Advertisement

ಟೆಲಿಕಾಂ ಸಂಸ್ಥೆಗಳ‌ ಆಧಾರ್‌ ಪರೀಕ್ಷೆ!

03:50 AM Mar 26, 2017 | |

ಹೊಸದಿಲ್ಲಿ: ದರಸಮರದ ತಲೆಬಿಸಿಯಲ್ಲಿರುವ ಟೆಲಿಕಾಂ ಸಂಸ್ಥೆಗಳೀಗ “ಬೃಹತ್‌ ಆಧಾರ್‌ ಟಾಸ್ಕ್’ಗೆ ಅಣಿಯಾಗಬೇಕಿದೆ. ದೇಶದ 110 ಕೋಟಿ ಸಿಮ್‌ ಬಳಕೆದಾರರಿಂದ ಆಧಾರ್‌ ಪರಿಶೀಲನೆ ನಡೆಸಬೇಕಾದ ಮಹತ್ತರ ಹೊಣೆ ಸಂಸ್ಥೆಗಳ ಮೇಲೆ ಬಂದಿದೆ.

Advertisement

ಸಿಮ್‌ಗಳ ದುರ್ಬಳಕೆಯಿಂದ ಅಪರಾಧ ಹೆಚ್ಚುತ್ತಿರುವ ಕುರಿತು ಸುಪ್ರೀಂ ಕೋರ್ಟ್‌ ಕಳವಳ ವ್ಯಕ್ತಪಡಿಸಿ, ಫೆಬ್ರವರಿ 6ರಂದು ದೇಶದ ಎಲ್ಲ ಸಿಮ್‌ ಬಳಕೆದಾರರ ಆಧಾರ್‌ ಪರಿಶೀಲನೆಗೆ ಸೂಚಿಸಿತ್ತು. ಒಂದೂವರೆ ತಿಂಗಳ ನಂತರ ಎಚ್ಚೆತ್ತುಕೊಂಡಿರುವ ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆ ಪರಿಶೀಲನೆ ಪ್ರಕ್ರಿಯೆಯನ್ನು ಕೂಡಲೇ ಆರಂಭಿಸುವಂತೆ ಟೆಲಿಕಾಂ ಸಂಸ್ಥೆಗಳಿಗೆ ಸೂಚಿಸಿದೆ. 
ಇದರಂತೆ ಈಗ ಎಲ್ಲ ಸಂಸ್ಥೆಗಳು 2018ರ ಫೆ.6ರ ಒಳಗೆ ಆಧಾರ್‌ ಪರಿಶೀಲನೆ ಮುಗಿಸಬೇಕಿದೆ.

ಸಾವಿರ ಕೋಟಿ ವೆಚ್ಚ!: ಪರಿಶೀಲನೆಗೆ ಒಟ್ಟಾರೆ ತಗುಲುವ ವೆಚ್ಚ 1 ಸಾವಿರ ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಆಧಾರ್‌ ಪರಿಶೀಲನೆ ಪ್ರಕ್ರಿಯೆಗೂ ಮುನ್ನ ಟೆಲಿಕಾಂ ಸಂಸ್ಥೆಗಳು ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಈ ಕುರಿತು ಜಾಹೀರಾತು ಪ್ರಕಟಿಸಲು ಸೂಚಿಸಲಾಗಿದೆ. 

ಪರಿಶೀಲನೆ ಹೇಗಾಗುತ್ತೆ?
ಗ್ರಾಹಕರಿಂದ ಆಧಾರ್‌ ಕೆವೈಸಿ ಅರ್ಜಿ ಭರ್ತಿ
ಎಸ್ಸೆಮ್ಮೆಸ್‌ ಮೂಲಕ ವೆರಿಫಿಕೇ ಶನ್‌ ಕೋಡ್‌ ಕಳುಹಿಸಲಾಗುತ್ತೆ.
ಗ್ರಾಹಕ ಕೋಡ್‌ ದೃಢಪಡಿಸಿದ ಮೇಲೆ ವ್ಯಕ್ತಿ ಸಿಮ್‌ ಬಳಸುತ್ತಿದ್ದಾ ನೆಂಬ ಮಾಹಿತಿ ರವಾನೆ
ನಂತರವಷ್ಟೇ ಗ್ರಾಹಕನ ಸಿಮ್‌ ಅನ್ನು ನ್ಯಾಯಬದ್ಧ ಎಂದು ಪರಿಗಣಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next