ಮಣಿಪಾಲ: ಎನ್ ಆರ್ ಸಿ ಮತ್ತು ಪೌರತ್ವ ತಿದ್ದುಪಡಿ ಮಸೂದೆಯ ಕುರಿತು ಈಶಾನ್ಯ ರಾಜ್ಯಗಳ ಮತ್ತು ವಿಪಕ್ಷಗಳ ಆತಂಕ ಎಷ್ಟು ಸಮಂಜಸ ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಆಯ್ದ ಉತ್ತರಗಳು ಈ ಕೆಳಗಿನಂತಿದೆ.
ರಾಜೇಶ್ ಅಂಚನ್ ಎಂ ಬಿ: ವಿಪಕ್ಷಗಳ ಆತಂಕವಲ್ಲ ಮೊಸಳೆ ಕಣ್ಣೀರು. ಮತ್ತೆ ಈಶಾನ್ಯ ರಾಜ್ಯಗಳು ಅನಗತ್ಯವಾಗಿ ಆತಂಕ ಪಡ್ತಾ ಇವೆ..ಎನ್ ಆರ್ ಸಿ ತಿದ್ದುಪಡಿಯಿಂದ ಬಹಳ ಅನುಕೂಲವೆ ಹೆಚ್ಚು. ನೆರೆಯ ದೇಶಗಳ ಅಲ್ಪಸಂಖ್ಯಾತ ಹಿಂದೂ ಸಿಖ್ ಮತ್ತಿತರೆ ಧರ್ಮಗಳ ಜನತೆಯನ್ನು ಆ ದೇಶಗಳು ದಮನ ಮಾಡುತ್ತಿದ್ದವು ಅವರಿಗೆ ಭಾರತದ ಪೌರತ್ವ ನೀಡುವ ಮೂಲಕ ಭಾರತ ದಿಟ್ಟ ಹೆಜ್ಜೆ ಇಟ್ಟಿದೆ. ಅಲ್ಪಸಂಖ್ಯಾತರ ತುಷ್ಟಿಕರಣಕ್ಕಾಗಿ ವಿಪಕ್ಷಗಳು ವಿರೋಧ ವ್ಯಕ್ತ ಪಡಿಸ್ತಾ ಇದ್ದಾವೆ ಸರ್ಕಾರದ ಈ ಕ್ರಮಕ್ಕೆ ಎಲ್ಲಾ ನೈಜ ಭಾರತೀಯರ ಬೆಂಬಲ ಇದೆ
ಕಣ್ಣೊಳಗಿನ ಕನಸು; ವಿಪಕ್ಷಗಳು ಓಟ್ ಬ್ಯಾಂಕ್ ರಾಜಕೀಯವಷ್ಟೇ ಮಾಡ್ತಾ ಇವೆ. ದೇಶದ ಹಿತಕ್ಕಾಗಿ NRC, CAB ಬೇಕು
ಗಿರೀಶ್ ಪೂಜಾರಿ: ಎನ್ ಆರ್ ಸಿ ಮತ್ತು CAB ಭಾರತ ಮಾತ್ರವಲ್ಲ ಇದಕ್ಕಿಂತ ಮುಂಚೆ ಯೂರೋಪ್ ಹಾಗೂ ಅಮೆರಿಕದಂಥ ಹಲವು ರಾಷ್ಟ್ರಗಳು ಮಾಡಿವೆ. ಭಾರತ ಬಿಟ್ಟು ಬೇರೆ ಎಲ್ಲ ದೇಶಗಳೂ ಅಲ್ಪಸಂಖ್ಯಾತರನ್ನು ಅತ್ಯಂತ ಕೀಳಾಗಿ ಕಂಡಿವೆ. ಅದಕ್ಕೆ ಉದಾಹರಣೆ ಅಲ್ಲಿನ ಅಲ್ಪಸಂಖ್ಯಾತರ ಜನಾಸಂಖ್ಯೆ ಗಣನೀಯವಾಗಿ ಕಡಿಮೆ ಆಗಿರುವುದು . ಅದರಿಂದ ಅಂತ ಜನಸಾಮಾನ್ಯರಿಗೆ ಆಶ್ರಯ ಕೊಡುವುದರಲ್ಲಿ ಯಾವ್ದೇ ತಪ್ಪಿಲ.
ಸನ್ನಿ ಮಥಾಯಸ್: ಇದೊಂದು ಉತ್ತಮ ನಿರ್ಧಾರ. ಬೇರೆ ದೇಶದಲ್ಲಿರುವ ಹಿಂದೂ ಜನರು ಆಭರತದ ಪೌರತ್ವ ಪಡೆಯಲಿಚ್ಚಿಸಿದರೆ ಅದರಲ್ಲೇನು ತಪ್ಪು. ಬೇರೆ ದೇಶಗಳು ಹಿಂದೂಗಳನ್ನು ಭಾರತಕ್ಕೆ ಕಳುಹಿಸಿ ಮುಸ್ಲಿಮರಿಗೆ ಅವರ ದೇಶದಲ್ಲಿ ಜಾಗ ಕಲ್ಪಿಸಬೇಕು.