Advertisement
ಕುಂದಾಪುರ – ಬೈಂದೂರು ಹೆದ್ದಾರಿಯ ಮುಳ್ಳಿಕಟ್ಟೆ – ತ್ರಾಸಿ ನಡುವಿನ ಮೊವಾಡಿ ಕ್ರಾಸ್ ಬಳಿ ಹೆದ್ದಾರಿ ಕಾಮಗಾರಿ ಗುತ್ತಿಗೆ ವಹಿಸಿಕೊಂಡ ಐಆರ್ಬಿ ಸಂಸ್ಥೆಯವರು ಲಾರಿ ಚಾಲಕರು, ನಿರ್ವಾಹಕರು ಹಾಗೂ ಸಾರ್ವಜನಿಕರಿಗಾಗಿ ಟ್ರಕ್ ಬೇ, ವಿಶ್ರಾಂತಿ ಕೊಠಡಿ, ಶೌಚಾಲಯವನ್ನು ನಿರ್ಮಿಸಿದ್ದಾರೆ. ಅದರ ಕಾಮಗಾರಿ ಪೂರ್ಣಗೊಂಡು ವರ್ಷಗಳೇ ಕಳೆದರೂ, ಇನ್ನೂ ಇದರ ಪ್ರಯೋಜನ ಲಾರಿ ಚಾಲಕ, ನಿರ್ವಾಹಕರಿಗೆ ಆಗಲಿ ಅಥವಾ ಸಾರ್ವಜನಿಕರಿಗೆ ಆಗಲಿ ಸಿಕ್ಕಿಲ್ಲ. ಈಗಲೂ ಮುಚ್ಚಿದ ಸ್ಥಿತಿಯಲ್ಲಿಯೇ ಇದೆ.
ಕಾಮಗಾರಿ ಪೂರ್ಣಗೊಂಡ ಬಳಿಕ ಕೆಲ ದಿನ ತೆರೆದುಕೊಂಡಿತ್ತು. ಆದರೆ ಶೌಚಾಲಯ, ಸ್ನಾನಗೃಹಕ್ಕೆ ಬಳಸಲು ನೀರಿನ ಸಂಪರ್ಕವನ್ನೇ ಕಲ್ಪಿಸದ ಕಾರಣ, ಗಬ್ಬೆದ್ದು, ದುರ್ನಾತ ಬೀರುವಂತಾಗಿತ್ತು. ಇದಲ್ಲದೆ ಇದಕ್ಕೆ ಯಾವುದೇ ವಿದ್ಯುತ್ ಸಂಪರ್ಕವೂ ಕಲ್ಪಿಸಿಲ್ಲ. ಇದಾದ 15 ದಿನಗಳಲ್ಲೇ ಮುಚ್ಚಲಾಗಿತ್ತು. ಅಲ್ಲಿಂದ ಈವರೆಗೆ ಬಾಗಿಲು ತೆರೆದೇ ಇಲ್ಲ. ಈ ಬಗ್ಗೆ ಹೆದ್ದಾರಿ ಪ್ರಾಧಿಕಾರ, ಕಾಮಗಾರಿಯ ಗುತ್ತಿಗೆ ವಹಿಸಿಕೊಂಡ ಐಆರ್ಬಿ ಸಂಸ್ಥೆಯವರು ಮುತುವರ್ಜಿ ವಹಿಸಬೇಕಾಗಿದೆ. ಸಾಸ್ತಾನ- ಶಿರೂರು ನಡುವೆ ಎಲ್ಲೂ ಸಾರ್ವಜನಿಕ ಶೌಚಾಲಯವೇ ಇಲ್ಲ
Related Articles
ರಾಷ್ಟ್ರೀಯ ಹೆದ್ದಾರಿ 66 ರ ಮುಳ್ಳಿಕಟ್ಟೆ ವಿಶ್ರಾಂತಿ ವಲಯದ ಕಟ್ಟಡ ನಿರ್ಮಾಣವಾಗಿ, ಕಟ್ಟಡದ ಟೈಲ್ಸ್ ಎಲ್ಲ ಕಿತ್ತು ಹೋಗಿದ್ದರೂ, ವಾಹನ ಸವರರಿಗೆ ಮಾತ್ರ ಇನ್ನೂ ಅನುಕೂಲವಾಗಿಲ್ಲ. ಸಾಸ್ತಾನ ಟೋಲ್ಗೇಟ್ ಬಿಟ್ಟರೆ ಶಿರೂರು ಟೋಲ್ ಗೇಟ್ವರೆಗೆ ಮಧ್ಯೆ ಎಲ್ಲೂ ಶೌಚಾಲಯ, ವಿಶ್ರಾಂತಿ ಕೊಠಡಿಯೇ ಇಲ್ಲ. ಇದನ್ನಾದರೂ ಆದಷ್ಟು ಬೇಗ ತೆರೆದು, ವಾಹನ ಸವಾರರಿಗೆ ಅನುಕೂಲ ಮಾಡಿಕೊಡಲಿ.
