Advertisement

ಮುಂಜಾಗೃತಾ ಕ್ರಮ ಕೈಗೊಳ್ಳಿ: ಶಾಸಕ

11:07 PM May 11, 2020 | Sriram |

ಮೂಡುಬಿದಿರೆ: ಮಳೆಗಾಲ ಪ್ರಾರಂಭವಾಗುವ ಮೊದಲೇ ಮಲೇರಿಯಾ, ಡೆಂಗ್ಯೂ ಮೊದಲಾದ ರೋಗಗಳು ಹರಡದಂತೆ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್‌ ಸೂಚಿಸಿದರು.

Advertisement

ಪುರಸಭೆ ಕಾರ್ಯಾಲಯದಲ್ಲಿ ಸೋಮ ವಾರ ಅಧಿಕಾರಿಗಳು, ಚುನಾಯಿತ ಸದಸ್ಯರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸದಸ್ಯರು ತಂತಮ್ಮ ವಾರ್ಡ್‌ಗಳಲ್ಲಿ ಚರಂಡಿಗಳ ಹೂಳೆತ್ತುವ, ನೀರು ನಿಂತು ಸೊಳ್ಳೆ ಉತ್ಪಾದನೆಯಾಗುವ ಕಟ್ಟಡಗಳ ತಾರಸಿ ಮತ್ತಿತರ ಜಾಗಗಳನ್ನು ಗುರುತಿಸಿ ಪುರಸಭೆಗೆ ಕೂಡಲೇ ವರದಿ ಮಾಡಬೇಕು ಎಂದರು.

ಮುಖ್ಯಾಧಿಕಾರಿ ಇಂದು ಎಂ. ಕೋವಿಡ್‌-19 ಕುರಿತು ಕೈಗೊಳ್ಳಲಾದ ಮುಂಜಾಗೃತಾ ಕ್ರಮಗಳ ಬಗ್ಗೆ ವಿವರಣೆ ನೀಡಿದರು. ಪುರಸಭಾ ಪರಿಸರ ಅಭಿಯಂತರೆ ಶಿಲ್ಪಾ ಎಸ್‌. ಮಾತನಾಡಿ, ಅನೇಕ ಕಟ್ಟಡ ಕಾಮಗಾರಿ ಅರ್ಧದಲ್ಲೇ ನಿಂತಿದ್ದು ಇಲ್ಲೆಲ್ಲ ಸೊಳ್ಳೆ ಉತ್ಪತ್ತಿ ಆಗುವ ಸಾಧ್ಯತೆ ಇದೆ. ಇವುಗಳನ್ನೆಲ್ಲ ಸ್ವಚ್ಛಗೊಳಿಸಲಾಗುವುದು ಎಂದರು.

ಗುತ್ತಿಗೆದಾರರ ಹಿಂದೇಟು
ಒಂದು ಲಕ್ಷ ರೂ. ಕಾಮಗಾರಿಗೆ ಟೆಂಡರ್‌ ಸಲ್ಲಿಸಲು ರೂ. ಐದು ಸಾವಿರ ಕಡ್ಡಾಯವಾಗಿ ಠೇವಣಿ ಇಡಬೇಕಾಗಿದ್ದು, ಅದನ್ನು ವಾಪಸ್‌ ಪಡೆಯಲು 2-3 ವರ್ಷಗಳೇ ಕಳೆಯುವು ದರಿಂದ ಗುತ್ತಿಗೆದಾರರು ಹಿಂದೇಟು ಹಾಕು ತ್ತಿದ್ದಾರೆ ಎಂದು ಸದಸ್ಯ ಸುರೇಶ್‌ ಹೇಳಿದರು.

ಮೆಸ್ಕಾಂನವರು ಒಮ್ಮೆಲೇ ಎರಡು ತಿಂಗಳ ಬಿಲ್‌ ಕೊಡುವಾಗ ಸ್ಲ್ಯಾಬ್ ‌ಗಳ ಲೆಕ್ಕದಲ್ಲಿ ಬಳಕೆ ದಾರರಿಗೆ ದುಪ್ಪಟ್ಟು ಬಿಲ್‌ ಬರು ವಂತಾಗಿದೆ. ಇದರ ಬದಲು ಪ್ರತಿ ತಿಂಗಳ ಬಿಲ್‌ ತಯಾರಿಸಿ ಪ್ರತ್ಯೇಕವಾಗಿ ನೀಡು ವುದೇ ಸೂಕ್ತ ಎಂದು ಸದಸ್ಯ ಪ್ರಸಾದ್‌ ಕುಮಾರ್‌ ಹೇಳಿದಾಗ, ಮೆಸ್ಕಾಂನ ಗಮನ ಸೆಳೆದು ಗ್ರಾಹಕರಿಗೆ ತೊಂದರೆ ಯಾಗದಂತೆ ನೋಡಿಕೊಳ್ಳ ಲಾಗುವುದು ಎಂದು ಶಾಸಕರು ಹೇಳಿದರು.

Advertisement

ಅಲಂಗಾರು ಕಡಲಕೆರೆ ಕೈಗಾರಿಕಾ ಪ್ರಾಂಗಣದಲ್ಲಿ ಚರಂಡಿಗಳಲ್ಲೆ ಕೊಳಚೆ ನೀರು ನಿಲ್ಲುವಂತಾಗಿದೆ. ಈ ಬಗ್ಗೆ ಕ್ರಮ ಜರಗಿಸ ಬೇಕಾಗಿದೆ ಎಂದು ಸದಸ್ಯ ನಾಗರಾಜ್‌ ಪೂಜಾರಿ ಒತ್ತಾಯಿಸಿದರು. ಕೂಡಲೇ ಸ್ಥಳ ಪರಿಶೀಲಿಸಿ ಎಂದು ಶಾಸಕರು ಸೂಚಿಸಿದರು.

ಕಾರ್ಡ್‌ ಇಲ್ಲದವರಿಗೂ ಪಡಿತರ
ಕಾರ್ಡ್‌ ಇಲ್ಲದವರಿಗೆ ಪಡಿತರ ನೀಡುವ ಬಗ್ಗೆ ಜೊಸ್ಸಿ ಮಿನೇಜಸ್‌, ಪಿ.ಕೆ. ಥಾಮಸ್‌ ಶಾಸಕರಲ್ಲಿ ವಿನಂತಿಸಿದಾಗ, ಕಾರ್ಡ್‌ಗಾಗಿ ಅರ್ಜಿ ಸಲ್ಲಿಕೆಯಾದ ರುಜುವಾತು ಇದ್ದವರಿಗೆ ಪಡಿತರ ನೀಡಲಾಗುವುದು ಎಂದು ಶಾಸಕರು ತಿಳಿಸಿದರು.

ಅನಿವಾರ್ಯ ಸಭೆ
ಚುನಾವಣೆ ನಡೆದು ವರ್ಷವಾಗುತ್ತ (ಮೇ 27)ಬಂದರೂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ, ಸದಸ್ಯರ ಪ್ರಮಾಣವಚನ ಸ್ವೀಕಾರ ಯಾವುದೂ ನಡೆದಿಲ್ಲ. ಹಾಗಿದ್ದರೂ ಅನಿವಾರ್ಯವಾಗಿ ಈ ಸಭೆಯನ್ನು ನಡೆಸಲಾಗಿದ್ದು ಎಲ್ಲ ಚುನಾಯಿತ ಸದಸ್ಯರೂ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next