾಗಿದೆ. ಬಹಳಷ್ಟು ವಿಶೇಷತೆಗಳನ್ನು ಒಳಗೊಂಡಿರುವ ಈ ತೆಪ್ಪೋತ್ಸವ ಜನರ ನಂಬಿಕೆಗೆ ಶಕ್ತಿ ನೀಡಿದ್ದು, ರೈತರಿಗೆ ಲಾಭದ ವಾತವರಣ ಸೃಷ್ಟಿಸಿದೆ ಎಂದರು.
9 ವರ್ಷದ ನಂತರ ತೆಪ್ಪೋತ್ಸವ ಕಾರ್ಯಕ್ರಮ: ಟಿ.ಬೇಗೂರು, ಬೂದಿಹಾಳ್, ಮಾರೋಹಳ್ಳಿ, ಬೈರನಹಳ್ಳಿ ಸೇರಿದಂತೆ 30ಕ್ಕೂ ಹೆಚ್ಚು ಗ್ರಾಮದ ಜನರು ಭಾಗವಹಿಸುವ ಟಿ.ಬೇಗೂರಿನ ತೆಪ್ಪೋತ್ಸವ 9 ವರ್ಷನಂತರ ನಡೆದಿದ್ದು, 50 ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು. ಕೆರೆ ಕೋಡಿಬಿದ್ದ ಸಮಯದಲ್ಲಿ ತೆಪ್ಪೋತ್ಸವ ಮಾಡುವ ಸಂಪ್ರದಾಯ ಈ ಭಾಗದಲ್ಲಿದ್ದು, ನೆಲಮಂಗಲದ ಅತಿ ದೊಡ್ಡ ತೆಪ್ಪೋತ್ಸವ ಕಾರ್ಯಕ್ರಮ ಇದಾಗಿದೆ.