Advertisement
ಪುತ್ತೂರು ನಗರದ ಕಂದಾಯ ಇಲಾಖೆ ವ್ಯಾಪ್ತಿಯ ಬಹುತೇಕ ಕಚೇರಿಗಳು ಮಿನಿ ವಿಧಾನಸೌಧಕ್ಕೆ ಸ್ಥಳಾಂತರಗೊಂಡರೂ ಕೆಲವು ವರ್ಷಗಳೇ ಕಳೆದಿವೆ. ಆದರೆ ಪುತ್ತೂರು ಹೋಬಳಿಯ ನಾಡಕಚೇರಿ ನಗರಸಭೆ ಕಟ್ಟಡಕ್ಕೆ ತಾಗಿಕೊಂಡಿರುವ ಹಳೆ ಕಟ್ಟಡದಲ್ಲೇ ಬಾಕಿಯಾಗಿದೆ. ನಗರದೊಳಗಿನ ಬೇರೆ ಬೇರೆ ಇಲಾಖೆಗಳು ಸುಸಜ್ಜಿತ ಕಟ್ಟಡದಲ್ಲಿ ಇದ್ದರೂ ಗ್ರಾಮ ಚಾವಡಿಗೆ ಮಾತ್ರ ಸುಸಜ್ಜಿತ ಕಟ್ಟಡಕ್ಕೆ ಪ್ರವೇಶ ಪಡೆಯುವ ಭಾಗ್ಯ ಸಿಕ್ಕಿಲ್ಲ.ಪಾರ್ಕಿಂಗ್ ಶೂನ್ಯ!
ನಗರದ ನಗರಸಭೆ ಕಚೇರಿ ಕಟ್ಟಡದ ಕೆಳಭಾಗದಲ್ಲಿ, ಕೋರ್ಟ್ ರಸ್ತೆಗೆ ಅಭಿಮುಖವಾಗಿರುವ ಗ್ರಾಮ ಚಾವಡಿ ಕಟ್ಟಡಕ್ಕೆ 150 ವರ್ಷ ಮೀರಿದ ಇತಿಹಾಸ ಇದ್ದು ಸುಣ್ಣ-ಬಣ್ಣ ಕಾಣದೆ ಕೆಲವು ವರ್ಷಗಳೇ ಕಳೆದಿದೆ. ಮಳೆಗಾಲದಲ್ಲಿ ಸೋರುವ ಛಾವಣಿಯನ್ನು ತಾತ್ಕಾಲಿಕ ನೆಲೆಯಲ್ಲಿ ದುರಸ್ತಿಗೊಳಿಸಲಾಗಿದ್ದರೂ ಪೂರ್ಣ ಪ್ರಮಾಣದ ದುರಸ್ತಿ ಇನ್ನೂ ಬಾಕಿ ಇದೆ. ಕಿಟಿಕಿ-ಬಾಗಿಲುಗಳು ಕಳೆಗೆಟ್ಟಿದ್ದು ಹೊಸದಾಗಿ ಅಳವಡಿಸಬೇಕಿದೆ. ಶೌಚಾಲಯವೂ ಸಮರ್ಪಕವಾಗಿಲ್ಲ. ಇರುವ ವ್ಯವಸ್ಥೆಯೊಳಗೆ ಕಂದಾಯ ನಿರೀಕ್ಷಕರ ಕಚೇರಿಯನ್ನು ನಿರ್ವಹಣೆ ಮಾಡಲಾಗುತ್ತಿದ್ದು ಇದರ ಒಳಭಾಗದಲ್ಲಿ ಜಾಗವೂ ಇಕ್ಕಟ್ಟಿನದ್ದೆ. ಕುಳಿತುಕೊಳ್ಳಲು ಕಲ್ಲಿನ ಆಸನ ಇದ್ದು ನವ ನವೀನ ಪರಿಕರಗಳು ಇನ್ನೂ ಇಲ್ಲಿಗೆ ಪ್ರವೇಶ ಪಡೆದಿಲ್ಲ.
