Advertisement
ಅಲ್-ಖರ್ದ್ ಅಲ್-ಹಸನ್ ಹೆಜ್ಬುಲ್ಲಾದ ಭಯೋತ್ಪಾದನ ಚಟುವಟಿಕೆಗಳಿಗೆ ಹಣ ಸಹಾಯ ಮಾಡುತ್ತಿದೆ ಎಂದು ಇಸ್ರೇಲ್ ಆರೋಪಿಸಿದೆ. ಇದೇ ವೇಳೆ, ಬೈರುತ್‌ನ ಉಪ ನಗರ ಗಳಲ್ಲಿ 10ಕ್ಕೂ ಹೆಚ್ಚು ವೈಮಾನಿಕ ದಾಳಿಗಳು ನಡೆದಿದ್ದು, ಇಲ್ಲಿನ ನಾಗರಿಕ ಕಟ್ಟಡಗಳನ್ನು ಗುರಿಯಾಗಿಸಲಾಗಿದೆ ಎಂದು ಬೈರುತ್‌ನ ಘೋಬೈರಿ ಉಪನ ಗರದ ಮೇಯರ್ ಆರೋಪಿಸಿದ್ದಾರೆ. ದಾಳಿಗೂ ಮುನ್ನ ರವಿವಾರ ಇಸ್ರೇಲ್ ಅಲ್-ಖರ್ದ್ ಅಲ್-ಹಸನ್ ಕಟ್ಟಡ ಗುರಿಯಾಗಿಸಿ ದಾಳಿ ನಡೆಸುವುದಾಗಿ ಟ್ವೀಟ್ ಮಾಡಿ ಎಚ್ಚರಿಸಿತ್ತು.
2023ರ ಅ.7ರ ದಾಳಿ ರೂವಾರಿ, ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವರ್ ಪತ್ನಿ ಅಬು ಜಮಾರ್ ದಾಳಿ ಯ ಹಿಂದಿನ ದಿನ ಗಾಜಾದ ಸುರಂ ಗವೊಂದಕ್ಕೆ ಹೋಗುವ ವೀಡಿಯೋ ಸಿಕ್ಕಿದೆ. ಆಕೆ ಬಳಿಯಿದ್ದ 26.89 ಲಕ್ಷ ರೂ.ನ ಹರ್ಮೀಸ್ ಬಕೀನ್ ಬ್ಯಾಗ್ ಬಗ್ಗೆ ಚರ್ಚೆ ಶುರುವಾಗಿದೆ.