Advertisement

 ಪ್ರಯಾಣಿಕರ ದಟ್ಟಣೆ: ತಂಬರಂ- ಜೋಧ್‌ಪುರ ಮಧ್ಯೆ ಸಾಪ್ತಾಹಿಕ ವಿಶೇಷ ರೈಲು

11:46 PM Apr 27, 2023 | Team Udayavani |

ಮಂಗಳೂರು: ಬೇಸಗೆ ರಜಾ ಅವಧಿಯ ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸುವ ಉದ್ದೇಶದಿಂದ ತಂಬರಂ – ಜೋಧ್‌ಪುರ ಮಧ್ಯೆ ಸಾಪ್ತಾಹಿಕ ವಿಶೇಷ ರೈಲು ಸಂಚಾರದ ವ್ಯವಸ್ಥೆ ಮಾಡಲಾಗಿದೆ.

Advertisement

ತಂಬರಂ- ಜೋಧ್‌ಪುರ ಸೂಪರ್‌ಫಾಸ್ಟ್‌ ವಿಶೇಷ ರೈಲು ಸಂಖ್ಯೆ 06055 ಎ. 27ರ ಮಧ್ಯಾಹ್ನ 2 ಗಂಟೆಗೆ ತಂಬರಂಬನಿಂದ ಹೊರಟಿದೆ. ಇನ್ನೊಂದು ರೈಲು ಮೇ 4ರಂದು ಹೊರಡಲಿದೆ. ಹೊರಟ ಮೂರನೆ ದಿನ ಸಂಜೆ 5.30ಕ್ಕೆ ಜೋಧ್‌ಪುರ ತಲುಪಲಿದೆ.

ಗುರುವಾರ ತಂಬಂರಂನಿಂದ ಹೊರಟಿರುವ ರೈಲು ಎ. 28ರಂದು ಮಧ್ಯರಾತ್ರಿ 12.05ಕ್ಕೆ ಪಾಲಕ್ಕಾಡ್‌ ಜಂಕ್ಷನ್‌ ತಲುಪಲಿದ್ದು, 1.25ಕ್ಕೆ ಶೋರ್ನೂರು ಜಂಕ್ಷನ್‌, 2.38ಕ್ಕೆ ಕೋಯಿಕ್ಕೋಡ್‌, 4.10ಕ್ಕೆ ಕಣ್ಣೂರು, 5.20ಕ್ಕೆ ಕಾಸರಗೋಡು ಆಗಿ ಬೆಳಗ್ಗೆ 6.05ಕ್ಕೆ ಮಂಗಳೂರು ಜಂಕ್ಷನ್‌ ತಲುಪಲಿದೆ ಎಂದು ರೈಲ್ವೇ ಇಲಾಖೆ ಪ್ರಕಟನೆ ತಿಳಿಸಿದೆ.

ಜೋಧ್‌ಪುರದಿಂದ ಎಪ್ರಿಲ್‌ 30 ಮತ್ತು ಮೇ 7ರಂದು ರೈಲು ಸಂ. 06056 ರಾತ್ರಿ 7.15ಕ್ಕೆ ಹೊರಡಲಿದೆ. ಎ. 30ರಂದು ಜೋಧ್‌ಪುರದಿಂದ ಹೊರಟ ರೈಲು ಮೇ 2ರಂದು ಹಾಗೂ ಮೇ 7ರಂದು ಹೊರಟ ರೈಲು ಮೇ 9ರಂದು ಬೆಳಗ್ಗೆ 3 ಗಂಟೆಗೆ ಮಂಗಳೂರು ಜಂಕ್ಷನ್‌, 3.49ಕ್ಕೆ ಕಾಸರಗೋಡು, 4.57ಕ್ಕೆ ಕಣ್ಣೂರು, 6.15ಕ್ಕೆ ಕೋಯಿಕ್ಕೋಡ್‌, ಶೋರ್ನೂರು ಜಂಕ್ಷನ್‌ಗೆ 7.55, 8.50ಕ್ಕೆ ಪಾಲಕ್ಕಾಡ್‌ ಜಂಕ್ಷನ್‌ ತಲುಪಲಿದೆ ಎಂದು ರೈಲ್ವೇ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next