Related Articles
-ಜುಬಿನ್ ಮೊಹಾಪಾತ್ರ, ಸಹಾಯಕ ಆಯುಕ್ತ, ಪುತ್ತೂರು
Advertisement
ಏನಿದು ಕಚೇರಿ?ಗ್ರಾಮಕರಣಿಕರ ಕಚೇರಿಯಿಂದ ಭೂ ದಾಖಲೆಗೆ ಸಂಬಂಧಿಸಿ ಬರುವ ಎಲ್ಲ ಕಡತಗಳು ಕಂದಾಯ ನಿರೀಕ್ಷಕರ ಕಚೇರಿಗೆ ಬರುತ್ತವೆ. ಅಲ್ಲಿಂದ ಟಪಾಲು ಮೂಲಕ ತಹಶೀಲ್ದಾರ್ಗೆ ಸಲ್ಲಿಕೆ ಆಗುತ್ತದೆ. ಗ್ರಾಮ ಚಾವಡಿಯಲ್ಲಿ ಕಂದಾಯ ನಿರೀಕ್ಷರು ಇರುತ್ತಾರೆ. ಪುತ್ತೂರು ಗ್ರಾಮ ಚಾವಡಿಯಲ್ಲಿ ಕಂದಾಯ ನಿರೀಕ್ಷರ ಕಚೇರಿಯ ಜತೆಗೆ ಕಸಬಾ ಗ್ರಾಮಕರಣಿಕರ ಕಚೇರಿಯು ಇದೆ. ವಿವಿಧ ಕೆಲಸದ ನಿಮಿತ್ತ ತಾಲೂಕಿನ ಎಲ್ಲ ಗ್ರಾಮ ಲೆಕ್ಕಿಗರು ಇಲ್ಲಿಗೆ ಬರುತ್ತಾರೆ. ಕಸಬಾದ ಜನರು ಬರುತ್ತಾರೆ. ಪುತ್ತೂರು ಹೋಬಳಿಯ ಎಲ್ಲ ಕಂದಾಯ ಲೆಕ್ಕಾಚಾರ ಇಲ್ಲೇ ನಡೆಯುತ್ತದೆ. ಇದು ದಿನಂಪ್ರತಿ ಜನರ ಓಡಾಟ ಇರುವ ಕಚೇರಿಯು ಆಗಿದೆ. ಈ ಹಳೆ ಕಟ್ಟಡದಲ್ಲಿ ಸ್ವಾತಂತ್ರ್ಯ ಪೂರ್ವದ ಪಟೇಲರ ಅಸ್ತಿತ್ವವನ್ನು ಗುರುತಿಸುವ ಸಾಕ್ಷಿಗಳಿವೆ. ಒಳಭಾಗದ ವಿನ್ಯಾಸ ಹಳೆ ಕಟ್ಟಡಗಳ ಶೈಲಿಯಲ್ಲಿದೆ. ಪಟೇಲರ ಗೌರವಾರ್ಥ ಸಹಾಯಕ ಹಿಡಿದುಕೊಳ್ಳುವ ದಂಡ ಜೋಪಾನವಾಗಿರುವುದು ವಿಶೇಷ. ನ್ಯಾಯ ತೀರ್ಮಾನದ ಸ್ಥಳದಲ್ಲಿ ಇದನ್ನು ಹಿಡಿದುಕೊಳ್ಳಲಾಗುತ್ತದೆ. ನ್ಯಾಯಾಲ ಯದಲ್ಲಿ ಈಗಲೂ ದಂಡ ಹಿಡಿದುಕೊಳ್ಳುವ ಸಂಪ್ರದಾಯ ಮುಂದುವರಿದಿದೆ. ಗ್ರಾಮ ಚಾವಡಿಯ ಹಂಚಿನ ಮೇಲೆ ಮೂರು ಕಲಶಗಳು ಶೋಭಿಸುತ್ತಿವೆ. ದೇವಸ್ಥಾನದ ಮುಗುಳಿ (ಕಲಶ)ಯನ್ನು ಹೋಲುತ್ತಿದ್ದು, ಇದು ಮಣ್ಣಿನ ರಚನೆಯದ್ದಾಗಿದೆ. ಹೀಗಾಗಿ ಈ ಕಟ್ಟಡವನ್ನು ಪಾರಂಪರಿಕ ಕಟ್ಟಡವಾಗಿ ಉಳಿಸಿಕೊಂಡು, ಕಂದಾಯ ನಿರೀಕ್ಷಕ ಕಚೇರಿಗೆ ಬೇರೆ ಕಡೆ ಹೊಸ ಕಟ್ಟಡ ನಿರ್ಮಿಸುವುದು ಸೂಕ್ತ. -ಕಿರಣ್ ಪ್ರಸಾದ್ ಕುಂಡಡ್ಕ