ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ (ಜುಲೈ 04) ಆಂಧ್ರಪ್ರದೇಶದ ಖ್ಯಾತ ಸ್ವಾತಂತ್ರ್ಯ ಹೋರಾಟಗಾರ ದಿ. ಪಾಸಲಾ ಕೃಷ್ಣಮೂರ್ತಿ ಅವರ ನಿವಾಸಕ್ಕೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಪ್ರಧಾನಿ ಕೃಷ್ಣಮೂರ್ತಿ ಅವರ ಪುತ್ರಿಯ ಪಾದ ಮುಟ್ಟಿ ನಮಸ್ಕರಿಸಿ, ಆಶೀರ್ವಾದ ಪಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಸಿದ್ದರಾಮಯ್ಯ ಭೇಟಿಯಾದ ಸಿ.ಎಂ.ಇಬ್ರಾಹಿಂ; ಮಗಳ ಮದುವೆಗೆ ಆಹ್ವಾನ
ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರ ದಿ. ಪಾಸಲಾ ಕೃಷ್ಣಮೂರ್ತಿ ಅವರ ಪತ್ನಿ ಪಾಸಲಾ ಕೃಷ್ಣ ಭಾರತಿ (90ವರ್ಷ) ಅವರನ್ನು ಭೇಟಿ ಮಾಡಿದ್ದರು. ಗಾಲಿಚಕ್ರದ ಮೇಲೆ ಕುಳಿತಿದ್ದ ಕೃಷ್ಣ ಭಾರತಿ ಅವರ ಪಾದಮುಟ್ಟಿ ಪ್ರಧಾನಿ ನಮಸ್ಕರಿಸಿದ್ದು, ಆಗ ಕೃಷ್ಣಭಾರತಿ ಅವರ ತಲೆ ಮೇಲೆ ಕೈಯಿಟ್ಟು ಆಶೀರ್ವದಿಸಿದ್ದರು.
ಆಂಧ್ರಪ್ರದೇಶದ ಪಶ್ಚಿಮಗೋದಾವರಿ ಜಿಲ್ಲೆಯ ತಾಡೇಪಲ್ಲಿಗುಡೇಂ ತಾಲೂಕಿನ ವಿಪ್ಪಾರ್ರು ಗ್ರಾಮದಲ್ಲಿ ಪಾಸಲಾ ಕೃಷ್ಣಮೂರ್ತಿ ಪತ್ನಿ 1900ರಲ್ಲಿ ಜನಿಸಿದ್ದರು. 1921ರಲ್ಲಿ ಪಾಸಲಾ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಗಾಂಧಿವಾದಿ ಪಾಸಲಾ ಕೃಷ್ಣಮೂರ್ತಿ ಅವರು ಉಪ್ಪಿನ ಸತ್ಯಾಗ್ರಹ ಚಳವಳಿಯಲ್ಲಿ ಭಾಗವಹಿಸಿದ್ದು, ಒಂದು ವರ್ಷಗಳ ಕಾಲ ಜೈಲುಶಿಕ್ಷೆ ಅನುಭವಿಸಿದ್ದರು. 1978ರಲ್ಲಿ ಪಾಸಲಾ ಕೃಷ್ಣಮೂರ್ತಿ ನಿಧನರಾಗಿದ್ದರು.
ಸೋಮವಾರ(ಜುಲೈ04) ಆಂಧ್ರಪ್ರದೇಶದ ಭೀಮಾವರಂನಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಗಾರ ಅಲ್ಲೂರಿ ಸೀತಾರಾಮ ರಾಜು ಅವರ 125ನೇ ಜನ್ಮ ದಿನಾಚರಣೆಯ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲ್ಲೂರಿ ಅವರ 30 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗಳಿಸಿದರು.