Advertisement

ಕಾಲೇಜು ಹುಡುಗಿಯರಿಗೆ ಅಶ್ಲೀಲ ಚಿತ್ರ : ಶಿಕ್ಷರಿಬ್ಬರ ವಿರುದ್ಧ ಕೇಸು

04:11 PM Feb 28, 2017 | Team Udayavani |

ಹೈದರಾಬಾದ್‌ : ತಮ್ಮ ವಿದ್ಯಾರ್ಥಿನಿಯರಿಗೆ ವಾಟ್ಸಾಪ್‌ ಮೂಲಕ ಅಶ್ಲೀಲ ಚಿತ್ರ ಹಾಗೂ ಸಂದೇಶಗಳನ್ನು ರವಾನಿಸುತ್ತಿದ್ದ ಖಾಸಗಿ ಇಂಜಿನಿಯರಿಂಗ್‌ ಕಾಲೇಜಿನ ಇಬ್ಬರು ಸಹಾಯಕ ಪ್ರೊಫೆಸರ್‌ಗಳು ಮತ್ತು ಓರ್ವ ಕಚೇರಿ ಸಹಾಯಕನ ವಿರುದ್ಧ  ರಾಚಕೊಂಡ ಪೊಲೀಸರು ಕೇಸು ದಾಖಲಿಸಿಕೊಂಡಿದ್ದು ಈ ಮೂವರನ್ನು ಬಂಧಿಸುವ ಸಿದ್ಧತೆಯಲ್ಲಿದ್ದಾರೆ.

Advertisement

ವಿದ್ಯಾರ್ಥಿನಿಯರಿಗೆ ಅಶ್ಲೀಲ ಚಿತ್ರ ಹಾಗೂ ಸಂದೇಶಗಳನ್ನು ವಾಟ್ಸಾಪ್‌ ಮೂಲಕ ರವಾನಿಸುತ್ತಿದ್ದ ಇಲೆಕ್ಟ್ರಾನಿಕ್‌ ಆ್ಯಂಡ್‌ ಕಮ್ಯುನಿಕೇಶನ್‌ ವಿಭಾಗದ ಸಹಾಯಕ ಪೊಫೆಸರ್‌ಗಳಾದ ಸೈದಿ ರೆಡ್ಡಿ ಮತ್ತು ಗೋಪಿ ಹಾಗೂ ಕಚೇರಿ ಸಹಾಯಕ ಉಸ್ಮಾನ್‌ ಎಂಬಾತನನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ಕಾಲೇಜಿನ ಹಿರಿಯ ಅಧಿಕಾರಿ ತಿಳಿಸಿದ್ದಾರೆ. 

ಈ ಪ್ರೊಫೆಸರುಗಳು ಈಚೆಗೆ ಕೆಲ ಕಾಲದಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದು ಇವರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಬೇಕೆಂದು ವಿದ್ಯಾರ್ಥಿನಿಯರು ಒತ್ತಾಯಿಸಿದ್ದಾರೆ. ಇವರ ದೂರಿನ ಮೇರೆಗೆ ಮೂವರೂ ಆರೋಪಿಗಳನ್ನು ಇಷ್ಟರಲ್ಲೇ ಬಂಧಿಸಲಾಗುವುದು ಎಂದು ಅಬ್ದುಲ್ಲಾಪುರ್ಮೇತ್‌ ಠಾಣಾಧಿಕಾರಿ ಬಿ ಶ್ರೀನು ತಿಳಿಸಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next