Advertisement

Udupi: ಗೀತಾರ್ಥ ಚಿಂತನೆ 109: ದೇವರ ಇಚ್ಛೆ ಏನು?

11:51 PM Nov 29, 2024 | Team Udayavani |

ದೇವರ ಇಚ್ಛೆಗೆ ಪೂರಕವಾದುದು ಪುಣ್ಯ, ವಿರುದ್ಧವಾದುದು ಪಾಪ- ಇದುವೇ ಬೆಂಚ್‌ಮಾರ್ಕ್‌. ಹೀಗೆ ಹೇಳಿದರೆ ಪಕ್ಕನೆ ತಿಳಿಯುವುದಿಲ್ಲ.

Advertisement

ಸ್ಮರ್ತವ್ಯಃ ಸತತಂ ವಿಷ್ಣುರ್ವಿಸ್ಮರ್ತವ್ಯೋ ನ ಜಾತುಚಿತ್‌|
ಸರ್ವೇ ವಿಧಿನಿಷೇಧಾಃ ಸ್ಯುರೇತಯೋರೇವ ಕಿಂಕರಾಃ||
ಈ ಮಾತು ಪದ್ಮಪುರಾಣದ್ದು. ಭಗವಂತನ ಆಶಯಗಳನ್ನು ಅರಿತು ಸದಾ ಅದರಂತೆ ಬದುಕಬೇಕು ಎಂಬ ಆಶಯವನ್ನು ಈ ಹೊನ್ನುಡಿ ಹೊತ್ತಿದೆ. ಭಗವಂತನನ್ನು ಸ್ಮರಿಸುವುದು, ಆತ ವಿಧಿಸಿದ ನಿಯಮಗಳನ್ನು ಜೀವನದಲ್ಲಿ ಪಾಲಿಸುವುದು ಬಹಳ ಮುಖ್ಯ. ಅವನ ನಿಯಮಗಳನ್ನು ಮರೆತು ಖುಷಿಬಂದಂತೆ ವರ್ತಿಸುವುದು ಎಂದರೆ ನಿಷೇಧ. ವಿಧಿ ಎಂದರೆ ಶಾಸ್ತ್ರಗಳ ಮಾತುಗಳು. ಆವನ ಮಾತುಗಳನ್ನು “ಶೃತಿಸ್ಮತೀ ಮಮೈವಾಜ್ಞೆ’ ಅಂದರೆ “ಶೃತಿಸ್ಮತಿಗಳು ಹೇಳಿದಂತೆ ಬದುಕುವುದು ನನ್ನ ಆಜ್ಞೆ’ ಎಂದರಿತು ಬದುಕಬೇಕು. ಶಾಸ್ತ್ರವು ಭಗವಂತನ ಆದೇಶವಾಗಿದೆ. ಇದರಂತೆ ಬದುಕುವುದು ವಿಧಿ. ಮರೆಯುವುದು ಇದಕ್ಕೆ ವಿರುದ್ಧ. ಅದರಂತೆ ಪಂಡಿತರು ಸಾಯುವವರ ಬಗೆಗೆ ಮಾತ್ರವಲ್ಲ, ಬದುಕಿದವರ ಬಗೆಗೂ ಶೋಕಿಸುವುದಿಲ್ಲ. ಪ್ರಾಣ ಬಿಡದೆ ಇರುವವರ ಬಗೆಗೂ ಉಳಿದವರು ಕೂಡ, “ಇನ್ನೂ ಸಾಯಲಿಲ್ಲ’ ಎಂದು ತಿಳಿದು ದುಃಖೀಸುವುದೇ ಇಲ್ಲ.

-ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,

-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811

Advertisement

Udayavani is now on Telegram. Click here to join our channel and stay updated with the latest news.

Next