Advertisement

ಅಫ್ಘಾನ್ ರಾಜಧಾನಿ ಕಾಬೂಲ್ ಗೆ ನುಗ್ಗಿದ ತಾಲಿಬಾನ್!

02:25 PM Aug 15, 2021 | Team Udayavani |

ಕಾಬೂಲ್: ಅಫ್ಘಾನಿಸ್ಥಾನದ ಒಂದೊದೇ ಪ್ರದೇಶಗಳನ್ನು ವಶಪಡಿಸಿಕೊಂಡು ಮುನ್ನುಗ್ಗುತ್ತಿದ್ದ ತಾಲಿಬಾನ್ ಉಗ್ರ ಸಂಘಟನೆ ಇದೀಗ ರಾಜಧಾನಿ ಕಾಬೂಲ್ ಗೆ ನುಗ್ಗಿದೆ. ತಾಲಿಬಾನ್ ದಂಗೆಕೋರರು ಭಾನುವಾರ ಕಾಬೂಲ್‌ ಪ್ರವೇಶಿಸಿದ್ದಾರೆ ಎಂದು ಆಂತರಿಕ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಮಧ್ಯೆ ಅಮೆರಿಕ ತನ್ನ ರಾಯಭಾರರಿಗಳನ್ನು ಹೆಲಿಕಾಪ್ಟರ್ ಮೂಲಕ ಕರೆಸಿಕೊಂಡಿದೆ.

Advertisement

ತಾಲಿಬಾನ್‌ಗಳು “ಎಲ್ಲ ಕಡೆಯಿಂದ” ಬರುತ್ತಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ರಾಯಿಟರ್ಸ್‌ ಗೆ ತಿಳಿಸಿದ್ದಾರೆ. ಆದರೆ ಹೆಚ್ಚಿನ ವಿವರಗಳನ್ನು ನೀಡಲಿಲ್ಲ.

ಇದನ್ನೂ ಓದಿ:ಕಲಾದಗಿಗೆ ರಾಷ್ಟ್ರಧ್ವಜ ಬಟ್ಟೆ ತಯಾರಿಸುವ ಖ್ಯಾತಿ

ಕಾಬೂಲ್ ಸುತ್ತಮುತ್ತಲಿನ ಹಲವಾರು ಕಡೆಗಳಲ್ಲಿ ಗುಂಡಿನ ಸದ್ದು ಕೇಳಿಬಂದಿದೆ ಆದರೆ ಅಂತಾರಾಷ್ಟ್ರೀಯ ಪಾಲುದಾರರ ಸಹಕಾರದೊಂದಿಗೆ ಭದ್ರತಾ ಪಡೆಗಳು ನಗರದ ಮೇಲೆ ನಿಯಂತ್ರಣ ಹೊಂದಿವೆ ಎಂದು ಅಫ್ಘಾನ್ ಅಧ್ಯಕ್ಷರ ಅರಮನೆ ಖಾತೆಯಿಂದ ಒಂದು ಟ್ವೀಟ್ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next