Advertisement

Bengaluru: ಅಕ್ಕನ ಬುದ್ಧಿಮಾಂದ್ಯ ಮಗಳ ಮೇಲೆಯೇ ಸತತ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕ

10:51 AM Nov 14, 2024 | Team Udayavani |

ಕೆ.ಆರ್‌.ಪುರ: ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಅಪರಾಧಿಗೆ ತ್ವರಿತ ವಿಶೇಷ ನ್ಯಾಯಾಲಯ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಿದೆ.  ರಾಮಮೂರ್ತಿನಗರದ ಸೆಂಟ್‌ ಅನ್ಸ್‌ ಸ್ಕೂಲ್‌ ಪಕ್ಕದ ಚಲುವಯ್ಯ ರಸ್ತೆ, 9ನೇ ಕ್ರಾಸ್‌ ನಲ್ಲಿ ವಾಸವಾಗಿರುವ ಗಣೇಶ್‌ (30) ಶಿಕ್ಷೆಗೆ ಒಳಗಾದವ ವ್ಯಕ್ತಿ.

Advertisement

ಕೆ.ಆರ್‌.ಪುರ ಪೊಲೀಸ್‌ ಠಾಣಾ ವ್ಯಾಪ್ತಿ ಯಲ್ಲಿ 2023ರಲ್ಲಿ ಸ್ವಂತ ಅಕ್ಕನ ಮಗಳ(10) ಮೇಲೆಯೇ ಅತ್ಯಾಚಾರ ಎಸಗಿದ್ದನು. ದೋಷಿ ಗಣೇಶ ತನ್ನ  ಅಕ್ಕನ ಬುದ್ಧಿಮಾಂದ್ಯ ಮಗಳು (ಬಾಲಕಿ) ರಜೆ ವೇಳೆ ಈತನ ಮನೆಗೆ ಬರುತ್ತಿದ್ದಳು. ಈ ವೇಳೆ ಆಕೆಯ ಮೇಲೆೆ ಪದೇ ಪದೆ ಅತ್ಯಾಚಾರ ಎಸಗಿದ್ದನು.  ಈ ವಿಚಾರವನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದನು. ಈ ಸಂಬಂಧ ಕೆ.ಆರ್‌.ಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಪೂರ್ಣಗೊಳಿಸಿ ಇನ್ಸ್‌ಪೆಕ್ಟರ್‌ ಎಸ್‌.ಆರ್‌.ಮಂಜುನಾಥ್‌ ಆರೋಪಿ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಅಭಿಯೋಜಕ ಅನುರೇವು ವಾದ ಮಂಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶೆ ಎನ್‌.ನರಸಮ್ಮ ಅವರು ಸಾಕ್ಷಿ ಮತ್ತು ಪುರಾವೆಗಳನ್ನು ಅವಲೋಕಿಸಿದಾಗ  ಅಪಾದನೆ ರುಜುವಾತಾಗಿರುತ್ತದೆ ಎಂದು ತೀರ್ಮಾನಿಸಿ ಅಪರಾಧಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಿ ಅದೇಶ ನೀಡಿದ್ದಾರೆ.

ನ್ಯಾಯಾಲಯವು ತನ್ನ ತೀರ್ಪು ನೀಡುವ ಕಾಲಕ್ಕೆ ಸಂತ್ರಸ್ತೆಗೆ 10 ಲಕ್ಷ ರೂ. ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಅದೇಶ ಹೊರಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next