ಪ್ರಯಾಗ್‌ರಾಜ್ (ಉತ್ತರಪ್ರದೇಶ): ಮಹಾಕುಂಭ ಮೇಳದ ವೇಳೆ ಭಕ್ತರ ಅನುಕೂಲಕ್ಕಾಗಿ 3,000 ವಿಶೇಷ ರೈಲುಗಳು ಸೇರಿದಂತೆ ಸುಮಾರು 13,000 ರೈಲುಗಳನ್ನೂ ಭಾರತೀಯ ರೈಲ್ವೇ ಸಂಚರಿಸಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.
ಉತ್ತರ ಪ್ರದೇಶದ ವಾರಣಾಸಿಯಿಂದ ರೈಲಿನಲ್ಲಿ ಪ್ರಯಾಗ್‌ರಾಜ್‌ಗೆ ಆಗಮಿಸಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಹಾಕುಂಭ ಮೇಳಕ್ಕಾಗಿ ಭಾರತೀಯ ರೈಲ್ವೆ ಸಚಿವಾಲಯದ ಸಿದ್ಧತೆಗಳ ಪರಿಶೀಲಿಸಿದರು. ಮೇಳದ ಸಮಯದಲ್ಲಿ ಸುಮಾರು 1.5 ರಿಂದ 2 ಕೋಟಿ ಪ್ರಯಾಣಿಕರು ರೈಲಿನಲ್ಲಿ ಪವಿತ್ರ ವಾರಣಾಸಿ ನಗರವನ್ನು ತಲುಪುವ ನಿರೀಕ್ಷೆಯಿದೆ.
ಪ್ರಯಾಗರಾಜ್‌ನಲ್ಲಿ ಈಶಾನ್ಯ, ಉತ್ತರ ಮತ್ತು ಉತ್ತರ ಮಧ್ಯ ರೈಲ್ವೆ ವ್ಯಾಪ್ತಿಯ ಹಲವಾರು ನಿಲ್ದಾಣಗಳ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ‘ಗಂಗಾ ನದಿಯ ಮೇಲೆ ನಿರ್ಮಿಸಲಾದ ಹೊಸ ಸೇತುವೆಯ ನಾನು ಪರಿಶೀಲಿಸಿದ್ದೇನೆ, ಹೊಸ ಸೇತುವೆಯ 100 ವರ್ಷಗಳ ನಂತರ ಗಂಗಾ ನದಿಯ ಮೇಲೆ ನಿರ್ಮಿಸಲಾಗಿದೆ. ಇದನ್ನು ಶೀಘ್ರದಲ್ಲೇ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.
ನಾನು ಐದು ನಿಲ್ದಾಣಗಳ ಖುದ್ದಾಗಿ ಪರಿಶೀಲಿಸಿದ್ದೇನೆ. ಈ ನಿಲ್ದಾಣಗಳಲ್ಲಿ ಭಕ್ತರು ತಮ್ಮ ರೈಲುಗಳು ಬರುವವರೆಗೆ ಕುಳಿತುಕೊಳ್ಳಲು ಸಾಧ್ಯವಾಗುವ ತಂಗುದಾಣ ಪ್ರದೇಶಗಳು ತುಂಬಾ ಚೆನ್ನಾಗಿವೆ. ತಂಗುದಾಣ ಪ್ರದೇಶಗಳು ಮತ್ತು ಟಿಕೆಟ್‌ಗಳಲ್ಲಿ ಕಲರ್ ಕೋಡಿಂಗ್ ಬಳಸುವುದರಿಂದ ಸೂಕ್ತ ಫ್ಲಾಟ್‌ಫಾರ್ಮ್‌ಗೆ ತೆರಳಲು ಭಕ್ತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
“ಮಹಾ ಕುಂಭ ಮೇಳಕ್ಕಾಗಿ, ಪ್ರಯಾಗ್‌ರಾಜ್-ವಾರಣಾಸಿ ಮಾರ್ಗದಲ್ಲಿ ರೈಲ್ವೆ ಹಳಿಯನ್ನು ದ್ವಿಗುಣಗೊಳಿಸಲಾಗಿದೆ. ಫಾಫಮೌ-ಜಂಘೈ ವಿಭಾಗವನ್ನು ದ್ವಿಗುಣಗೊಳಿಸಲಾಗಿದೆ. ಝಾನ್ಸಿ, ಫಾಫಮೌ, ಪ್ರಯಾಗ್‌ರಾಜ್, ಸುಬೇದರ್‌ಗಂಜ್, ನೈನಿ ಮತ್ತು ಚಿಯೋಕಿ ನಿಲ್ದಾಣಗಳಲ್ಲಿ ಎರಡನೇ ಪ್ರವೇಶ ದ್ವಾರ ನಿರ್ಮಿಸಲಾಗಿದೆ ಎಂದು ವೈಷ್ಣವ್ ಹೇಳಿದರು.