Advertisement

Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ

02:18 PM Jan 03, 2025 | keerthan |

ಶಿವಮೊಗ್ಗ: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ. ರಾಜ್ಯದಲ್ಲಿ ಇನ್ನು ಯಾವುದೇ ಗೋಶಾಲೆ ಮಾಡಲ್ಲ ಎನ್ನುವ ನಿರ್ಧಾರ ಕೈಗೊಂಡಿದ್ದಾರೆ. ಹಿಂದೂ ಸಮಾಜ ಏನು ಮಾಡಿದರೂ ತಡೆದುಕೊಳ್ಳುತ್ತದೆ ನಡೆಯುತ್ತದೆ ಎಂದುಕೊಂಡಿದ್ದಾರೆ. ಇಡೀ ಹಿಂದೂ ಸಮಾಜ ರಾಜ್ಯದಲ್ಲಿ ಜಾಗೃತವಾಗಿ ಏನಾಗುತ್ತದೋ ಗೊತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಗಮನಿಸಬೇಕು. ಮುಂದೆ ಏನೇ ಆದರೂ ರಾಜ್ಯ ಸರಕಾರವೇ ಹೊಣೆ ಎಂದು ‌ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದೆ ಬಿಜೆಪಿ ಸರಕಾರವಿದ್ದಾಗ ಪ್ರತಿ ಜಿಲ್ಲೆಗೊಂದರಂತೆ ಗೋಶಾಲೆ ಆರಂಭ ಮಾಡಬೇಕೆಂದು ತೀರ್ಮಾನವಾಗಿತ್ತು. ರಾಜ್ಯದಲ್ಲಿ 14 ಗೋಶಾಲೆ ಇತ್ತು, ಉಳಿದ 24 ಗೋಶಾಲೆ ಆರಂಭ ಮಾಡುತ್ತಾರೆ ಅಂದುಕೊಂಡಿದೆ. ಆದರೆ ರಾಜ್ಯದಲ್ಲಿ ಇನ್ನು ಯಾವುದೇ ಗೋಶಾಲೆ ಮಾಡಲ್ಲ ಎನ್ನುವ ನಿರ್ಧಾರ ಕೈಗೊಂಡಿದ್ದಾರೆ. ಗೋಶಾಲೆಗೆ ಯಾವುದೇ ಗೋವು ಬರುತ್ತಿಲ್ಲ ಅದಕ್ಕೆ ಗೋಶಾಲೆ ಆರಂಭ ಮಾಡಲ್ಲ ಎಂದಿದ್ದಾರೆ. ಶಿವಮೊಗ್ಗದಲ್ಲೇ 3-4 ಗೋಶಾಲೆ ನಡೆಯುತ್ತಿವೆ. ಇನ್ನು ಯಾವ ಗೋಶಾಲೆ ತೆರೆಯಲು ಅವಕಾಶ ಕೊಡಲ್ಲ ಎನ್ನುತ್ತಿದ್ದಾರೆ. ಅನೇಕ ಉರ್ದು ಶಾಲೆ ಮದರಸಾಗಳಲ್ಲಿ ಮಕ್ಕಳಿಲ್ಲ ಅವುಗಳನ್ನು ಮುಚ್ಚಿಸಿದರಾ ಎಂದು ಪ್ರಶ್ನಿಸಿದರು.

