Advertisement

ಆಗಸ್ಟ್‌ ನಲ್ಲಿ ಟೀಮ್‌ ಇಂಡಿಯಾದಿಂದ ದ. ಆಫ್ರಿಕಾ ಪ್ರವಾಸ?

12:51 AM May 22, 2020 | Sriram |

ಹೊಸದಿಲ್ಲಿ: ಮೂರು ಪಂದ್ಯಗಳ ಟಿ20 ಸರಣಿಗಾಗಿ ಭಾರತ ಕ್ರಿಕೆಟ್‌ ತಂಡ ಮುಂದಿನ ಆಗಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾಕ್ಕೆ ಪ್ರವಾಸಗೈಯುವ ಸಾಧ್ಯತೆಯೊಂದು ಗೋಚರಿಸಿದೆ. ಆದರೆ ಇದು ಎರಡೂ ಸರಕಾರಗಳ ಒಪ್ಪಿಗೆಯನ್ನು ಅವಲಂಬಿಸಿದೆ ಎಂದು ಕ್ರಿಕೆಟ್‌ ವೆಬ್‌ಸೈಟ್‌ ಒಂದು ವರದಿ ಮಾಡಿದೆ.

Advertisement

ಈ ಸರಣಿ ಬಗ್ಗೆ ಕಳೆದ ಫೆಬ್ರವರಿಯಲ್ಲೇ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಮತ್ತು ಕ್ರಿಕೆಟ್‌ ಸೌತ್‌ ಆಫ್ರಿಕಾದ (ಸಿಎಸ್‌ಎ) ನಿರ್ದೇಶಕ ಗ್ರೇಮ್‌ ಸ್ಮಿತ್‌ ಮಾತುಕತೆ ನಡೆಸಿದ್ದರು. ಕೋವಿಡ್ 19ದಿಂದಾಗಿ ಈ ಮಾತುಕತೆ ಅರ್ಧದಲ್ಲೇ ನಿಂತಿತ್ತು. ಬುಧವಾರ ಇದು ಅಂತಿಮಗೊಂಡಿದೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಾಕಸ್‌ ಫೌಲ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಆದರೆ ಆಗಸ್ಟ್‌ನಲ್ಲಷ್ಟೇ ಇದನ್ನು ಅಧಿಕೃತಗೊಳಿ ಸಲಾಗುವುದು, ಇದಕ್ಕೆ ಎರಡೂ ಕಡೆಯ ಸರಕಾರಗಳ ಒಪ್ಪಿಗೆ ಅತ್ಯಗತ್ಯ ಎಂಬುದಾಗಿ ಫೌಲ್‌ ಸ್ಪಷ್ಟಪಡಿಸಿದ್ದಾರೆ.

2018ರಲ್ಲಿ ಭಾರತ ಮೇಲುಗೈ
2018ರ ಆರಂಭದಲ್ಲಿ ಭಾರತ ಕ್ರಿಕೆಟ್‌ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿತ್ತು. ಆಗ 3 ಟೆಸ್ಟ್‌, 6 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನು ಆಡಿತ್ತು. ಟೆಸ್ಟ್‌ ಸರಣಿಯನ್ನು 1-2 ಅಂತರದಿಂದ ಕಳೆದುಕೊಂಡ ಬಳಿಕ ತಿರುಗಿ ಬಿದ್ದ ಟೀಮ್‌ ಇಂಡಿಯಾ ಏಕದಿನ ಸರಣಿಯನ್ನು 5-1ರಿಂದ ಹಾಗೂ ಟಿ20 ಸರಣಿಯನ್ನು 2-1ರಿಂದ ವಶಪಡಿಸಿಕೊಂಡಿತ್ತು.

ಅನಂತರ ಕಳೆದ ಅಕ್ಟೋಬರ್‌ನಲ್ಲಿ ಭಾರತಕ್ಕೆ ಪ್ರವಾಸ ಬಂದ ದಕ್ಷಿಣ ಆಫ್ರಿಕಾ, 3 ಪಂದ್ಯಗಳ ಟಿ20 ಸರಣಿಯಲ್ಲಿ 1-2 ಅಂತರದ ಸೋಲನುಭವಿಸಿತು. ಫೆಬ್ರವರಿಯಲ್ಲಿ 3 ಪಂದ್ಯಗಳ ಏಕದಿನ ಸರಣಿ ನಡೆಯಬೇಕಿತ್ತು. ಮೊದಲ ಪಂದ್ಯ ಮಳೆಯಿಂದ ವಾಶೌಟ್‌ ಆಯಿತು. ಅಷ್ಟರಲ್ಲಿ ಕೋವಿಡ್ 19 ತೀವ್ರಗೊಳ್ಳಲಾರಂಭಿಸಿದ್ದರಿಂದ ಸರಣಿಯನ್ನೇ ರದ್ದು ಮಾಡಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next