-ಮಂಜುನಾಥ ಪೂಜಾರಿ ನಾವುಂದ, ಸಾರ್ವಜನಿಕರು
Advertisement
ಪ್ರಾಧಿಕಾರಕ್ಕೆ ಪತ್ರ ಬರೆಯಲಾಗಿದೆತ್ರಾಸಿ – ಮರವಂತೆ ಬೀಚ್ ಬದಿ ಲಾರಿ, ಇನ್ನಿತರ ಯಾವುದೇ ವಾಹನಗಳನ್ನು ನಿಲ್ಲಿಸದಂತೆ ಈಗಾಗಲೇ ಕ್ರಮಕೈಗೊಳ್ಳಲಾಗಿದೆ. ಮುಳ್ಳಿಕಟ್ಟೆಯಲ್ಲಿ ವಿಶ್ರಾಂತಿ ವಲಯವನ್ನು ತೆರೆಯುವಂತೆ, ಅಲ್ಲಿ ವಾಹನಗಳನ್ನು ನಿಲ್ಲಿಸಲು ವ್ಯವಸ್ಥೆ ಕಲ್ಪಿಸುವಂತೆ ಪ್ರವಾಸೋದ್ಯಮ ಇಲಾಖೆಯಿಂದ ಮಾತ್ರವಲ್ಲದೆ ಜಿಲ್ಲಾಧಿಕಾರಿಗಳಿಂದಲೂ ಮೂರು ಬಾರಿ ಹೆದ್ದಾರಿ ಪ್ರಾಧಿಕಾರದವರಿಗೆ ಪತ್ರ ಬರೆದಿದ್ದೇವೆ.
– ಕುಮಾರ್ ಸಿ.ಯು., ಸಹಾಯಕ ನಿರ್ದೇಶಕ, ಪ್ರವಾಸೋದ್ಯಮ ಇಲಾಖೆ ಉಡುಪಿ ಬೀಚ್ ಬಳಿ ನಿಲುಗಡೆ; ಪ್ರವಾಸಿಗರಿಗೆ ಕಿರಿಕಿರಿ
ಇಲ್ಲಿನ ಟ್ರಕ್ ಬೇ ಇನ್ನೂ ಆರಂಭಗೊಳ್ಳದ ಕಾರಣ ತ್ರಾಸಿ, ಮರವಂತೆ ಕಡಲ ತೀರದಲ್ಲಿಯೇ ಲಾರಿ, ಟ್ರಕ್ಗಳನ್ನು ನಿಲ್ಲಿಸಿ, ಚಾಲಕರು, ನಿರ್ವಾಹಕರು ವಿಶ್ರಾಂತಿ ಪಡೆಯುತ್ತಿದ್ದಾರೆ. ಬಹುತೇಕರು ಬೀಚ್ಗೆ ಅಡ್ಡಲಾಗಿ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಹೆದ್ದಾರಿಯಲ್ಲಿ ವಾಹನಗಳಲ್ಲಿ ಸಂಚರಿಸುವವರಿಗೆ ಕಡಲ ಸೌಂದರ್ಯವನ್ನು ಆಸ್ವಾದಿಸಲು ಸಾಧ್ಯವಾಗುತ್ತಿಲ್ಲ. ಇಲ್ಲಿಗೆ ಬರುವ ಪ್ರವಾಸಿಗರಿಗೆ, ವಾಹನಗಳಲ್ಲಿ ಸಂಚರಿಸುವವರಿಗೆ ತೊಂದರೆ ಆಗಬಾರದು ಅನ್ನುವ ನಿಟ್ಟಿನಲ್ಲಿ ಲಾರಿ, ಟ್ರಕ್ ಚಾಲಕರು, ನಿರ್ವಾಹಕರಿಗೆ ಅನುಕೂಲವಾಗುವಂತೆ ಮುಳ್ಳಿಕಟ್ಟೆಯಲ್ಲಿ ವಿಶ್ರಾಂತಿ ಕೊಠಡಿ, ಶೌಚಾಲಯ, ಸ್ನಾನ ಗೃಹದ ಕೊಠಡಿ ನಿರ್ಮಿಸಿದೆ. 2021ರ ಜೂನ್ನಲ್ಲೇ ಇದರ ಬಹುತೇಕ ಕಾಮಗಾರಿ ಪೂರ್ಣಗೊಂಡರೂ, ಉದ್ಘಾಟನೆಗೆ ಮಾತ್ರ ಮೀನ ಮೇಷ ಎಣಿಸುತ್ತಿರುವುದು ವ್ಯವಸ್ಥೆಯ ನಿರ್ಲಕ್ಷéಕ್ಕೆ ಹಿಡಿದ ಕೈಗನ್ನಡಿಯಾಗಿದೆ.