Advertisement

ಯುಟಿ ಖಾದರ್ ವಿರುದ್ಧ ಇಲಿಯಾಸ್ ಪತ್ನಿ ಹೇಳಿದ್ದೇನು ಗೊತ್ತಾ?

05:36 PM Jan 19, 2018 | Sharanya Alva |

ಉಳ್ಳಾಲ: ನನ್ನ ಗಂಡನನ್ನು ರೌಡಿ ಅಂದ್ರಲ್ಲ, ಈಗ ಸಮಾಧಾನ ಆಯ್ತಾ. ಎಲೆಕ್ಷನ್ ಬಂದಾಗ ನನ್ನ ಗಂಡ ಬೇಕಾಗಿತ್ತು. ನನ್ನ ಗಂಡ ಇರುವಾಗ ಮನೆ ಬಾಗಿಲಿಗೆ ಬಂದು ಕಾಯ್ತಿದ್ರು..ಈಗ ಸಚಿವ ಯುಟಿ ಖಾದರ್ ಎಲ್ಲಿದ್ದಾರೆ? ಇದು ಮಂಗಳೂರಿನಲ್ಲಿ ಹತ್ಯೆಯಾದ ಟಾರ್ಗೆಟ್ ಗ್ರೂಪ್ ನ ಇಲಿಯಾಸ್ ಪತ್ನಿ ಫರ್ಝಾನಾ ಆಕ್ರೋಶದ ನುಡಿ.

Advertisement

ಉಳ್ಳಾಲದಲ್ಲಿ ಶುಕ್ರವಾರ ಮಾತನಾಡಿರುವ ಫರ್ಝಾನಾ, ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಯುಟಿ ಖಾದರ್ ವಿರುದ್ಧ ವಾಗ್ದಾಳಿ ನಡೆಸಿದರು.

ಯುಟಿ ಖಾದರ್ ಗೆ ಬಿಜೆಪಿ ಮುಖಂಡ ರಹೀಮ್ ಉಚ್ಚಿಲ, ಉಸ್ಮಾನ್ ಕಲ್ಲಾಪು ಬೆಂಬಲ ನೀಡುತ್ತಿದ್ದಾರೆ. ಅವರೆಲ್ಲಾ ಯುಟಿ ಖಾದರ್ ಗೆಳೆಯರು, ಒಟ್ಟಿಗೆ ಇರುತ್ತಾರೆ. ನನ್ನ ಗಂಡನ ಹತ್ಯೆ ಹಿಂದೆ ಪೊಲೀಸರ, ಅಧಿಕಾರಿಗಳ ಕೈವಾಡ ಇದೆ ಎಂದು ಆರೋಪಿಸಿದರು.

ಯುಟಿ ಖಾದರ್ ಈಗ ಸುಮ್ಮನೆ ನನ್ನ ಗಂಡನ ವಿಷಯದಲ್ಲಿ ದೂರುವುದು ಯಾಕೆ, ನನ್ನ ಗಂಡ ಯೂಸ್ ಅಂಡ್ ಥ್ರೋ ಗ್ಲಾಸಾ? ರಹೀಮ್ ಗೆಳೆಯನಾಗಿದ್ದ ದಾವೂದ್ ನನ್ನ ಗಂಡನಿಗೆ ಹಿಂದಿನಿಂದ ಬಂದು ಮಚ್ಚಿನಲ್ಲಿ ಹೊಡೆದಿದ್ದಾನಂತೆ ಎಂದು ದೂರಿದರು.

ಸಚಿವ ಖಾದರ್ ಈವರೆಗೂ ನನಗೆ ಸಹಾಯ ಮಾಡಲೇ ಇಲ್ಲ. ಆರೋಪಿಗಳ ವಿರುದ್ಧ ಇನ್ನೂ ಯಾಕೆ ಕ್ರಮಕೈಗೊಂಡಿಲ್ಲ. ನನಗೆ ನ್ಯಾಯ ಸಿಗುವವರೆಗೂ ಹೋರಾಟ ನಡೆಸುವುದಾಗಿ ಫರ್ಝಾನಾ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next