Advertisement

ಸೆ. 30ರಿಂದ ಧಾರೇಶ್ವರ ತಾಳಮದ್ದಳೆ ಸಪ್ತಾಹ

01:05 AM Sep 26, 2018 | Team Udayavani |

ಕುಂದಾಪುರ: ಧಾರೇಶ್ವರ ಯಕ್ಷಬಳಗ ಚಾರಿಟೆಬಲ್‌ ಟ್ರಸ್ಟ್‌ ಕಿರಿಮಂಜೇಶ್ವರ ವತಿಯಿಂದ 6ನೇ ವರ್ಷದ ತಾಳಮದ್ದಳೆ ಸಪ್ತಾಹ ಸೆ.30ರಿಂದ ಅ.6ರವರೆಗೆ ನಾಗೂರಿನ ಒಡೆಯರ ಮಠದ ಶ್ರೀ ಗೋಪಾಲಕೃಷ್ಣ ಕಲಾಮಂದಿರದ ಕುಂಜಾಲು ಶ್ರೀ ಶೇಷಗಿರಿ ಕಿಣಿ ಭಾಗವತರ ಸ್ಮರಣ ವೇದಿಕೆಯಲ್ಲಿ ನಡೆಯಲಿದೆ.

Advertisement

ತೆಕ್ಕಟ್ಟೆ ಆನಂದ ಮಾಸ್ತರರ ಸ್ಮರಣೆಯ ಕಲಾತಪಸ್ವಿ ಪ್ರಶಸ್ತಿ ಪ್ರದಾನ ನಡೆಯಲಿದ್ದು ಮದ್ದಳೆವಾದಕ ನಾಗೂರು ಮಹಾಬಲೇಶ್ವರ ಶೇಟ್‌ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸೆ.30ರಂದು ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಉದ್ಘಾಟಿಸಿ, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ| ಎಂ. ಎ. ಹೆಗಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಲಿಗ್ರಾಮ ಮಕ್ಕಳ ಮೇಳದ ಸಂಸ್ಥಾಪಕ ಎಚ್‌. ಶ್ರೀಧರ ಹಂದೆ ಸಂಸ್ಮರಣೆ ನುಡಿಯಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕುಂಜಾಲು ಶೇಷಗಿರಿ ಭಾಗವತರ ಕುಟುಂಬಸ್ಥರಾದ ಕೆ. ವೆಂಕಟೇಶ ಕಿಣಿ ದಂಪತಿ, ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ, ಟಿ. ಸುನಂದಾ ಆನಂದ ಶಾನುಭಾಗ್‌ ನಾಗೂರು ಅವರು ಭಾಗವಹಿಸಲಿದ್ದಾರೆ. ಅ. 6ರಂದು ಸಮಾರೋಪದ ಅಧ್ಯಕ್ಷತೆ ಯನ್ನು ಖಂಬದಕೋಣೆ ರೈ. ಸೇ.ಸಂ. ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ ತಾಳ ಮದ್ದಳೆಯ ಸಂದೇಶಾಮೃತ ನೀಡಲಿದ್ದಾರೆ. ಸಮಾರೋಪ ನುಡಿಯನ್ನು ಸಾಲಿಗ್ರಾಮ ಸಹಿತ ಬಹುಮೇಳಗಳ ಯಜಮಾನ ಪಿ. ಕಿಶನ್‌ ಹೆಗ್ಡೆ ಆಡಲಿದ್ದಾರೆ. ಮುಖ್ಯ ಅತಿಥಿ ಗಳಾಗಿ ಯಕ್ಷಗಾನ ಅಕಾಡೆಮಿ ಸದಸ್ಯ ರಾಜಶೇಖರ ಹೆಬ್ಟಾರ್‌, ಟಿ. ಸುನಂದಾ ಶಾನುಭಾಗ್‌, ಉಮಾ ರಾಮಚಂದ್ರ ಭಂಡಾರ್ಕರ್‌, ಉಷಾ ವಸಂತ ಕಂಡ್ಲೂರು, ಆಶಾ ಕುಶಾಲ್‌ ಶೆಟ್ಟಿ ಭಟ್ಕಳ ಭಾಗವಹಿಸಲಿದ್ದಾರೆ.

ಸೆ.30ಕ್ಕೆ ಶ್ರೀ ಕೃಷ್ಣ ಸಂಧಾನ, ಅ.1ರಂದು ಭೀಷ್ಮ ಸೇನಾಧಿಪತ್ಯ, ಗೀತೋಪದೇಶ, ಅ.2ರಂದು ಕರ್ಣಭೇದನ, ಅ.3ರಂದು ಮಹಾಬ್ರಾಹ್ಮಣ, ಅ.4ರಂದು ಶಲ್ಯ ಸಾರಥ್ಯ, ನಿಷðಮಣ, ಅ.5ರಂದು ಶ್ರೀರಾಮಾಂಜನೇಯ, ಅ.6ರಂದು ಶರಸೇತುಬಂಧ ತಾಳಮದ್ದಳೆ ನಡೆಯಲಿದೆ ಎಂದು ಧಾರೇಶ್ವರ ಯಕ್ಷಬಳಗದ ಮುಖ್ಯಸ್ಥ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next