Advertisement
ಸೋಮವಾರ(ಡಿ.30) ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕೇಜ್ರಿವಾಲ್ ಬಿಜೆಪಿಯವರು ಮಹಾರಾಷ್ಟ್ರ ಮತ್ತು ಹರ್ಯಾಣದಲ್ಲಿ ಗೆದ್ದಂತೆ ದೆಹಲಿಯಲ್ಲೂ ಗೆಲ್ಲಬಹುದು ಎಂಬ ನಂಬಿಕೆಯಲ್ಲಿ ಇದ್ದಾರೆ ಆದರೆ ದೆಹಲಿಯ ಜನ ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಬಿಜೆಪಿ ಸುಳ್ಳು ಭರವಸೆಗಳನ್ನು ನೀಡಿ ಮತದಾರರ ದಾರಿ ತಪ್ಪಿಸುವ ಯತ್ನವನ್ನು ಮಾಡುತ್ತಿದೆ ಆದರೆ ಇದು ಯಾವುದೂ ಕೆಲಸ ಮಾಡಲ್ಲ ದೆಹಲಿಯ ಜನತೆಗೆ ಆಮ್ ಆದ್ಮಿ ಪಕ್ಷ ಏನು ಎಂದು ಗೊತ್ತಿದೆ ಇದುವರೆಗೆ ಕೊಟ್ಟ ಭರವಸೆಯನ್ನು ಯಾವುದೇ ಕಾರಣಕ್ಕೂ ಬಾಕಿ ಉಳಿಸಿಕೊಂಡಿಲ್ಲ ಹಾಗಾಗಿ ಮುಂದಿನ ಚುನಾವಣೆಯಲ್ಲಿ ಮತದಾರರು ನಮ್ಮ ಕೈ ಹಿಡಿಯಲಿದ್ದಾರೆ ಎಂದು ಹೇಳಿದ್ದಾರೆ.
ದೆಹಲಿಯಲ್ಲಿರುವ ದೇವಸ್ಥಾನಗಳ ಅರ್ಚಕರಿಗೆ ಹಾಗೂ ಗುರುದ್ವಾರ ಸಾಹಿಬ್‌ನ ಗುರುಗಳಿಗೆ ಗೌರವಧನ ನೀಡುವ ಉದ್ದೇಶದಿಂದ ಅವರ ಮುಂದಿನ ಭವಿಷ್ಯ ಉತ್ತಮ ರೀತಿಯಲ್ಲಿ ಮುಂದುವರೆಯಬೇಕು ಎಂಬ ದೃಷ್ಟಿಯಿಂದ ಅರ್ಚಕರಿಗೆ ಪ್ರತಿ ತಿಂಗಳಿಗೆ 18000 ಗೌರವ ವೇತನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
Related Articles
ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ದೇವಸ್ಥಾನದ ಅರ್ಚಕರು ಹಾಗೂ ಗುರುದ್ವಾರದ ಗುರುಗಳು ನೋಂದಣಿ ಮಾಡಿಕೊಳ್ಳಬೇಕು ಅದರಂತೆ ನಾಳೆ(ಮಂಗಳವಾರ (ಡಿ.30) ನೋಂದಣಿ ಆರಂಭಗೊಳ್ಳಲಿದ್ದು, ಕನ್ನಾಟ್ ನಲ್ಲಿರುವ ಹನುಮಾನ್ ದೇವಾಲಯದಿಂದ ನೋಂದಣಿ ಪ್ರಕ್ರಿಯೆ ಪ್ರಾರಂಭಿಸುವುದಾಗಿ ಕೇಜ್ರಿವಾಲ್ ಹೇಳಿಕೆ ನೀಡಿದ್ದಾರೆ, ಇದಾದ ಬಳಿಕ ತಮ್ಮ ತಮ್ಮ ಕ್ಷೇತ್ರದ ಅಭ್ಯರ್ಥಿಗಳು ತಮ್ಮ ಕ್ಷೇತ್ರದಲ್ಲಿ ನೋಂದಣಿ ಮಾಡಿಕೊಳ್ಳಲಿದ್ದಾರೆ ಎಂದು ತಿಳಿಸಿದರು.
Advertisement
ಈಗಾಗಲೇ ಮಹಿಳೆಯರಿಗಾಗಿ ಮಹಿಳಾ ಸಮ್ಮಾನ್ ಯೋಜನೆಯನ್ನು ಘೋಷಣೆ ಮಾಡಿದ್ದ ಕೇಜ್ರಿವಾಲ್ ಈ ಯೋಜನೆಯಿಂದ ದೆಹಲಿಯಲ್ಲಿರುವ ಹದಿನೆಂಟು ವರ್ಷ ಮೇಲ್ಪಟ್ಟ ಮಹಿಳೆಯರು ತಿಂಗಳಿಗೆ 2,100 ಮೊತ್ತವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡುವುದಾಗಿ ಘೋಷಣೆ ಮಾಡಿದ್ದು, ಇದೀಗ ದೆಹಲಿಯಲ್ಲಿರುವ ಅರ್ಚಕರ ಏಳಿಗೆಗಾಗಿ ಗೌರವ ಧನ ಹೆಚ್ಚಿಸುವ ಘೋಷಣೆಯನ್ನು ಮಾಡಿದ್ದಾರೆ.
ಜೈಲಿನಿಂದ ಹೊರಬಂದ ಬಳಿಕ ಮುಂಬರುವ ವಿಧಾನಸಭಾ ಚುನಾವಣೆಯನ್ನು ಕೇಂದ್ರೀಕರಿಸಿ ಕೇಜ್ರಿವಾಲ್ ಘೋಷಣೆಗಳನ್ನು ಮಾಡುತ್ತಿದ್ದು ಇದು ಎಷ್ಟರ ಮಟ್ಟಿಗೆ ಮತದಾರರ ಮನಸ್ಸು ಪರಿವರ್ತಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.