Advertisement

Visa Extended: ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ವೀಸಾ ಅವಧಿ ವಿಸ್ತರಿಸಿದ ಭಾರತ

03:47 PM Jan 08, 2025 | Team Udayavani |

ನವದೆಹಲಿ: ಬಾಂಗ್ಲಾದೇಶದಲ್ಲಿ ಕಳೆದ ಆಗಸ್ಟ್ 5 ರಂದು ನಡೆದ ದಂಗೆಯ ಬಳಿಕ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಬಾಂಗ್ಲಾದೇಶ ತೊರೆದು ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಈ ನಡುವೆ ಭಾರತ ಹಸೀನಾ ಅವರ ವೀಸಾ ಅವಧಿಯನ್ನು ವಿಸ್ತರಿಸಿದೆ ಎಂದು ಮೂಲಗಳು ತಿಳಿಸಿವೆ.

Advertisement

ಬಾಂಗ್ಲಾದೇಶದ ಹಂಗಾಮಿ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ಅವರು ಶೇಖ್ ಹಸೀನಾ ಅವರನ್ನು ಹಸ್ತಾಂತರಿಸುವಂತೆ ಡಿಸೆಂಬರ್ 23 ರಂದು ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದರು. ಇದರ ನಡುವೆ ಭಾರತ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.

ಭಾರತದಲ್ಲಿ ನಿರಾಶ್ರಿತರ ಕಾನೂನು ಇಲ್ಲದ ಕಾರಣ ಶೇಖ್ ಹಸೀನಾ ಅವರಿಗೆ ಇನ್ನೂ ಯಾವುದೇ ನಿರಾಶ್ರಿತರ ಸ್ಥಾನಮಾನ ನೀಡಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಮಂಗಳವಾರ ಮುಂಜಾನೆ, ಬಾಂಗ್ಲಾದೇಶದ ಅಧಿಕಾರಿಗಳು ಶೇಖ್ ಹಸೀನಾ ಸೇರಿದಂತೆ 97 ಜನರ ಪಾಸ್‌ಪೋರ್ಟ್‌ಗಳನ್ನು ರದ್ದುಗೊಳಿಸಿದ್ದರು. ಇವರಲ್ಲಿ 22 ಜನರು ಆಪಾದಿತ ಅಪಹರಣದಲ್ಲಿ ಭಾಗಿಯಾಗಿರುವ ಆರೋಪವನ್ನು ಎದುರಿಸುತ್ತಿದ್ದಾರೆ, ಆದರೆ 75 ಮಂದಿ ಕಳೆದ ವರ್ಷ ವಿದ್ಯಾರ್ಥಿ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ಕೊಲೆ ಆರೋಪವನ್ನು ಹೊಂದಿದ್ದಾರೆ ಎನ್ನಲಾಗಿದೆ.

ಶೇಖ್ ಹಸೀನಾ ಅವರು ಆಗಸ್ಟ್ 2024 ರವರೆಗೆ 15 ವರ್ಷಗಳ ಸುದೀರ್ಘ ಕಾಲ ಬಾಂಗ್ಲಾದೇಶವನ್ನು ಆಳಿದ್ದರು ಇದರ ನಡುವೆ ವಿದ್ಯಾರ್ಥಿಗಳ ನೇತೃತ್ವದ ಬೃಹತ್ ದಂಗೆಯು ಅವರ ಅವಾಮಿ ಲೀಗ್ (AL) ಆಡಳಿತವನ್ನು ಬುಡಮೇಲು ಮಾಡಿತ್ತು. ಜೊತೆಗೆ ನಡೆದ ಸಂಘರ್ಷದಲ್ಲಿ ನೂರಾರು ಜನರು ಕೊಲ್ಲಲ್ಪಟ್ಟರು ಮತ್ತು ಸಾವಿರಾರು ಮಂದಿ ಗಾಯಗೊಂಡರು, ಈ ವೇಳೆ ಪ್ರತಿಭಟನಾಕಾರರು ಢಾಕಾದಲ್ಲಿರುವ ಹಸೀನಾ ಅವರ ಅರಮನೆಗೆ ಮುತ್ತಿಗೆ ಹಾಕಿ ಕೈಗೆ ಸಿಕ್ಕಿದ ವಸ್ತುಗಳನ್ನು ದೋಚಿದರು. ಆಗಸ್ಟ್ 5 ರಂದು ಹಸೀನಾ ಬಾಂಗ್ಲಾದೇಶದಿಂದ ಪಲಾಯನ ಮಾಡಿ ಭಾರತಕ್ಕೆ ಬಂದು ಆಶ್ರಯ ಪಡೆದರು.

ಬಾಂಗ್ಲಾದೇಶಕ್ಕೆ ಭಾರತದಿಂದ ತಕ್ಕ ಪ್ರತ್ಯುತ್ತರ:
ಹಸ್ತಾಂತರದ ಬೇಡಿಕೆಯ ನಡುವೆ, ಶೇಖ್ ಹಸೀನಾ ಅವರ ವೀಸಾವನ್ನು ವಿಸ್ತರಿಸುವ ಮೂಲಕ ಭಾರತವು ಬಾಂಗ್ಲಾದೇಶ ಸರ್ಕಾರಕ್ಕೆ ತಕ್ಕ ಉತ್ತರವನ್ನು ನೀಡಿದೆ ಮತ್ತು ಸದ್ಯಕ್ಕೆ ಅವರನ್ನು ಹಸ್ತಾಂತರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಭಾರತದ ಈ ನಿರ್ಧಾರದ ನಂತರ ಬಾಂಗ್ಲಾದೇಶ ಈ ವಿಚಾರದಲ್ಲಿ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಕಾದುನೋಡಬೇಕಿದೆ.

Advertisement

ಇದನ್ನೂ ಓದಿ: BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್‌

Advertisement

Udayavani is now on Telegram. Click here to join our channel and stay updated with the latest news.

Next