Advertisement

Mangaluru: ಮೂಲಗೇಣಿ ಹಕ್ಕು ಸದನದಲ್ಲಿ ಚರ್ಚೆ: ಐವನ್‌ ಡಿ’ಸೋಜಾ

10:34 AM Dec 16, 2024 | Team Udayavani |

ಮಂಗಳೂರು: ಮೂಲ ಗೇಣಿದಾರರಿಗೆ ಸಿಗಬೇಕಾದ ಭೂಮಿಯ ಹಕ್ಕನ್ನು ಒದಗಿಸಿಕೊಡಬೇಕಾಗಿರುವುದು ಸರಕಾರದ ಜವಾಬ್ದಾರಿ. ಈ ಬಗ್ಗೆ ಸದನದಲ್ಲೂ ಶೀಘ್ರ ಚರ್ಚೆ ನಡೆಯಲಿದೆ ಎಂದು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ತಿಳಿಸಿದ್ದಾರೆ.

Advertisement

ನಗರದ ಡಾನ್‌ಬಾಸ್ಕೊ ಹಾಲ್‌ನಲ್ಲಿ ರವಿವಾರ ಜರಗಿದ ಮೂಲಗೇಣಿದಾರರ ಸಭೆಯಲ್ಲಿ ಮಾತನಾಡಿದ ಅವರು, ಸರಕಾರ ಮೂಲಗೇಣಿದಾರರ ಹಿತದೃಷ್ಟಿಯಿಂದ ಕಾಯಿದೆ ರೂಪಿಸಿ ಹಲವು ವರ್ಷ ಕಳೆದಿದ್ದರೂ ಅವರಿಗೆ ನ್ಯಾಯ ಸಿಕ್ಕಿಲ್ಲ. ಮೂಲಗೇಣಿದಾರರ ಪರವಾಗಿ ವಾದಿಸಲು ಸರಕಾರದಿಂದ ವಿಶೇಷ ಸರಕಾರಿ ಅಭಿಯೋಜಕರನ್ನು ನಿಯೋ ಜಿಸಲು ಚಿಂತನೆ ನಡೆದಿದೆ ಎಂದರು.

ವೇದಿಕೆಯ ಅಧ್ಯಕ್ಷ ಎಂ.ಕೆ.ಯಶೋಧರ ಮಾತನಾಡಿ, ಮೂಲಗೇಣಿದಾರರ ಪರವಾಗಿ ಮೂಲಗೇಣಿ ಒಕ್ಕಲು ರಕ್ಷಣ ವೇದಿಕೆ ನಿರಂತರವಾಗಿ ಹೋರಾಡಿಕೊಂಡು ಬಂದಿದ್ದು, 2023ರಲ್ಲಿ ಏಕಸದಸ್ಯ ಪೀಠದಲ್ಲಿ ಮೂಲಗೇಣಿದಾರರಿಗೆ ಜಯ ಸಿಕ್ಕಿದೆ. ಈಗ ದ್ವಿಸದಸ್ಯ ಪೀಠದ ಮುಂದೆ ಕೇಸು ಇದೆ. ಹೋರಾಟ ಮುಂದುವರಿಯಲಿದ್ದು, ಎಲ್ಲ ಮೂಲಗೇಣಿದಾರರು ಹೋರಾಟದಲ್ಲಿ ಕೈಜೋಡಿಸಬೇಕು ಎಂದದರು.

ಹೈಕೋರ್ಟ್‌ ನ್ಯಾಯವಾದಿ ನಂದೀಶ್‌ ಭೂಷಣ್‌ ಅವರು ನ್ಯಾಯಾ ಲಯದಲ್ಲಿ ಮೂಲಗೇಣಿದಾರರ ವ್ಯಾಜ್ಯದ ಕುರಿತು ನಡೆಯುತ್ತಿರುವ ಕಲಾಪದ ಬೆಳವಣಿಗೆಯ ಮಾಹಿತಿ ನೀಡಿದರು. ವೇದಿಕೆಯ ಕಾರ್ಯದರ್ಶಿ ಸಂದೇಶ್‌ ಪ್ರಭು, ಮಾಜಿ ಅಧ್ಯಕ್ಷ ಮ್ಯಾಕ್ಸಿಂ ಡಿ’ ಸಿಲ್ವ, ವೇದಿಕೆಯ ಉಡುಪಿ ಅಧ್ಯಕ್ಷ ಎಸ್‌.ಎಸ್‌.ಶೇಟ್‌ ಉಪಸ್ಥಿತರಿದ್ದರು. ಪ್ರೊ| ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next