Advertisement

ಶ್ರೀ ಪೇಟೆ ಬಸವೇಶ್ವರ-ನೀಲಮ್ಮನವರ ಅದ್ಧೂರಿ ವಿವಾಹ

06:22 PM Dec 01, 2022 | Team Udayavani |

ಕಂಪ್ಲಿ: ಶ್ರೀಪೇಟೆ ಬಸವೇಶ್ವರ ಮತ್ತು ನೀಲಮ್ಮನವರ ಜೋಡಿ ರಥೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಬಸವೇಶ್ವರ ಮತ್ತು ನೀಲಮ್ಮನವರ ವಿವಾಹ ಮಹೋತ್ಸವ ಜರುಗಿತು.

Advertisement

ಬಸವೇಶ್ವರ ಮತ್ತು ನೀಲಮ್ಮನವರ ವಿವಾಹ ಸಮಾರಂಭಕ್ಕಿಂತ ಮುಂಚೆ ಸದ್ಭಕ್ತರ ಸಮ್ಮುಖದಲ್ಲಿ ಸವಾಲು ಹಾಕಲಾಯಿತು. ವಿವಾಹ ವೇದಿಕೆಯಲ್ಲಿ ಕೆ.ಎಂ. ಅರುಣ್‌, ಶಾರದಾ, ಎಚ್‌. ನಾಗರಾಜ ದಂಪತಿಗಳು ವಿವಾಹ ಕಾರ್ಯ ನೆರವೇರಿಸಿದರು.

ಕಲ್ಯಾಣಚೌಕಿ ಮಠದ ಕೆ.ಎಂ. ಬಸವರವಾರ ಶಾಸ್ತ್ರಿ, ಸಾಂಗತ್ರಯ ಸಂಸ್ಕೃತ ಪಾಠಶಾಲೆಯ ಘನಮಠದಯ್ಯ ಶಾಸ್ತ್ರಿ ಹಾಗೂ ಬಿ.ಎಂ.ವಿಶ್ವನಾಥ್‌ ಶಾಸ್ತ್ರಿ ಹಾಗೂ ಸಾಂಗತ್ರಯ ಸಂಸ್ಕೃತ ಪಾಠಶಾಲೆಯ ವಿದ್ಯಾರ್ಥಿಗಳು ಮಂಗಳಮಹೋತ್ಸವದ ಧಾರ್ಮಿಕ ಕಾರ್ಯಗಳನ್ನು ನಡೆಸಿಕೊಟ್ಟರು.

ಶಾಸಕ ಜೆ.ಎನ್‌. ಗಣೇಶ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕಲ್ಗುಡಿ ವಿಶ್ವನಾಥ್‌ ಕುಟುಂಬದವರು ಭೋಜನ ವ್ಯವಸ್ಥೆ ಮಾಡಿದ್ದರು. ದೇವಸ್ಥಾನ ಸಮಿತಿ ಅಧ್ಯಕ್ಷರಾದ ಡಿ. ವೀರಪ್ಪ, ದೇವಸ್ಥಾನ ಸಮಿತಿ ಪದಾಧಿಕಾರಿಗಳಾದ ಜೌಕಿನ ಸತೀಶ್‌, ಮಣ್ಣೂರು ಶರಣಪ್ಪ, ವಸ್ತ್ರದ ಜಡೆಯ್ಯಸ್ವಾಮಿ, ಸಜ್ಜನರ ಮಂಜುನಾಥ್‌,ಯು. ಎಂ. ವಿದ್ಯಾಶಂಕರ್‌, ಜೌಕಿನ್‌ ಸತೀಶ್‌, ಪವಾಡಶೆಟ್ಟಿ ಯರ್ರಿಸ್ವಾಮಿ, ಮಣ್ಣೂರು ನವೀನ್‌, ಅರವಿ ಅಮರೇಶಗೌಡ, ಎಚ್‌.ಎಸ್‌. ವೀರೇಶ್‌, ಎಸ್‌.ಡಿ. ಬಸವರಾಜ, ಬಂಡೆಯ್ಯಸ್ವಾಮಿ, ವಾಲಿಕೊಟ್ರಪ್ಪ, ಎಸ್‌ಎಸ್‌ಎಂ ಚನ್ನಬಸವರಾಜ್‌ ಸಲಹಾ ಸಮಿತಿಯ ಪದಾಧಿಕಾರಿಗಳು ಇದ್ದರು. ಡಿ. 1ರಂದು ಆಕರ್ಷಕ ಹೂವಿನ ಪಲ್ಲಕ್ಕಿ ಉತ್ಸವ, ಡಿ. 2ರಂದು ಪೇಟೆ ಬಸವೇಶ್ವರ ಮತ್ತು ನೀಲಮ್ಮನವರ ಜೋಡಿ ರಥೋತ್ಸವ ವಿಜೃಂಭಣೆಯಿಂದ ಜರುಗಲಿದೆ.

ಡಿ.2ರಂದು ಯುವಜನತೆ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವಂತೆ ದೇವಸ್ಥಾನ ಸಮಿತಿ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಸಮಾಜದ ಹಾಗೂ ವಿವಿಧ ಸಂಘ ಸಂಸ್ಥೆಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ವೀರಶೈವ ಸಮಾಜದ ಹಿರಿಯರಾದ ಅವರಿ ಬಸವನಗೌಡ, ಕೆ.ಎಂ. ಹೇಮಯ್ಯಸ್ವಾಮಿ, ಎಸ್‌.ಎಸ್‌.ಎಂ ಚನ್ನಬಸವರಾಜ್‌, ಕಲ್ಗುಡಿ ವಿಶ್ವನಾಥ್‌, ಪಿ.ಮೂಕ್ಯಸ್ವಾಮಿ, ಟಿ.ಎಚ್‌. ಎಂ.ಗುರುಮೂರ್ತಿಸ್ವಾಮಿ, ಗೌಳೇರು ಶೇಖರಪ್ಪನವರಿಗೆ ಜೀವಮಾನದ ಸಾಧನೆಗಾಗಿ ಶ್ರೀ ಪೇಟೆ ಬಸವಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next