ಕಿಡಿಗೇಡಿಗಳು ಮೃತ್ಯುಂಜಯ ‌ನದಿಗೆ ಗೋಮಾಂಸ ಹಾಕಿದ್ದಾರೆ. ಗೋಮಾಂಸ ತ್ಯಾಜ್ಯ ನೇತ್ರಾವತಿ ನದಿಗೆ ಸೇರುತ್ತದೆ. ಹಿಂದೂಗಳು ಸ್ನಾನ ಮಾಡುವ ನದಿಯನ್ನು ಅಪವಿತ್ರ ಮಾಡಲು ಹೊರಟ್ಟಿದ್ದಾರೆ. ಗೋಹತ್ಯೆ ನಿಷೇಧ ಕಾನೊನು ಬಿಜೆಪಿ ಸರಕಾರ ಜಾರಿಗೆ ತಂದಿತ್ತು. ಹಿಂದೂಗಳಿಗೆ ಏನೇನು ತೊಂದರೆ ಕೊಡಬೇಕೋ ಎಲ್ಲಾ ಕೊಡುತ್ತಿದ್ದಾರೆ. ಆದರೂ ಈ ಸರಕಾರ ಕಣ್ಣು ಮುಚ್ಚಿ ಕುಳಿತಿದೆ. ರಾಜ್ಯ ಸರಕಾರ ಹಿಂದುಗಳ ಮನಸು ನೋಯಿಸುತ್ತಿದೆ. ಎಲ್ಲಾ ಜಿಲ್ಲೆಗಳಲ್ಲಿ ಗೋಶಾಲೆ ತೆರೆಯಬೇಕು. ನೇತ್ರಾವತಿ ನದಿ ಅಪವಿತ್ರ ಮಾಡುವವರ ವಿರುದ್ದ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರಾಜ್ಯದಲ್ಲಿ ಮುಂದೆ ಆಗುವ ಅನಾಹುತಕ್ಕೆ ರಾಜ್ಯ ಸರಕಾರ ಹೊಣೆಯಾಗ್ತದೆ ಎಂದರು.

ಬಸ್ ದರ ಏರಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಈ ಬಗ್ಗೆ ಈಗಲೇ ನಾನು ಏನು ಹೇಳಲ್ಲ. ಮುಂದೆ ನೋಡಿ ಇನ್ನು ಏನೇನು ಜಾಸ್ತಿಯಾಗ್ತದೆ. ಸಾಲ ಮಾಡಿ ಗ್ಯಾರೆಂಟಿ ಯೋಜನೆ ಜಾರಿಗೆ ತಂದರೆ ಇನ್ನು ಏನಾಗುತ್ತದೆ ಎಂದರು.‌

ಪ್ರಿಯಾಂಕ್ ಖರ್ಗೆ ಡೆತ್ ನೋಟಿನಲ್ಲಿ ನನ್ನ ಹೆಸರು ಇಲ್ಲ ಎನ್ನುತ್ತಾರೆ. ಬಿಜೆಪಿಯವರು ಪ್ರಿಯಾಂಕ್ ಖರ್ಗೆ ಹೆಸರಿದೆ ರಾಜೀನಾಮೆ ತಗೊಳ್ಳಿ ಎನ್ನುತ್ತಿದ್ದಾರೆ. ನನ್ನ ಮೇಲೆ ಆರೋಪ ಬಂದಾಗ ನಾನು ಆ ದಿನವೇ ರಾಜೀನಾಮೆ ಕೊಟ್ಟೆ. ಭಗವಂತನ ದಯೆಯಿಂದ ನನ್ನ ವಿರುದ್ದ ತನಿಖೆ ನಡೆದು ನಿರ್ದೋಷಿ ಎಂದಾಗಿತ್ತು  ನನಗೆ ಯಾರು ಯಾರು ತೊಂದರೆ ಕೊಟ್ಟರು ಅವರೆಲ್ಲಾ ಈಗ ಅನುಭವಿಸುತ್ತಿದ್ದಾರೆ. ಭಗವಂತ ಇದ್ದಾನೆ, ಹೀಗಾಗಿಯೇ ಅವರೆಲ್ಲಾ ಅನುಭವಿಸುತ್ತಿದ್ದಾರೆ. ಮುಂದೆಯೂ ಅನುಭವಿಸುತ್ತಾರೆ. ಭಗವಂತ ಇದ್ದಾನೆ ಎನ್ನುವುದನ್ನು ನೆನಪಿಟ್ಟುಕೊಂಡು ಸಂಬಂಧಪಟ್ಟವರು ಯೋಚನೆ ಮಾಡಲಿ. ತಪ್ಪಿತಸ್ಥರ ವಿರುದ್ದ ಭಗವಂತ‌ ನೋಡಿಕೊಳ್ಳುತ್ತೇನೆ. ಈಗಾಗಲೇ ಹಲವರು ಅನುಭವಿಸುತ್ತಿದ್ದಾರೆ ಮುಂದೆಯೂ ಅನುಭವಿಸುತ್ತಾರೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next