ಕಾಬೂಲ್ :ತಾಲಿಬಾನ್ ಉಗ್ರ ಸಂಘಟನೆ ಅಫ್ಗಾನಿಸ್ತಾನವನ್ನು ವಶಪಡಿಸಿಕೊಂಡು, ಶರಿಯಾ ಶಕೆ ಆರಂಭ ಮಾಡಿದ ಬೆನ್ನಿಗೆ, ಉಗ್ರ ಪಡೆ ನಡೆಸುತ್ತಿರುವ ಹಿಂಸಾಚಾರವನ್ನು ತಡೆಯಲಾರದೇ, ತಮ್ಮ ದೇಶಗಳಿಗೆ ಮರಳಿ ತೆರಳಲು ಹಲವು ದಿನಗಳಿಂದ ಕಾದು ಕುಳಿತಿದ್ದ ಸುಮಾರು 200 ಮಂದಿಗೆ ತಾಲಿಬಾನ್ ಉಗ್ರ ಸಂಘಟನೆ ತಮ್ಮ ದೇಶಕ್ಕೆ ತೆರಳಲು ಅನುಮತಿ ಸೂಚಿಸಿದೆ.
ಕಾಬೂಲ್ ವಿಮಾನ ನಿಲ್ದಾಣದಿಂದ ಸುಮಾರು 200 ಮಂದಿ ಅಮೆರಿಕಾದ ಮೂಲ ವಾಸಿಗಳನ್ನು ಒಳಗೊಂಡು ಇನ್ನೂ ಅಫ್ಗಾನಿಸ್ತಾನದಲ್ಲಿ ಉಳಿದುಕೊಂಡಿರುವ ಇತರೆ ದೇಶಗಳ ಪ್ರಜೆಗಳಿಗೆ ತಮ್ಮ ತಮ್ಮ ದೇಶಗಳಿಗೆ ಚಾರ್ಟರ್ ವಿಮಾನಗಳ ಮೂಲಕ ಹೋಗಲು ಅನುಮತಿಸಿದೆ ಎಂದು ಯುಎಸ್ ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ : ಗಣೇಶನಿಗೆ ಇಷ್ಟವಾದ ಮೋದಕ ಮಾಡುವುದು ಹೇಗೆ ಎಂದು ನಿಮಗೆ ಗೊತ್ತಿದೆಯಾ..? ಇಲ್ಲಿದೆ ಮಾಹಿತಿ
ಯುಎಸ್ ತನ್ನ ಸೇನೆಯನ್ನು ಸಂಪೂರ್ಣವಾಗಿ ವಾಪಾಸ್ ಕರೆಸಿಕೊಂಡ ಕೆಲವು ದಿನಗಳ ನಂತರ ಅಫ್ಗಾನಿಸ್ತಾನದಲ್ಲಿ ಉಳಿದಿದ್ದ ಮೂಲ ಅಮೆರಿಕನ್ನರನ್ನು ಕಳುಹಿಸಿಕೊಡಲು ತಾಲಿಬಾನ್ ಉಗ್ರ ಸರ್ಕಾರ ನಿರ್ಧರಿಸಿದೆ ಎಂದು ವರದಿಯಾಗಿದೆ.
ಅಫ್ಗಾನಿಸ್ತಾನದಿಂದ ನಿರ್ಗಮನಕ್ಕೆ ಅವಕಾಶ ನೀಡುವಂತೆ ಅಮೆರಿಕಾದ ಅಧಿಕಾರಿಯೊಬ್ಬರು ತಾಲಿಬಾನ್ ಉಗ್ರ ಸಂಘಟನೆಯ ವಿಶೇಷ ಪ್ರತಿನಿಧಿ ಝಲ್ಮಯ್ ಖಲೀಲ್ಜಾದ್ ಅವರನ್ನು ಒತ್ತಾಯಿಸಿದ ಹಿನ್ನೆಲೆಯಲ್ಲಿ ಈ ಅನುಮತಿ ದೊರಕಿದೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಇನ್ನು, ಮಜರ್-ಇ-ಷರೀಫ್ ನಲ್ಲಿ ತಾಲಿಬಾನ್ ಉಗ್ರ ಸಂಘಟನೆಯ ಹಿಂಸಾಚಾರದ ಪರಿಣಾಮದಿಂದಾಗಿ ಸಿಲುಕಿಕೊಂಡವರು ಇದ್ದಾರೆಯೇ ಎಂದು ರಾಯಿಟರ್ಸ್ ಕೇಳಿದ ಪ್ರಶ್ನೆಗೆ ಅಧಿಕಾರಿ, ಉತ್ತರಿಸಲು ಸಾಧ್ಯವಿಲ್ಲವೆಂದು ಪ್ರತಿಕ್ರಿಯಿಸಿರುವುದಾಗಿಯೂ ಕೂಡ ವರದಿ ತಿಳಿಸಿದೆ.
ಇದನ್ನೂ ಓದಿ : ತಾಲಿಬಾನ್ ಆಡಳಿತದ ವಿರುದ್ಧ ತೀವ್ರಗೊಂಡ ಪ್ರತಿಭಟನೆ; ಕಾಬೂಲ್ ನಲ್ಲಿ ಇಂಟರ್ನೆಟ್ ಸ್ಥಗಿತ