Advertisement

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

11:59 PM Nov 17, 2024 | Team Udayavani |

ಝಾನ್ಸಿ: ಇಲ್ಲಿನ ಮಹಾರಾಣಿ ಲಕ್ಷ್ಮೀ ಬಾಯಿ ಆಸ್ಪತ್ರೆಯಲ್ಲಿ ಬೆಂಕಿ ಅವಘಡ ಸಂಭವಿಸುತ್ತಿದ್ದಂತೆ ಒಳನುಗ್ಗಿದ 20 ವರ್ಷದ ಯುವಕ ಹಲವು ಮಕ್ಕಳನ್ನು ರಕ್ಷಿಸಿ ಹೀರೋ ಎನಿಸಿಕೊಂಡ. ಆದರೆ ತನ್ನ ಅವಳಿ ಮಕ್ಕಳನ್ನು ರಕ್ಷಿಸಿಕೊಳ್ಳಲು ವಿಫ‌ಲನಾಗಿದ್ದಾನೆ.

Advertisement

ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಯಾಕುಬ್‌ ಎಂಬ ವ್ಯಕ್ತಿ ಕಿಟಕಿಯ ಗಾಜನ್ನು ಒಡೆದು ಒಳನುಗ್ಗಿ ಕಣ್ಣಿಗೆ ಕಾಣಿಸಿದ ಮಕ್ಕಳನ್ನು ಎತ್ತಿಕೊಂಡು ಐಸಿಯುನಿಂದ ಹೊರತಂದಿದ್ದಾನೆ. ಆದರೆ ತನ್ನ ಮಕ್ಕಳನ್ನು ಹುಡುಕಿ ಕರೆತರಲು ವಿಫ‌ಲನಾದ ಕಾರಣ 8 ದಿನಗಳ ಹಿಂದಷ್ಟೇ ಹುಟ್ಟಿದ್ದ ಆತನ ಅವಳಿ ಮಕ್ಕಳು ಬೆಂಕಿಗಾಹುತಿಯಾಗಿವೆ.

ಆಗಷ್ಟೇ ಹುಟ್ಟಿದ್ದ ಮಗುಭಸ್ಮ: ದುರಂತ ನಡೆಯವ ಕೆಲ ಗಂಟೆಗಳ ಮೊದಲಷ್ಟೇ ಸಂಜನಾ ಕುಮಾರಿ ಎಂಬುವವರಿಗೆ ಹೆರಿಗೆಯಾ ಗಿತ್ತು. ಮಗು ಅವಧಿಗೆ ಮುನ್ನ ಹುಟ್ಟಿದ್ದ ಕಾರಣ, ಅದನ್ನು ಐಸಿಯುಗೆ ವರ್ಗಾ ಯಿ ಸ ಲಾಗಿತ್ತು. ದುರಂತದಲ್ಲಿ ಮಗು ಸಂಪೂರ್ಣ ಸುಟ್ಟುಹೋಗಿದೆ ಎಂದು ಸಂಜನಾ ಅಳಲು ತೋಡಿ ಕೊಂಡಿದ್ದಾರೆ.

ಸಾವಿನ ಸಂಖ್ಯೆ 11ಕ್ಕೇರಿಕೆ: ದುರಂತ ದಲ್ಲಿ ರಕ್ಷಿಸಲಾದ ಮಗುವೊಂದು ಭಾನು ವಾರ ಮೃತಪಟ್ಟಿದೆ. ಹೀಗಾಗಿ ಮೃತ ಮಕ್ಕಳ ಸಂಖ್ಯೆ 11ಕ್ಕೇರಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next