ಬೆಂಗಳೂರು: ದೆಹಲಿ ಸೇರಿದಂತೆ ದೇಶದ ವಿವಿಧೆಡೆ ರೈತರ ಹೆಸರಿನಲ್ಲಿ ಪ್ರತಿಭಟನೆ ನಡೆಸುತ್ತಿರುವವರು ಕಾಂಗ್ರೆಸ್ ಕೃಪಾಪೋಷಿತ ನಾಟಕ ಮಂಡಳಿಯ ಸದಸ್ಯರು ಎಂದು ಸಂಸದ ತೇಜಸ್ವಿಸೂರ್ಯ ಆರೋಪಿಸಿದರು.
ನಗರದ ಕರ್ನಾಟಕ ಸಣ್ಣ ಕೈಗಾರಿಕಾ ಸಂಘ (ಕಾಸಿಯಾ)ದಲ್ಲಿ ಭಾನುವಾರ “ಕೃಷಿ ಸುಧಾರಣಾ ಕಾಯ್ದೆ- ವಿಮರ್ಶೆ’ ಕುರಿತ “ಸಂಸದ್ ಧ್ವನಿ’ಯಲ್ಲಿ ಅವರು ಮಾತನಾಡಿದರು. ಈ ಹಿಂದೆ ಇದ್ದ ಅಗತ್ಯ ಸರಕುಗಳ ಕಾಯ್ದೆ’ಬ್ರಿಟಿಷರು ರೂಪಿಸಿದ್ದು. ಅದು ವಸಾಹತುಶಾಹಿಹಿತಾಸಕ್ತಿಯನ್ನು ಒಳಗೊಂಡಿತ್ತು. ಇದಕ್ಕೆ ತಿದ್ದುಪಡಿ ತಂದು ರೈತರ ಹಿತ ಕಾಯುವ ಕಾಯ್ದೆಯನ್ನು ಕೇಂದ್ರ ಸರ್ಕಾರ ರೂಪಿಸಿದೆ. ಇದು ಸೇರಿದಂತೆ ಮೂರೂ ಮಸೂದೆಗಳು ದಶಕಗಳಿಂದ ರೈತರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳಿಗೆಪರಿಹಾರ ನೀಡುತ್ತದೆ. ಆದರೆ, ಕೆಲವೇ ಕೆಲ ರೈತರು ಇದರ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಅವರು ಕಾಂಗ್ರೆಸ್ ಕೃಪಾಪೋಷಿತ ನಾಟಕ ಮಂಡಳಿಯ ಸದಸ್ಯರಾಗಿದ್ದಾರೆ ಎಂದು ದೂರಿದರು.
ಉದ್ಯಮಿ ತನ್ನ ಉತ್ಪನ್ನವನ್ನು ಬೇಕಾದ ದರಕ್ಕೆ ಯಾವುದೇ ವ್ಯಕ್ತಿಗೆ ಮಾರಾಟ ಮಾಡಲು ಸಂಪೂರ್ಣ ಸ್ವಾತಂತ್ರ್ಯ ಹೊಂದಿದ್ದಾನೆ. ಆದರೆ, ರೈತನಿಗೆ ಈ ಹಕ್ಕುಯಾಕಿಲ್ಲ? ಖಾಸಗಿ ಉದ್ಯಮಿಗಳು ರೈತರನ್ನು ಸುಲಿಗೆ ಮಾಡಬಹುದು ಅಥವಾ ವಂಚಿಸಬಹುದು ಎಂಬ ವಾದವನ್ನು ಕೆಲವರು ಮುಂದಿಡುತ್ತಾರೆ. ಹಾಗಿದ್ದರೆ, ಕೃಷಿಯ ಭಾಗವಾದ ಹೈನುಗಾರಿಕೆಯಲ್ಲಿ ಇದು ಯಾಕೆ ಆಗುತ್ತಿಲ್ಲ? ಅಲ್ಲಿ ಕೂಡ ಖಾಸಗಿ ಕಂಪನಿಗಳು ರೈತರಿಂದ ಹಾಲು ಖರೀದಿಸುತ್ತಿವೆ. ಹಾಲು ಉತ್ಪಾದನಾ ಸಂಘಗಳ ಮಾದರಿಯಲ್ಲೇ ರೈತ ಉತ್ಪಾದಕರ ಸಂಘಗಳನ್ನು ಮಾಡಿ, ರೈತರ ಹಿತ ಕಾಯುವುದು ಸರ್ಕಾರದ ಕನಸು. ಇದರಿಂದ ಯಾವ ಸಮಸ್ಯೆ ಆಗುತ್ತದೆ? ಕಾಯ್ದೆಗಳ ಕುರಿತು ತಾರ್ಕಿಕವಾಗಿ ಯಾಕೆ ಪ್ರತಿಭಟನಾಕಾರರು ಮಾತನಾಡುತ್ತಿಲ್ಲ ಎಂದು ಕೇಳಿದರು.
ಎಪಿಎಂಸಿಯಲ್ಲಿ ತಮ್ಮ ಹಿಡಿತ ತಪ್ಪುತ್ತದೆ ಎಂಬ ಕಾರಣಕ್ಕೆ ಕೆಲ ರೈತರು ದೆಹಲಿಯಲ್ಲಿವಿರೋಧಿಸುತ್ತಿದ್ದಾರೆ. ಉಳಿದ ಶೇ. 90 ರೈತರುಮೌನ ವಹಿಸಿರುವುದರಿಂದ ಪ್ರತಿರೋಧದ ದನಿಯೇಪ್ರತಿಧ್ವನಿಸುತ್ತಿದೆ.ಆದ್ದರಿಂದಮಸೂದೆಗಳ ಬಗ್ಗೆ ಮನದಟ್ಟು ಮಾಡುವ ಕೆಲಸ ಯುವಕರಿಂದ ಆಗಬೇಕಿದೆ ಎಂದರು.
ಬ್ಯಾಕ್ ಟು ವಿಲೇಜ್ ಸಂಸ್ಥಾಪಕ ಮನೀಶ್‌ಕುಮಾರ್ ಮಾತನಾಡಿ, ನೂತನ ಕಾಯ್ದೆಗಳ ಹಿಂದೆಕನಿಷ್ಠ ಬೆಂಬಲ ಬೆಲೆ ತೆಗೆದುಹಾಕುವ ಉದ್ದೇಶ ಇದೆ ಎಂದು ಆರೋಪಿಸಲಾಗುತ್ತಿದೆ. ಇದು ಸತ್ಯಕ್ಕೆ ದೂರವಾದುದು ಎಂದು ಹೇಳಿದರು.