Advertisement

ರವೀಂದ್ರ ಕಲಾಕ್ಷೇತ್ರದಲ್ಲಿ ತೆಲುಗು ಹಬ್ಬ ಇಂದು

11:45 AM Sep 22, 2017 | |

ಬೆಂಗಳೂರು: ಕರ್ನಾಟಕ ರಾಜ್ಯ ತೆಲಂಗಾಣ ಅಸೋಸಿಯೇಷನ್‌ ಸೆ.22ರಂದು ಸಂಜೆ 4ರಿಂದ 9ರವರೆಗೆ ನಗರದ ರವೀಂದ್ರ ಕಲಾ ಕ್ಷೇತ್ರದಲ್ಲಿ ತೆಲಂಗಾಣದ ಪ್ರಮುಖ ಹಬ್ಬ “ಬತುಕಮ್ಮ ಸಂಬರಾಲು-2017′ ಹಮ್ಮಿಕೊಂಡಿದೆ. 

Advertisement

ತೆಲಂಗಾಣ ಹಾಗೂ ಆಂಧ್ರಪ್ರದೇಶ ಸಾಂಸ್ಕೃತಿಕ ಹಾಗೂ ಸಾಮಾಜಿಕ ಶೈಲಿಯನ್ನು ಪ್ರತಿಬಿಂಬಿಸುವ ಬತುಕಮ್ಮ ಸಂಬರಾಲು ಹಬ್ಬ ಸಂಭ್ರಮದ ಸಂಕೇತವಾಗಿದೆ. ವಿವಿಧ ಉದ್ದೇಶಗಳಿಗಾಗಿ ವಲಸೆ ಬಂದ ಸಾವಿರಾರು ತೆಲುಗು ಭಾಷಿಕರು ನಗರದಲ್ಲಿ ವಾಸಿಸುತ್ತಿದ್ದು, ಅವರನ್ನು ಒಗ್ಗೂಡಿಸುವ ವೇದಿಕೆ ಇದಾಗಿದೆ ಎಂದು ಅಸೋಸಿಯೇಷನ್‌ ಅಧ್ಯಕ್ಷ ಸಂದೀಪ್‌ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಬತುಕಮ್ಮ ಹಬ್ಬದಲ್ಲಿ ತೆಲಂಗಾಣದ 60ಕ್ಕೂ ಅಧಿಕ ಕಲಾ ತಂಡಗಳು ಭಾಗವಹಿಸಲಿವೆ. ತೆಲಂಗಾಣ ರಾಜ್ಯ ಪ್ರಣಾಳಿಕ ಸಂಘದ ಉಪಾಧ್ಯಕ್ಷ ಸಿಂಗಿರೆಡ್ಡಿ ನಿರಂಜನ್‌ರೆಡ್ಡಿ, ಶಾಸಕ ಪೈಳ್ಲ ಶೇಖರ್‌ರೆಡ್ಡಿ, ಐಎಎಸ್‌ ಅಧಿಕಾರಿ ಮಾಲಿ, ಐಎಫ್ಎಸ್‌ ಅಧಿಕಾರಿ ಮನೋಜ್‌ಕುಮಾರ್‌ ಸೇರಿದಂತೆ ತೆಲಂಗಾಣ ಮತ್ತು ಕರ್ನಾಟಕ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next