ನವ ದೆಹಲಿ : ಅಫ್ಗಾನಿಸ್ತಾನವನ್ನು ತಾಲಿಬಾನ್ ಸ್ವಾಧೀನ ಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಅಲ್ಲಿ ರಾಜಕೀಯ ವಿಷಮ ಪರಿಸ್ಥಿತಿಯು ಹಬ್ಬದ ಸೀಸನ್ ಗೆ ಮುಂಚಿತವಾಗಿ ಭಾರತದಲ್ಲಿ ಮಾರಾಟವಾಗುವ ಡ್ರೈ ಫ್ರುಟ್ಸ್ ಗಳ ಬೆಲೆಯಲ್ಲಿ ಏರಿಕೆಗೆ ಕಾರಣವಾಗಿದೆ.
ಭಾರತೀಯ ರಫ್ತು ಸಂಸ್ಥೆಯ (ಎಫ್‌ಐಇಒ) ಮಹಾನಿರ್ದೇಶಕರಾದ (ಡಿಜಿ) ಡಾ. ಅಜಯ್ ಸಹಾಯ್ ಈ ಬಗ್ಗೆ ಪ್ರತಿಕ್ರಿಯಿಸಿ, ತಾಲಿಬಾನ್ ಎಲ್ಲಾ ಭಾರತದೊಂದಿಗಿನ ಎಲ್ಲಾ ರಫ‍್ತು ಹಾಗೂ ಆಮದು ವಹಿವಾಟನ್ನು ನಿಲ್ಲಿಸಿದೆ. ಯಾವಾಗ ಪೂರೈಕೆಯಾಗುತ್ತದೆ ಎಂದು ತಿಳಿಯದೆ ವ್ಯಾಪಾರಿಗಳು ಪರದಾಡುತ್ತಿದ್ದಾರೆ. ಮೂಲಗಳ ಪ್ರಕಾರ, ತಾಲಿಬಾನ್ ಪಾಕಿಸ್ತಾನದ ಸಾಗಣೆ ಮಾರ್ಗಗಳ ಮೂಲಕ ಸರಕು ಸಾಗಣೆಯನ್ನು ನಿಲ್ಲಿಸಿದೆ ಎಂದು ಹೇಳಲಾಗುತ್ತಿದೆ. ಯಾವಾಗ ಈ ಎಲ್ಲಾ ಸ್ಥಿತಿ ಸಹಜವಾಗುತ್ತದೆ ಎನ್ನುವುದರ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ ಎಂದಿದ್ದಾರೆ.
ಇದನ್ನೂ ಓದಿ : ಶನಿ ದೋಷದ ಬಗ್ಗೆ ಜನರಲ್ಲಿ ಅಪನಂಬಿಕೆಗಳೇ ಹೆಚ್ಚು…ಶುಭ, ಅಶುಭ ಫಲಗಳಿಗೆ ಕಾರಣವೇನು?
ಅಫ್ಗಾನಿಸ್ತಾನದಿಂದ ಸುಮಾರು ಶೇಕಡಾ. 85 ರಷ್ಟು ಡ್ರೈ ಫ್ರುಟ್ಸ್ ಗಳನ್ನು ಭಾರತ ಆಮದು ಮಾಡಿಕೊಳ್ಳುತ್ತಿತ್ತು. ಆದರೇ, ಈಗ ಅಫ್ಗಾನಿಸ್ತಾನವನ್ನು ತಾಲಿಬಾನ್ ಉಗ್ರ ಸಂಘಟನೆ ವಶಪಡಿಸಿಕೊಂಡ ನಂತರ ಭಾರತದೊಂದಿಗೆ ಎಲ್ಲಾ ಆಮದು ಹಾಗೂ ರಫ್ತು ವಹಿವಾಟನ್ನು ತಾಲಿಬಾನ್ ನಿಲ್ಲಿಸಿದೆ. ಅಲ್ಲಿ ರಾಜಕೀಯ ವಿಷಮ ಸ್ಥಿತಿ ಉಂಟಾಗಿದೆ. ಈ ಕಾರಣದಿಂದಾಗಿ ಭಾರತದಲ್ಲಿ ಸಾಲು ಸಾಲು ಹಬ್ಬಗಳು ಬರುತ್ತಿರುವಾಗಲೇ ಡ್ರೈ ಫ್ರುಟ್ಸ್ ಗಳ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಅಫ್ಗಾನಿಸ್ತಾನದಲ್ಲಿನ ತಲ್ಲಣಗಳು ದೇಶದಲ್ಲಿ ಬೆಲೆ ಏರಿಕೆಯ ಅನಿವಾರ್ಯ ವಾತಾವರಣವನ್ನು ಸೃಷ್ಟಿ ಮಾಡಿದೆ ಎಂದಿದ್ದಾರೆ.
ಇನ್ನು, ಈ ಬೆಳವಣಿಗೆಯ ಬಗ್ಗೆ ನಾವು ಗಮನವಿಟ್ಟಿದ್ದೇವೆ, ಸದ್ಯಕ್ಕೆ ಪಾಕಿಸ್ತಾನದ ಸಾಗಣೆ ಮಾರ್ಗಗಳ ಮೂಲಕ ಸರಕು ಸಾಗಣೆಯನ್ನು ತಾಲಿಬಾನ್ ಆಡಳಿತ ನಿರ್ಧರಿಸಿದೆ. ಯಾವಾಗ ಈ ಎಲ್ಲಾ ರಾಜಕೀಯ ಬಿಕ್ಕಟ್ಟು ಸರಿ ಹೋಗುತ್ತದೆ ಎಂದು ಕಾದು ನೋಡಬೇಕಾಗಿದೆ. ಅಲ್ಲಿಯ ತನಕ ಬೆಲೆ ಏರಿಕೆಯನ್ನು ದೇಶ ಸಹಿಸಿಕೊಳ್ಳಲೇ ಬೇಕಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ : ಬಡವನ ಭಾರ ಹೊತ್ತ ನೇತ್ರಾವತಿ! ಸೆಳೆಯುವ ನದಿನೀರಲ್ಲೇ ಮನೆ ಸಲಕರಣೆ ಸಾಗಾಟ