ಬೆಂಗಳೂರು: ಇಂಟರ್‌ಮೀಡಿಯೇಟ್ ಮತ್ತು ಹಗುರ ಸರಕು ಸಾಗಣೆ ವಾಹನಗಳ (ಐಎಲ್‌ಸಿವಿ) ತಯಾರಿಕೆಯ ಟಾಟಾ ಮೋಟಾರ್ ಇದೀಗ ಅಲ್ಟ್ರಾ ಬ್ರಾಂಡ್ ಸರಣಿಯ ನೂತನ ವಾಹನಗಳನ್ನು ಬಿಡುಗಡೆ ಮಾಡಿದೆ.
ಅಲ್ಟ್ರಾ ಶ್ರೇಣಿಯ ವಾಹನಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಸಂಸ್ಥೆಯ ಕಮರ್ಷಿಯಲ್ ವೆಹಿಕಲ್ ಬ್ಯುಸಿನೆಸ್ ಯೂನಿಟ್ ಅಧ್ಯಕ್ಷ ಗಿರೀಶ್ ವಾಘ… ಅವರು, ಈ ಹೊಸ ಟ್ರಕ್‌ಗಳನ್ನು ಬಿಡುಗಡೆ ಮಾಡುತ್ತಿರುವುದು ಭಾರತದ ಐಎಲ್‌ಸಿವಿ ವರ್ಗದಲ್ಲಿ ಒಂದು ಮೈಲಿಗಲ್ಲಾಗಿದೆ.
ಇ-ಕಾಮರ್ಸ್ ವ್ಯವಹಾರ ಬೆಳವಣಿಗೆ ಕಾಣುತ್ತಿರುವುದರಿಂದ ವಾಹನಗಳ ಬೇಡಿಕೆ ಹೆಚ್ಚಳವಾಗಿದೆ. ಅಲ್ಲದೆ, ಓವರ್‌ಲೋಡ್ ಮೇಲೆ ವಿಧಿಸುತ್ತಿರುವ ನಿರ್ಬಂಧಗಳಂತಹ ಸಮಸ್ಯೆಗಳ ಪರಿಹಾರಕ್ಕೆ ಈ ಶ್ರೇಣಿಯ ಟ್ರಕ್‌ಗಳ ಅಗತ್ಯವಿದೆ ಎಂದರು.
ಅತ್ಯುತ್ತಮ ವೈಶಿಷ್ಟಗಳನ್ನು ಒಳಗೊಂಡಿರುವ ಈ ವಾಹನಗಳು 7 ರಿಂದ 16 ಟನ್‌ಗಳನ್ನು ಹೊತ್ತೂಯ್ಯುವ ಸಾಮರ್ಥ್ಯ ಹೊಂದಿವೆ. 3 ಲೀ. ಮತ್ತು 5 ಲೀ. ಟಬೋಟ್ರಾನ್ ಸರಣಿಯ ಎಂಜಿನ್‌ನೊಂದಿಗೆ ಅತ್ಯುತ್ತಮ ಮೈಲೇಜ್ ಕೂಡ ನೀಡಲಿವೆ. ಕಡಿಮೆ ನಿರ್ವಹಣಾ ವೆಚ್ಚ ಹಾಗೂ ಆದಾಯ ಹೆಚ್ಚಿಸುವ ಟ್ರಕ್‌ಗಳಾಗಿವೆ. ಈ ಟ್ರಕ್‌ಗಳು ಗ್ಲೋಬಲ್ ಟ್ರಕಿಂಗ್ ಸ್ಟಾಂಡರ್ಡ್ ಆಫ್ ಎಮಿಶನ್ ಅನ್ನು ಕಾಯ್ದುಕೊಂಡು ಜಾಗತಿಕ ಮಟ್ಟದ ಸುರಕ್ಷತೆ ಮತ್ತು ವೈಶಿಷ್ಟಗಳನ್ನು ಒಳಗೊಂಡಿವೆ.
ಅಲ್ಟ್ರಾ ಡಿಸೈನ್, ಅಲ್ಟ್ರಾ ಪರ್ಫಾರೆನ್ಸ್, ಅಲ್ಟ್ರಾ ಕನೆಕ್ಟ್‌ನಲ್ಲಿ ರಿಯಲ್ ಟೈಮ್ ಫೀಟ್ ಟ್ರಾಕಿಂಗ್, ಎಸ್‌ಎಂಎಸ್ ಮತ್ತು ಇಮೇಲ್ ಅಲರ್ಟ್, ಜಿಯೋ ಫೆನ್ಸಿಂಗ್ ಹಾಗೂ ರಿಮೋಟ್ ಯೂನಿಟ್ ಮ್ಯಾನೇಜೆ¾ಂಟ್ ಸೇವೆಗಳೂ ಮಾಲೀಕರಿಗೆ ಲಭ್ಯವಾಗಲಿವೆ ಎಂದು ಅವರು ತಿಳಿಸಿದರು.