Advertisement

ಏಕದಿನ ಅಭ್ಯಾಸ ಆರಂಭಿಸಿದ ಟೀಮ್‌ ಇಂಡಿಯಾ

10:38 PM Jan 17, 2022 | Team Udayavani |

ಪಾರ್ಲ್: ಕೆ.ಎಲ್‌. ರಾಹುಲ್‌ ನೇತೃತ್ವದ ಭಾರತ ತಂಡ ಇಲ್ಲಿನ “ಬೋಲ್ಯಾಂಡ್‌ ಪಾರ್ಕ್‌’ನಲ್ಲಿ ಏಕದಿನ ಸರಣಿಗಾಗಿ ಅಭ್ಯಾಸ ಆರಂಭಿಸಿದೆ. 3 ಪಂದ್ಯಗಳ ಮುಖಾಮುಖಿ ಬುಧವಾರ ಇಲ್ಲಿ ಮೊದಲ್ಗೊಳ್ಳಲಿದೆ.

Advertisement

ಕೋಚ್‌ ರಾಹುಲ್‌ ದ್ರಾವಿಡ್‌ ಮತ್ತು ನಾಯಕ ಕೆ.ಎಲ್‌. ರಾಹುಲ್‌ ಸೇರಿಕೊಂಡು ಸರಣಿಗಾಗಿ ಕಾರ್ಯತಂತ್ರ ರೂಪಿಸುತ್ತಿರುವ ಚಿತ್ರವೊಂದನ್ನು ಬಿಸಿಸಿಐ ಟ್ವೀಟ್‌ ಮಾಡಿದೆ. ಜತೆಗೆ ಅಭ್ಯಾಸದ ಕೆಲವು ಚಿತ್ರಗಳನ್ನೂ ಪ್ರಕಟಿಸಿದೆ. ಮಾಜಿ ನಾಯಕ ವಿರಾಟ್‌ ಕೊಹ್ಲಿ ಕೂಡ ಈ ತಂಡದ ಸದಸ್ಯರಾಗಿದ್ದಾರೆ.

“ಒಡಿಐ ಮೂಡ್‌! ನಾವಿಲ್ಲಿ ಬೋಲ್ಯಾಂಡ್‌ ಪಾರ್ಕ್‌ನಲ್ಲಿ ಏಕದಿನ ಸರಣಿಯ ಸಿದ್ಧತೆ ಆರಂಭಿಸಿದ್ದೇವೆ’ ಎಂದು ಬಿಸಿಸಿಐ ಟ್ವೀಟ್‌ ಮಾಡಿದೆ.

ಟೆಸ್ಟ್‌ ಸರಣಿಯಲ್ಲಿ 1-0 ಅಂತ ರದಿಂದ ಮುಂದಿದ್ದ ಭಾರತ, ಅಂತಿಮವಾಗಿ 1-2ರಿಂದ ಸೋತು ನಿರಾಸೆ ಅನುಭವಿಸಿದೆ. ದಕ್ಷಿಣ ಆಫ್ರಿಕಾದಲ್ಲಿ ಮೊದಲ ಸಲ ಸರಣಿ ಗೆಲ್ಲುವ ಅವಕಾಶವನ್ನು ಮತ್ತೂಮ್ಮೆ ಕಳೆದುಕೊಂಡಿದೆ. ಇದಕ್ಕೆ ಏಕದಿನದಲ್ಲಿ ಸೇಡು ತೀರಿಸಿಕೊಂಡೀತೇ ಎಂಬುದು ಕ್ರಿಕೆಟ್‌ ಅಭಿಮಾನಿಗಳ ನಿರೀಕ್ಷೆ.

ಸರಣಿಯ ಮೊದಲೆರಡು ಪಂದ್ಯ ಗಳು ಪಾರ್ಲ್ನಲ್ಲಿ ನಡೆಯಲಿವೆ (ಜ. 19 ಮತ್ತು 21). ಅಂತಿಮ ಪಂದ್ಯ ಜ. 23ರಂದು ಕೇಪ್‌ಟೌನ್‌ನಲ್ಲಿ ನಡೆಯಲಿದೆ.

Advertisement

ಸಿರಾಜ್‌ ಚೇತರಿಕೆ
ಟೆಸ್ಟ್‌ ಸರಣಿಯ ವೇಳೆ ಗಾಯಾಳಾ ಗಿದ್ದ ವೇಗಿ ಮೊಹಮ್ಮದ್‌ ಸಿರಾಜ್‌ ಸಂಪೂರ್ಣ ಚೇತರಿಸಿಕೊಂಡಿದ್ದು, ಏಕದಿನ ಸರಣಿಗೆ ಲಭ್ಯರಾಗಲಿದ್ದಾರೆ ಎಂದು ತಂಡದ ಆಡಳಿತ ಮಂಡಳಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next