Advertisement
ಮಾಸ್ತಿ ನಾಯಕ್: ನಮ್ಮ ದೇಶದಲ್ಲಿ ಕೇಂದ್ರ ಸರ್ಕಾರದಲ್ಲಿ ರಕ್ಷಣಾ ಇಲಾಖೆ ಅಂತಾ ಒಂದಿದೆ , ಜೊತೆಗೆ ರಕ್ಷಣಾ ಮಂತ್ರಿ ಕೂಡ ಇದ್ದಾರೆ.ಇನ್ನು ರಾಷ್ಟ್ರಪತಿಯವರನ್ನು ಸೈನ್ಯದ ಮೂರು ವಿಭಾಗದ ಮಹಾದಂಡನಾಯಕರು ಅಂತ ನಾವು ಓದಿದನೆನಪು. ಅವರಿಗೆ ಮಾತ್ರ ಯಾವುದೇ ಒಂದು ದೇಶದ ವಿರುಧ್ಧ ಪರಿಸ್ಥಿತಿಯ ತೀವ್ರತೆಯ ಆಧಾರದಮೇಲೆ ಯುದ್ಧವನ್ನು ಘೋಷಣೆ ಮಾಡುವ ಅಧಿಕಾರ ಇದೆ ಎಂಬ ವಿಚಾರ ತಿಳಿದಿದ್ದೆವು . ಒಂದೊಮ್ಮೆ ರಾಷ್ಟ್ರಪತಿಯವರು ಯಾವದೇ ದೇಶದ ಮೇಲೆ ಯುದ್ಧ ಘೋಷಣೆ ಮಾಡಿದರೂ ಕೂಡ ಆಕುರಿತು ಒಂದು ವಾರದ ಒಳಗೆ ಲೋಕಸಭೆಗೆ ವಿವರಣೆ ನೀಡಬೇಕಾಗುತ್ತದೆ ಎಂಬ ವಿಚಾರತಿಳಿದ್ದೆ .
ಆದರೆ ಈಗ ಕೇಂದ್ರ ಸರ್ಕಾರ ಸೈನ್ಯಕ್ಕೆ ಮಹಾದಂಡನಾಯಕರ ಹುದ್ದೆಯನ್ನು ಪ್ರತ್ಯೇಕವಾಗಿ ಸ್ರಷ್ಟಿಸಿದೆ. ಇದು ಯಾಕೆ ಅಂತಾನೆ ಅರ್ಥವಾಗುತ್ತಿಲ್ಲ. ರಾಷ್ಟ್ರಪತಿಯವರಿಗಿದ್ದ ಮಹಾದಂಡನಾಯಕ ಅನ್ನುವ ಗೌರವವನ್ನು ಕಸಿದುಕೊಳ್ಳಲಾಯಿತೇ ?
ಇದು ರಾಷ್ಟ್ರದ ಹಿತದ್ರಷ್ಟಿಯಿಂದ ಎಷ್ಟು ಉಪಯುಕ್ತ . ಮುಂದಿನ ದಿನಗಳಲ್ಲಿ ಸೈನ್ಯದ ಮೂರು ವಿಭಾಗಗಳ ನಡುವೆ ಹೊಂದಾಣಿಕೆಯಾದರೆ ದೇಶದ ಭದ್ರತೆಯ ದ್ರಷ್ಟಿಯಿಂದ ಅಪಾಯಕಾರಿಯಾಗಲಾರದೆ . ಅಥವಾ ಮಹಾದಂಡನಾಯಕರಿಗೆ ಅಧಿಕಾರದ ಮಹತ್ವಾಕಾಂಕ್ಷೆ ಕಾಡಿದರೆ ಪ್ರಜಾಪ್ರಭುತ್ವ ಅಪಾಯಕ್ಕೆ ಸಿಗದೇ . ಒಟ್ಟರೆಯಾಗಿ ಇದೊಂದು ಅಪಾಯಕಾರಿ ನಡೆ ಎಂದೆನಿಸುತ್ತಿದೆ .
Related Articles
Advertisement