ತುಮಕೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕದಿಂದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎಂ.ಆರ್. ಕಾಮಾಕ್ಷಿ ಮೂಲಕ ಬುಧವಾರ ಮನವಿ ಸಲ್ಲಿಸಿದರು.
ನಂತರ ಸಂಘದ ಜಿಲ್ಲಾಧ್ಯಕ್ಷ ಷಣ್ಮುಖಪ್ಪ ಮಾತನಾಡಿ, ಆಂಗ್ಲಭಾಷಾ ಶಿಕ್ಷಕರು, ವಿಜ್ಞಾನ ಶಿಕ್ಷಕರು, ಎಲ್‌ಪಿಎಸ್ ಮತ್ತು ಎಚ್‌ಪಿಎಸ್ ಶಾಲೆ ಆಯ್ಕೆ ಮಾಡಿಕೊಳ್ಳಲು ಆಂಗ್ಲಭಾಷಾ ಶಿಕ್ಷಕರಿಗೆ ಅವಕಾಶ ಮಾಡಿಕೊಡಬೇಕು. ಅಂತರ್‌ಘಟಕ ವರ್ಗಾವಣೆ ನಿಗದಿಪಡಿಸಿರುವ ಶೇ.2ರ ಮಿತಿಯನ್ನು ಶೇ.6ಕ್ಕೆ ಹೆಚ್ಚಿಸಬೇಕು, ಶೇ.25 ಖಾಲಿ ಹುದ್ದೆಗಳಿರುವ ತಾಲೂಕಿನಲ್ಲಿ ಶಿಕ್ಷಕರಿಗೆ ವರ್ಗಾವಣೆ ಅವಕಾಶವಿಲ್ಲ ಎಂಬ ನಿಯಮ ರದ್ದುಪಡಿಸಬೇಕು ಎಂದರು.
ಖಾಲಿ ಹುದ್ದೆಗಳ ಸೃಷ್ಟಿಮಾಡಬೇಕು: ಪತಿ, ಪತ್ನಿ ಪ್ರಕರಣ ಪರಸ್ಪರ ವರ್ಗಾವಣೆಗಳನ್ನು ಸೇವಾವಧಿಯಲ್ಲಿ ಕನಿಷ್ಠ ಮೂರು ಬಾರಿಗೆ ಅವಕಾಶ ನೀಡಬೇಕು, ವಲಯ ವರ್ಗಾವಣೆ ಎ ವಲಯಕ್ಕೆ ಸೀಮಿತ ಮಾಡದೇ ಎಲ್ಲಾ ವಲಯದ ಶಿಕ್ಷಕರಿಗೆ ವಲಯ ವರ್ಗಾವಣೆ ಎಂಬ ನಿಯಮ ಜಾರಿಗೊಳಿಸಬೇಕು, ಕಳೆದ ಬಾರಿ ಕಡ್ಡಾಯ ಮತ್ತು ಹೆಚ್ಚುವರಿ ವರ್ಗಾ ವಣೆಗೊಂಡಿರುವವರಿಗೆ ಈ ಬಾರಿ ಪ್ರಥಮ ಆದ್ಯತೆ ಮೇರೆಗೆ ಎಲ್ಲಾ ವಿಧದ ವರ್ಗಾವಣೆಗೆ ಅವಕಾಶ ನೀಡಬೇಕು. ದಿ ಶಿಕ್ಷಕರಿಗೆ ಕೌನ್ಸೆಲಿಂಗ್‌ನಲ್ಲಿ ಸ್ಥಳ ಆಯ್ಕೆ ಮಾಡಿಕೊಳ್ಳಲು ಖಾಲಿ ಹುದ್ದೆಗಳ ಸೃಷ್ಟಿಮಾಡಬೇಕು ಎಂದು ಮನವಿ ಮಾಡಿದರು.
