Advertisement

ವಿಂಬಲ್ಡನ್‌ ಟೆನಿಸ್‌ನಲ್ಲಿ ಜೊಕೋವಿಕ್‌ ಆಡಲಿದ್ದಾರೆ

11:04 PM Apr 26, 2022 | Team Udayavani |

ಲಂಡನ್‌: ಬ್ರಿಟನ್‌ಗೆ ಪ್ರವೇಶಿಸಲು ಲಸಿಕೆ ಹಾಕಿಸಿಕೊಳ್ಳುವ ಅಗತ್ಯವಿಲ್ಲದ ಕಾರಣ ಟೆನಿಸ್‌ ತಾರೆ ನೊವಾಕ್‌ ಜೊಕೋವಿಕ್‌ ಅವರಿಗೆ ಈ ಬಾರಿ ವಿಂಬಲ್ಡನ್‌ ಟೆನಿಸ್‌ ಕೂಟದ ಪ್ರಶಸ್ತಿ ಉಳಿಸಿಕೊಳ್ಳಲು ಅವಕಾಶ ನೀಡಲಾಗಿದೆ.

Advertisement

ಲಸಿಕೆ ಹಾಕಿಸಿಕೊಳ್ಳದ ಕಾರಣಕ್ಕೆ 34ರ ಹರೆಯದ ವಿಶ್ವದ ನಂಬರ್‌ ವನ್‌ ಆಟಗಾರ ಜೊಕೋವಿಕ್‌ ಅವರನ್ನು ಆಸ್ಟ್ರೇಲಿಯ ದೇಶದಿಂದ ಗಡೀಪಾರು ಮಾಡಿದ್ದರಿಂದ ಅವರು ಈ ವರ್ಷದ ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಕೂಟದಲ್ಲಿ ಭಾಗವಹಿಸಿರಲಿಲ್ಲ. ಆದರೆ ಇದೀಗ ವಿಂಬಲ್ಡನ್‌ನಲ್ಲಿ ಆಡಲು ಅವಕಾಶ ನೀಡಲಾಗಿದೆ ಎಂದು ಆಲ್‌ ಇಂಗ್ಲೆಂಡ್‌ ಕ್ಲಬ್‌ನ ಕಾರ್ಯಕಾರಿ ಮುಖ್ಯಸ್ಥ ಸ್ಯಾಲ್ಲಿ ಬೋಲ್ಟನ್‌ ಹೇಳಿದ್ದಾರೆ.

ವಿಂಬಲ್ಡನ್‌ ಕೂಟ ಜೂನ್‌ 27ರಿಂದ ಆರಂಭವಾಗಲಿದೆ. ಎಲ್ಲ ಆಟಗಾರರು ಲಸಿಕೆ ಹಾಕಿಸಿಕೊಳ್ಳುವಂತೆ ಪ್ರೋತ್ಸಾಹಿಸಲಾಗುತ್ತಿದೆ. ಇದರೆ ವಿಂಬಲ್ಡನ್‌ನಲ್ಲಿ ಈ ವರ್ಷ ಸ್ಪರ್ಧಿಸಲು ಲಸಿಕೆ ಹಾಕಿಸಿಕೊಳ್ಳಲೇಬೇಕೆಂಬ ನಿಯಮವಿಲ್ಲ ಎಂದವರು ಹೇಳಿದ್ದಾರೆ.

ಇದನ್ನೂ ಓದಿ:ಬ್ಯಾಡ್ಮಿಂಟನ್‌ ಏಷ್ಯ ಚಾಂಪಿಯನ್‌ಶಿಪ್‌: ಸಾತ್ವಿಕ್‌-ಚಿರಾಗ್‌ ದ್ವಿತೀಯ ಸುತ್ತಿಗೆ

ಇಷ್ಟರವರೆಗೆ 20 ಬಾರಿ ಗ್ರ್ಯಾನ್‌ ಸ್ಲಾಮ್‌ ಕೂಟದ ಪ್ರಶಸ್ತಿ ಗೆದ್ದಿರುವ ಜೊಕೋವಿಕ್‌ ಅವರು ಎರಡನೇ ಗರಿಷ್ಠ ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿ ಗೆದ್ದ ಸಾಧಕರ ಪಟ್ಟಿಯಲ್ಲಿ ರೋಜರ್‌ ಫೆಡರರ್‌ ಜತೆ ಸೇರಿಕೊಂಡಿದ್ದಾರೆ. 21 ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿ ಗೆದ್ದಿರುವ ರಫೆಲ್‌ ನಡಾಲ್‌ ಅಗ್ರಸ್ಥಾನದಲ್ಲಿದ್ದಾರೆ. ಜೊಕೋವಿಕ್‌ ಆರು ಬಾರಿ ವಿಂಬಲ್ಡನ್‌ ಕೂಟದ ಪ್ರಶಸ್ತಿ ಜಯಿಸಿದ್ದಾರೆ. ಕೋವಿಡ್‌ನಿಂದಾಗಿ 2020ರಲ್ಲಿ ಈ ಕೂಟ ನಡೆದಿರಲಿಲ್ಲ. 2018, 2019 ಮತ್ತು 2021ರಲ್ಲಿ ಅವರು ಸತತ 3 ಬಾರಿ ಈ ಪ್ರಶಸ್ತಿ ಜಯಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next