Advertisement

ತೆಂಕ ಗ್ರಾಮ: ಸುಂಟರಗಾಳಿ; ಹಲವು ಮನೆಗಳಿಗೆ ಹಾನಿ

08:10 AM Jul 21, 2017 | Harsha Rao |

ಪಡುಬಿದ್ರಿ: ಗುರುವಾರ ಮುಂಜಾವ 2.30ರ ಸುಮಾರಿಗೆ ಬೀಸಿದ ಸುಂಟರ ಗಾಳಿ, ಮಳೆಯಿಂದ ತೆಂಕ ಗ್ರಾಮದ ಹಲವು ಮನೆಗಳಿಗೆ ಹಾನಿ ಸಂಭವಿಸಿದೆ. ತೆಂಗು, ಮಾವು, ಹಲಸು, ಈಚಲ, ಹಾಳೆ, ಆಲ ಸಹಿತ 50ಕ್ಕೂ ಹೆಚ್ಚಿನ ಮರಗಳು ಧರಾಶಾಯಿಯಾಗಿವೆ. ಡಜನ್‌ಗೂ ಮಿಕ್ಕಿದ ವಿದ್ಯುತ್‌ ಕಂಬಗಳು ನೆಲಕ್ಕುರುಳಿವೆ. ತೆಂಕ ಗ್ರಾಮವೊಂದರಲ್ಲೇ 3 ಲಕ್ಷ ರೂ.ಗೂ ಮಿಕ್ಕಿ ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ. 

Advertisement

ತೆಂಕ ಗ್ರಾಮದ ಸಂದು ದಾಂತಿ ಗರಡಿ ಸಮೀಪದ ನಾರಾಯಣ ಪೂಜಾರಿ ಅವರ ಮನೆಯ ಪೂರ್ವ, ಪಶ್ಚಿಮ ಗೋಡೆ, ಮಾಡಿನ ಮೇಲೆ ಮರಗಳು ಉರುಳಿವೆ. ಮನೆಯ ಅಕ್ಕಪಕ್ಕದಲ್ಲಿ ನವೀನ್‌ಚಂದ್ರ ಪೂಜಾರಿಯವರಿಗೆ ಸೇರಿರುವ ತೋಟದ 4-5 ತೆಂಗಿನ ಮರಗಳ ಸಹಿತ ಮಾವು, ಹಾಳೆ, ಈಚಲ, ಹಲಸು, ಆಲ ಮುಂತಾದ ಮರಗಳು ಉರುಳಿ ಬಿದ್ದಿವೆ. ಈ ತೋಟದಲ್ಲಿ ಹಾದು ಹೋಗಿರುವ ವಿದ್ಯುತ್‌ ತಂತಿಗಳೂ ಹಾನಿಗೊಳಗಾಗಿವೆ. ಬಲವಾದ ಗಾಳಿ ಅನೇಕ ಬಲಿತ, ಬಲಯುತ ಮರಗಳನ್ನು ಅವುಗಳ ನಡುವಿನಿಂದಲೇ ತುಂಡರಿಸಿದೆ.

ಗರಡಿಯ ಪೂರ್ವ ದಿಕ್ಕಿನಲ್ಲಿರುವ ಗೋಪ ಶೆಟ್ಟಿ ಅವರ ಮನೆ ಹಿಂಬದಿ ಗೋಡೆ, ಮಾಡು ಕುಸಿದಿದೆ. ಈ ಮನೆಯ ಹೆಂಚುಗಳೂ ಹಾರಿ ಹೋಗಿದ್ದು ಸುಮಾರು 60,000 ರೂ. ನಷ್ಟ ಸಂಭವಿಸಿದೆ. ಪೂಲ ಲೀಲಾ ಆರ್‌. ಶೆಟ್ಟಿ , ಪೂಂದಾಡು ಸುಂದರ ಮೇಸಿŒ ಅವರ ಮಗ ವಿಠಲ ಅವರ ಮನೆಗೆ ಮರದ ರೆಂಬೆ ಬಿದ್ದು ನಷ್ಟ ಸಂಭವಿಸಿದೆ. 

ತೆಂಕ ಗ್ರಾಮ ಹಾಗೂ ಅಲ್ಲಿನ ಗರಡಿ ಬದಿಯಿಂದ ಪೂಂದಾಡುವರೆಗೆ ಸುಮಾರು 12 ವಿದ್ಯುತ್‌ ಕಂಬಗಳು ಧೆರೆಗೊರಗಿವೆ.

Advertisement

Udayavani is now on Telegram. Click here to join our channel and stay updated with the latest news.

Next