ಪ್ರಥಮ ಆದ್ಯತೆ ನೀಡಿ: 10 ವರ್ಷಗಳ ವರೆಗೂ ಒಂದೇ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿ ಒಮ್ಮೆಯೂ ವರ್ಗಾವಣೆಯಾಗದ ಶಿಕ್ಷಕರಿಗೆ ಅವರ ಮೂಲ ಜಿಲ್ಲೆಗೆ ವರ್ಗಾವಣೆ ಹೊಂದಲು ಅವಕಾಶ ಕಲ್ಪಿಸಬೇಕು. 2018-19ನೇ ಸಾಲಿನ ಕಡ್ಡಾಯ ವರ್ಗಾವಣೆಗೆ ಸಂಬಂಧಿಸಿ ದಂತೆ ಬಿಆರ್‌ಪಿ, ಸಿಆರ್‌ಪಿಗಳಿಗೆ ಈ ಬಾರಿ ಪ್ರಥಮ ಆದ್ಯತೆ ವರ್ಗಾವಣೆ ನೀಡಬೇಕು. ದಿವ್ಯಾಂಗ ಶಿಕ್ಷಕರಿಗೆ ಸೇವಾವಧಿಯಲ್ಲಿ ಒಂದು ಬಾರಿ ವರ್ಗಾವಣೆ ಎನ್ನುವ ನಿಯಮ ರದ್ದುಪಡಿಸಬೇಕು ಎಂದು ಹೇಳಿದರು.
ಶೇಕಡಾವಾರು ನಿಗದಿಗೊಳಿಸಿ: ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಜಿ.ತಿಮ್ಮೇಗೌಡ ಮಾತ ನಾಡಿ, ಕೋರಿಕೆ ವರ್ಗಾವಣೆ ಬಯಸಿದ ಶಿಕ್ಷಕರಿಗೆ ಆದ್ಯತಾ ಪಟ್ಟಿಯನ್ನು ತಯಾರಿಸು ವಾಗ ಬೇರೆ ಬೇರೆ ವಿಧದ ಕೋರಿಕೆ ವರ್ಗಾ ವಣೆಗೆ ಪ್ರತ್ಯೇಕ ಶೇಕಡವಾರು ನಿಗದಿ ಗೊಳಿಸುವುದು, ಇದರಿಂದ ಸೇವಾ ಹಿರಿತನಕ್ಕೆ ಆದ್ಯತೆ ದೊರೆಯಲಿದೆ ಎಂದರು.
ವಿನಾಯಿತಿ ನೀಡಬೇಕು: ಕಡ್ಡಾಯ ವರ್ಗಾ ವಣೆ ಪತಿ-ಪತ್ನಿ ಪ್ರಕರಣಕ್ಕೆ ವಿನಾಯಿತಿ ನೀಡ ಬೇಕು. ಹೆಚ್ಚುವರಿ ಕಡ್ಡಾಯ ವರ್ಗಾವಣೆ ಯಲ್ಲಿ ಮಹಿಳೆಯರು ಮತ್ತು ಪುರುಷರಿಗೆ ವಯೋಮಿತಿಯನ್ನು 55 ವರ್ಷಗಳಿಗೆ ನಿಗದಿ ಮಾಡಬೇಕು ಎಂಬ ಬೇಡಿಕೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ ಮಾಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಎಂ.ಆರ್.ಕಾಮಾಕ್ಷಿ ಅವರೊಂದಿಗೆ ಸಂಘದ ಪದಾಧಿಕಾರಿಗಳು ಚರ್ಚಿಸಿದರು. ಮನವಿ ಸ್ವೀಕರಿಸಿ ನಿಮ್ಮ ಮನವಿಯನ್ನು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ತಲುಪಿಸಲಾಗು ವುದು ಎಂದು ತಿಳಿಸಿದರು. ಸಂಘದ ಖಜಾಂಚಿ ಸಿ.ಶಿವಕುಮಾರ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಚ್.ಬಿ. ರವಿಕುಮಾರ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಶಿಕ್ಷಕರು ಇದ್ದರು.