Advertisement

Tata Steels: ಬ್ರಿಟನ್‌ನೊಂದಿಗೆ ಟಾಟಾ ಸ್ಟೀಲ್ಸ್‌ ಒಪ್ಪಂದ

09:37 PM Sep 16, 2023 | Team Udayavani |

ಲಂಡನ್‌: ಉಕ್ಕು ಕ್ಷೇತ್ರದಲ್ಲಿ ಟಾಟಾ ಸ್ಟೀಲ್ಸ್‌ ಮತ್ತು ಬ್ರಿಟನ್‌ ಸರ್ಕಾರ ಜಂಟಿಯಾಗಿ 125 ಕೋಟಿ ಪೌಂಡ್‌ ಹೂಡಿಕೆ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಪೈಕಿ ಬ್ರಿಟನ್‌ ಸರ್ಕಾರದ ಅನುದಾನ 50 ಕೋಟಿ ಪೌಂಡ್‌ ಆಗಿದೆ. “ಬ್ರಿಟನ್‌ನ ಉಕ್ಕಿನ ಕ್ಷೇತ್ರದಲ್ಲಿ ಇದೊಂದು ದೊಡ್ಡ ಒಪ್ಪಂದವಾಗಿದೆ.

Advertisement

ಸಾವಿರಾರು ಸಂಖ್ಯೆಯ ಉದ್ಯೋಗಗಳನ್ನು ಉಳಿಸಲು ನಾವು ಟಾಟಾ ಸ್ಟೀಲ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಇದರಿಂದ ವೇಲ್ಸ್‌ನಲ್ಲಿ ಉಕ್ಕಿನ ಉದ್ಯಮವು ಉತ್ತಮ ಭವಿಷ್ಯ ಕಾಣಲಿದೆ. ಅಲ್ಲದೇ ದೇಶದ ಉಕ್ಕಿನ ಕ್ಷೇತ್ರದಲ್ಲಿ ಹೊಸದಾಗಿ 4,000 ಉದ್ಯೋಗಗಳು ಸೃಷ್ಟಿಯಾಗಲಿವೆ’ ಎಂದು ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಟ್ವೀಟ್‌(ಎಕ್ಸ್‌) ಮೂಲಕ ಮಾಹಿತಿ ನೀಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next