Advertisement
ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಭಾರತ 6 ವಿಕೆಟಿಗೆ 124 ರನ್ ಗಳಿಸಿದರೆ, ದಕ್ಷಿಣ ಆಫ್ರಿಕಾ 19 ಓವರ್ಗಳಲ್ಲಿ 7 ವಿಕೆಟಿಗೆ 128 ರನ್ ಬಾರಿಸಿತು. ಭಾರತದ ಆರಂಭ ಆಘಾತಕಾರಿಯಾಗಿತ್ತು. ಮೊದಲ ಪಂದ್ಯದಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದ ಸಂಜು ಸ್ಯಾಮ್ಸನ್ ಅವರನ್ನು ಮಾರ್ಕೊ ಜಾನ್ಸೆನ್ 3ನೇ ಎಸೆತದಲ್ಲೇ ಬೌಲ್ಡ್ ಮಾಡಿದರು. ಸಂಜು ಖಾತೆಯನ್ನೇ ತೆರೆದಿರಲಿಲ್ಲ. ಅಭಿಷೇಕ್ ಶರ್ಮ (4) ಅವರ ವೈಫಲ್ಯ ಮತ್ತೆ ಮುಂದುವರಿಯಿತು. ದ್ವಿತೀಯ ಓವರ್ನಲ್ಲಿ ಕೋಟ್ಜಿ ಈ ವಿಕೆಟ್ ಉರುಳಿಸಿದರು. ನಾಯಕ ಸೂರ್ಯಕುಮಾರ್ ಕೂಡ ನಾಲ್ಕರ ಗಡಿ ದಾಟಲಿಲ್ಲ. 4 ಓವರ್ ಅಂತ್ಯಕ್ಕೆ 15ಕ್ಕೆ 3 ವಿಕೆಟ್ ಕಳೆದುಕೊಂಡ ಸಂಕಟ ಭಾರತದ್ದಾಯಿತು.
Related Articles
ಈ ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಸಂಭವಿಸಲಿಲ್ಲ. ದಕ್ಷಿಣ ಆಫ್ರಿಕಾ ಒಂದು ಬದಲಾವಣೆ ಮಾಡಿಕೊಂಡಿತು. ಪ್ಯಾಟ್ರಿಕ್ ಕ್ರುಗರ್ ಬದಲು ರೀಝ ಹೆಂಡ್ರಿಕ್ಸ್ ಆಡಲಿಳಿದರು.
Advertisement
ಸಂಕ್ಷಿಪ್ತ ಸ್ಕೋರ್: ಭಾರತ-6 ವಿಕೆಟಿಗೆ 124 (ಪಾಂಡ್ಯ ಔಟಾಗದೆ 39, ಅಕ್ಷರ್ 27, ತಿಲಕ್ 20, ಮಾರ್ಕ್ರಮ್ 4ಕ್ಕೆ 1, ಸಿಮೆಲೇನ್ 20ಕ್ಕೆ 1, ಪೀಟರ್ 20ಕ್ಕೆ 1). ದಕ್ಷಿಣ ಆಫ್ರಿಕಾ-19 ಓವರ್ಗಳಲ್ಲಿ 7 ವಿಕೆಟಿಗೆ 128 (ಸ್ಟಬ್ಸ್ ಔಟಾಗದೆ 47, ಹೆಂಡ್ರಿಕ್ಸ್ 24, ಕೋಟ್ಜಿ ಔಟಾಗದೆ 19, ಚಕ್ರವರ್ತಿ 17ಕ್ಕೆ 5).